ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭ -ಶಾಕುಂತಲನಾಟಕ ನವೀನಟೀಕೆಚತುರ್ಥಕಲ್ಲೋಲದ ಚತುರ್ಥತರಂಗಂ. ಅನಂತ ರದಲ್ಲಿ ರಾಜಾಧಿರಾಜನಾದ ದುಷ್ಯಂತಮಹಾರಾಯನು ನವರತ್ನ ಕಲಶಂಗಳಿಂ ಸಾಲಾಗಿ ಮೇಲಾಗಿ ಮೆರೆಯುತ್ತಿರುವ ಕಿ೬ಗಂಟೆಗಳಿ, ಸುತ್ತಲೂ ಮೊತ್ತವಾಗಿ ಸೇರಿಸಿರುವ ಪತಾಕೆಗಳಿ೦, ವಾಯುವೇಗವನೊಳಕೊಂಡು ಮನೋ ವೇಗದ ಮಹಿಮೆಯಂ ಮಟ್ಟು ಗೆಯ್ಯುತ್ತಿರುವ ಜಾತ್ಯತ್ವಗಳಿ೦ ಮನೋಹರವಾದ ಶಚೀಪತಿಯ ರಥವನ್ನಾ ರೋಹಣವಂ ಗೆಯ್ಯಲು; ಮಾತಲಿಯು ಅಶ್ವಗಳನ್ನು ಅಂತರಿಕ್ಷವನ್ನಾಕ್ರಮಿಸುವಂತೆ ಕಶಾಗ್ರದಿಂ ಸಂಜ್ಞೆಯಂ ಗೆಯ್ದಿ ದಮಾತ್ರದಿಂದಲೇ ಆ ಕುದುರೆಗಳು ಸ್ವರ್ಗಮಾರ್ಗವನ್ನನುಸರಿಸಿ ಪೋಗುತ್ತಿರಲು; ರಾಯನು ಅಲ್ಲಲ್ಲಿರುವ ಪರ್ವತ, ಪುರ, ಪುಣ್ಯ ಕ್ಷೇತ್ರ ಮೊದಲಾದ ಸ್ಥಾನಂ ಗಳಂ ನೋಡುತ್ತ ಬರಲು-ಮುಂಭಾಗದಲ್ಲಿ ಮನೋವಾಕ್ಕುಗಳಿಗೆ ಅಗೋಚರವಾದ ಮಹಿಮೆಯಿಂದೊಪ್ಪುತ, ಸಗರಪುತ್ರರುಗಳಿಗೆ ಸ್ವರ್ಗಸೋಪಾನರೂಪಗಳಾದ, ತನ್ನ ತೀರದಲ್ಲಿ ಸೇರಿ ಬೆಳೆದಿರುವ ಸುವರ್ಣಕಮಲಗಳಿಂದ ಹೊಸೂಸುತ್ತಿರುವ ಮಕರಂ ದಧಾರೆಗಳಂ ಪೀಜಿಮದವೇ ಝಂಕಾರವಂ ಗೆಯ್ಯುತ್ತಿರುವ ತುಂಬಿಗಳ ಗಾನ ಸ್ವರವಂ ಕೇಳುತ್ತ ತಮ್ಮ ಚಂಚಪುಟಗಳಿಂದ ಸ್ವರ್ಣಮೃಣಾಳಪಂಚ ಕಾಕಾರವಂ ಗೆಯ್ಯುತ್ತ ತಮ್ಮ ಪಕ್ಷವಿಕ್ಷೇಪಗಳಿಂ ಪುಟ್ಟಿದ ಒಲಶೀಕರಗಳಿಂದ ಗಗನಮಾ ರ್ಗದಲ್ಲಿ ಮಂಜಿನ ಮಳೆಗಾಲದ ಶಂಕೆಯ ಪಟ್ಟಿ ಸುತ್ತ, ಶೈತ್ಯ, ಸೌರಭ್ಯ, ಮಾಂ ದ್ಯದಿಂದೊಡಗೂಡಿ ಚಲಿಸುತ್ತಿರುವ ಮಕ್' ಗಾಳಿಯಿಂ ಹೊಆಸಸಿದ ಕಮಲಪರಾ ಗಗಳಿಂ ಹೊಂಬಣ್ಣ ಮಾದ ಮೈಸಿರಿಯಿಂದೊಪ್ಪುತಿರುವ, ಅನೇಕ ರಾಜಹಂಸೆಗಳಿಂದ ಭಾಸುರಳಾಗಿ, ಭೂ ಲೋಕದ ಜನರುಗಳಂತೆ ಸ್ವರ್ಗಲೋಕಸ್ಥಿತರಾದ ಇಂದ್ರಾದಿ ದೇವತೆಗಳಂ ಪಾವನರಂ ಮಾಡಲೋಸುಗ ಬಂದಿರುವಳೋ ಎಂಬಂತೆ, ಮತ್ತು ತನ್ನ ಮಹತ್ಯೆಯಿಂದ ಸಮಸ್ತ ಜನರ ಮಹಾಪಾತಕಂಗಳಂ ಪರಿಹರಿಸಿ ಸ್ವರ್ಗಲೋಕ ವನ್ನೇ'ಸಿದ ಸಗರಪುತ್ರರು ಮೊದಲಾದವರ ಯೋಗಕ್ಷೇಮವಂ ನೋಡಲೋಸುಗ ಬಂದಿರುವಳೋ ಎಂಬಂತೆ ನಿರ್ಮಲೋದಕದಿಂ ಸಂಪೂರ್ಣಳಾಗಿ ಹರಿಯುತ್ತಿರುವ ದೇವಗಂಗೆಯಂ ಕಂಡು, ಮನದಲ್ಲಿ ನಮಸ್ಕರಿಸಿ, ಅಲ್ಲಲ್ಲಿ ಮೊಳೆದೋ' ಏ'ಬ ರುವ ಯೌವನದಿಂದೊಪ್ಪುತ್ತಿರುವ ದೇವಕಾಂತೆಯರು ತಂಪುದೋಕುವ ಮಂದಾರ