ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ -ಕರ್ಣಾಟಕ ಕಾವ್ಯಕಲಾನಿಧಿ ನೋಡು. ಸ್ವರ್ಗವಾಸಿಗಳಾದ ದೇವತೆಗಳು ಕಲ್ಪವೃಕ್ಷದ ತ್ವಕ್ಕುಗಳಲ್ಲಿ ದೇವ ಕಾಂತೆಯರ ದೇಹದಿಂ ಬಿದ್ದಿರುವ ಕುಂಕುಮಗಳ ಲೇಶದಿಂದ ಗಾನವಂ ಗೆಯ್ಯ ವುದಕ್ಕೆ ಯೋಗ್ಯವಾಗುವಂತೆ ಶೋಭನಾರ್ಥಬಂಧಬಂಧುರಗಳಾಗುವಂತೆ ರಾಕ್ಷಸ ಜಯೋಪಾಯ ಮೊದಲಾದ ನಿನ್ನ ಚರಿತ್ರೆಯಂ ಯೋಚನೆಮಾಡಿ, ಅಕ್ಷರಗಳಿಂದ ಬರೆಯುತ್ತಿರುವರು ” ಎಂದು ನುಡಿಯಲು ; ರಾಯನು ಎಲೈ ಮಾತಲಿಯೇ, ಆದಂತಿರಲಿ, ನಾನು ನಿನ್ನೆ ಸ್ವರ್ಗಕ್ಕೆ ಬರುವಾಗ್ಗೆ ರಾಕ್ಷಸಸಂಹಾರದಲ್ಲಿ ಉತ್ಸುಕನಾಗಿದ್ದ 2೦ ಚೆನ್ನಾಗಿ ಸ್ವರ್ಗಮಾ ರ್ಗವಂ ನೋಡಲಿಲ್ಲ. ಈಗ ನಾವು ಸಪ್ತವಾಯುಮಾರ್ಗಗಳಲ್ಲಿ ಯಾವ ಮಾರ್ಗ ದಲ್ಲಿರುವೆವು ಪೇಳು ಎಂದು ನುಡಿಯಲು ; ಮಾತಲಿಯು-“ ಯಾವ ವಾಯುವು ಅಂತರಿಕ್ಷಕ್ಕೆ ಅಲಂಕಾರವಾಗಿ ರುವ ಗಂಗೆಯಂ ವಹಿಸುತ್ತ, ನಕ್ಷತ್ರಂಗಳು ಮೊದಲಾದ ತೇಜಸ್ಸುಗಳು ಎಲ್ಲಾ ಕಡೆ ಯಲ್ಲೂ ಪ್ರಚಾರವ ಗೆಯ್ಯುತ್ತಿರುವುದೋ, ಸೂರ್ಯಕಾಂತಿಯಿಂ ನಿಸ್ತಮ ವಾದ ಸರಿವಹವೆಂದು ಹೆಸರುಳ್ಳ ಆ ವಾಯು ಮಾರ್ಗವೆಂದು ಬಲ್ಲವರು ಹೇಳುತ್ತಿ ರುವರು ” ಎನಲು ; ರಾಯನು-ಆ ವಾಯುಮಂಡಲಕ್ಕೆ ಬಂದಿರುವುದಿ೦ದಲೇ ಒಳಗೆ ಹೊ ಅಗೆ ಇರುವ ಇಂದ್ರಿಯಗಳಿಂ ಯುಕ್ತನಾಗಿ ಹೃದಯವಾಸಿಯಾದ ಪರಮಾತ್ಮನು ಅಧಿಕಸಂತೋಷವಂ ಪೊಂದುತ್ತಿರುವನು ” ಎಂದು ನುಡಿದು, ರಥಚಕ್ರವಂ ನೋಡಿ, * ಎಲೈ ನಾರಥಿಯೇ, ಈಗ ನಾವು ಮೇಘಮಂಡಲದಿಂ ಕೆಳಕ್ಕೆ ಇಳಿದಿರುವೆವು ? ಎನಲು ; ಮಾತಲಿಯು_* ಎಲೈ ಸ್ವಾಮಿಯೇ, ಮೇಘಮಾರ್ಗ ದಿಂದಿಳಿದ ಸಂಗ ತಿಯು ಹೇಗೆ ನಿನಗೆ ತಿಳಿದುದು ? ” ಎನಲು ; ರಾಯನು_ ಇದೋ, ಗಾಲಿಗಳ ಸಂದಿಗಳಲ್ಲಿ ಸಂಚರಿಸುವ ಚಾತಕಪಕ್ಷಿ ಗಳಿಂದಲೂ, ಸೂರ್ಯನ ಕಾಂತಿಯಿಂ ವ್ಯಾಪ್ತವಾಗಿರುವ ಅಶ್ವಗಳಿಂದಲೂ, ಜಲ ಕಣಗಳಿc ನನೆದಿರುವ ಗಾಲಗಳ ಅಚ್ಚುಳ್ಳ ನಮ್ಮ ಈ ರಥವು ಜಲಗರ್ಭಗಳಾದ ಮೇಘ೦ಗಳ ಮೇಲುಗಡೆಯಲ್ಲಿ ಪೋದ ರೀತಿಯಂ ಸೂಚನವಂ ಗೆಯ್ಯುತ್ತಿರುವುದು' ಎನಲು ; ಮಾತಲಿಯು~ (ಎಲೈ ಸ್ವಾಮಿಯೇ, ಈ ರಥವು ಅತಿಶಯವಾದ ವೇಗ ಶಾಲಿಯಾದುದಲ್ಲ ಒಂದು ನಿಮಿಷಮಾತ್ರದಲ್ಲಿಯೇ ನಿನ್ನ ದೇಶವಂ ಸೇರುತ್ತಿರು ವುದು” ಎನ್ನಲು;