ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೫೧ ನು.” ಎಂದು ಕಂಬನಿಯಂ ತುಂಬುತ್ತಿರಲು; ಸಾನುಮತಿಯು ( ರಾಯನಾಡುವ ವಾಕ್ಯದಿಂದಾಶಕುಂತಲೆಯು ಪೂ ರ್ಣಗರ್ಭಿಣಿಯಾಗಿರುವಳೆಂದು, ತೋಡುವುದು, ಹಾಗಾದಲ್ಲಿ ಈ ರಾಯಂಗೆ ಧರ್ಮಾ 'ನಾ ನಾಶರಹಿತನಾದ ಪುತ್ರನು ಇಟ್ಟುವನು. ” ಎಂದು ನುಡಿಯುತ್ತಿರಲು ಆ ವೊತ್ತಿನಲ್ಲಿ ನಿಂದಿರ್ದ ಚತುರಿಕೆಯು ರಾಯನಾಕಾರವಂ ನೋಡಿ ದ್ವಾರಪಾಲಕಿಯಂ ಪ್ರತ್ಯೇಕವಾಗಿ ಕರೆದು ಎಲ್‌ ಸಖಿಯೇ, ಧನಮಿತ್ರನು ಪುತ್ರರಹಿತನೆಂದು ಕೇಳಿದ್ದಿ೦ ತನಗೂ ಪುತ್ರರಿಲ್ಲ ಎಂದು ಅಧಿಕವಾದ ಚಿಂತಾ ಕ್ರಾಂತನಾಗಿರುವನು. ನೀನು ಜಾಗ್ರತೆಯಾಗಿ ಪೋಗಿ ಮೇಘಪ್ರತಿಚ್ಚಂದವೆಂಬ ಉಪ್ಪರಿಗೆಯಲ್ಲಿ ಪೂಜ್ಯನಾದ ಮಾಂಡವ್ಯನು ಭಾವಚಿತ್ರದ ಪಟವಂ ತೆಗೆದುಕೊಂಡು ಪೋಗಿರುವನು. ಅವನಂ ರಾಯನ ದುಃಖಸಮಾಧಾನವಂ ಗೆಯ್ಯುವುದಕ್ಕೋಸುಗ ಕರೆದುಕೊಂಡು ಬರುವುದು” ಎನ್ನಲು; ದ್ವಾರಪಾಲಕಿಯು ಸಂತೋಷಯುಕ್ತಳಾಗಿ, ಸಮಯಕ್ಕೆ ಸರಿಯಾದ ವಾಕ್ಯವಂ ಪೇಳಿರುವೆ ಎಂದು ನುಡಿದು ವಿದೂಷಕನಿರುವ ಉಪ್ಪರಿಗೆಯಂ ಕುತು ಪೋಗಲು; ರಾಯನು-- ಪುತ್ರವಿಹೀನನೆಂದು ಸಂಶಯವಂ ಪೊಂದುತ್ತಿರುವ ಎನ್ನ ಪಿತೃದೇವತೆಗಳಿಗೆ ಕಾಲಾನಂತರದಲ್ಲಿ ವೇದೋಕ್ತ ತಿಲೋದಕ ಮೊದಲಾದ ಉತ್ತರ ಕ್ರಿಯೆಯನ್ನು ಎನ್ನ ವಂಶದಲ್ಲಿ ಯಾವ ಪುರುಷನು ಪುಟ್ಟಿ ಮಾಡುವನೋ ತಿಳಿಯದು? ಅದಲ್ಲದೆ ಆ ಪಿತೃದೇವತೆಗಳು ಪುತ್ರಾಭಾವದಿಂ ದುಃಖವಂ ಪೊಂದುತ್ತಿರುವ ಎನ್ನ ನಿರ್ಮಲವಾದ ಕಣ್ಣೀರಂ ಪಾನವಂ ಗೆಯುವರೋ ತಿಳಿಯದು ಎಂದು ಮರ್ಧೆ ಯುಂ ಪೊಂದಿ, ಪಪ್ಪಪರಾಗದಿಂ ಪೂರಿತವಾದ ಮಾಧವೀಮಂಟಪದ ಭೂಮಿಯಲ್ಲಿ ಬೀಳಲು ; ಆ ಚತುರಿಕೆಯು ಅದಂ ಕಂಡು, ಅತ್ಯಂತ ಭಯಭ್ರಾಂತಳಾಗಿ, ಆ ರಾಯಂಗೆ ಬೀಸಣಿಗೆ ಮುಂತಾದ ಉಪಚಾರವಂ ಗೆಯ್ದು ಸಂತೈಸುತ್ತಿರಲು ; ಸಾನುಮತಿಯು ರಾಯನ ನೋಡಿ ಹಾಹಾಕಾರವಂ ಗೆಯ್ಯು - ಮಹಾ ಪ್ರಮಾದ ಬಂದುದು! ಮುಂದೆ ಗತಿಯೇನು! ಈರಾಯನು ದೀಪವಿದ್ದರೂ ಒಂದು ಪದಾರ್ಥದ ಮರೆಯಿಂ ಅಂಧಕಾರವನ್ನು ಅನುಭವಿಸುತ್ತಿರುವನು. ಆ ಶಕುಂತಲೆ ಯೊಡಗೂಡಿಸುವಂತೆ ಮಾಡುವೆನು, ಮತ್ತು ಯಜ್ಞ ಭಾಗವು ಸಂಗ್ರಹಿಸುವು ದಕ್ಕೋಸುಗ ಬಂದಿರ್ದ ದೇವತೆಗಳು ರಾಯನಂ ಕುತು- ಎಲೈ ರಾಯನೇ,