ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧b -ಕರ್ಣಾಟಕ ಕಾವ್ಯಕಲಾವಿಧಿ ಝಣತ್ಕಾರವಂ ಬೀಗುತ್ತ ಚಾಮರಂಗಳಂ ಪುಷ್ಪದ ಬೀಸಣಿಗೆಗಳಂ ಬೀಸುತ್ತಿರಲು ಮಂದಮಾರುತವನ್ನನುಭವಿಸುತ್ತ, ದೇಶಾಧೀಶ್ವರರು ತಂದ ಕಪ್ಪವನ್ನೊಪ್ಪಿಸಿಕೊ ಳ್ಳುತ್ತ, ಒದ್ದೋಲಗವಂ ಗೊಳ್ಳುತ್ತಿರಲು ಆರ್ಯಪಿಶುನನೆಂಬ ಆ ದುಷ್ಯಂತರಾಯನ ಮುಂತ್ರಿಯು ರಾಯನ ಸಮಾಸವಂ ಸೇರಿ ಕರಗಳು ಮುಗಿದು, “ ಎಲೈ ಸ್ವಾಮಿಯೆ ! ಅರಣ್ಯದಲ್ಲಿ ದುಷ್ಟ ಮೃಗಂಗಳು ವೃದ್ಧಿಯಂ ಪೊಂದಿ ಅನೇಕ ಪ್ರಕಾರವಾಗಿ ಪ್ರಜೆಗಳು ಬಾಧಿ ಸುತ್ತಿರುವುದೆಂತಲೂ, ಮತ್ತು ದುಷ್ಟ ರಾಕ್ಷಸರುಗಳು ಪುಣ್ಯಾಶ್ರಮಗಳಲ್ಲಿ ವಾಸವಂ ಗೆಯ್ಯುತಿರವ ಋಷಿಗಳು ಮಾಳ್ವ ಯಜ್ಞಂಗಳಿಗೆ ನಿಮ್ಮ೦ಗಳನ್ನು ಂಟುಮಾಡುತ ಕಾಷಾಯಕಮಂಡಲುಗಳಂ ಭೇದಿಸುತ್ತ ಆ ಋಷಿಗಳಿಗೆ ಹಿಂಸೆಯನ್ನುಂಟು ಮಾಡುವರೆಂತಲೂ, ಚಾರರು ಬಂದು ಹೇಳಿರುವುದು ವಿಜ್ಞಾಪನೆಯಂ ಗೈದಿರು ವೆನು. ಪ್ರಭುಗಳಾದ ತಮ್ಮಿಂದ ಆಶ್ರಮವಾಸಿಗಳಾದ ಋಷಿಗಳೂ ಸಮಸ್ತ ಪ್ರಜೆಗಳೂ ಸಹ ನಿರ್ಭಯರಾಗಿ ಸೌಖ್ಯವಂ ಹೊಂದಬೇಕಾಗಿರುವುದಿ೦ ಸ್ವಾಮಿ ಯವರ ಚಿತ್ರಕ್ಕೆ ವಿದಿತವಿರಲೆಂದು ವಿಜ್ಞಾಪಿಸಿರುವೆನು ” ಎಂದು ಬಿಸಲಾ ವಾಕ್ಯವಂ ಕೇಳ ರಾಯನು ರಾಕ್ಷಸರುಗಳಂ ದುಷ್ಟ ಮೃಗಂಗಳಂ ಸಹ ನಿಶ್ಲೇಷ ವಾಗಿ ನಿರ್ಮೂಲನಂ ಗೆಯ್ಯಬೇಕೆಂದು ಮನದಲ್ಲಾಲೋಚಿಸಿ, ಎಲೆ ಮಂತ್ರಿಯೆ, ಕೆಲವು ಸೇನಾ ಜನರು ಬೇಟೆಯ ಸಾಮಗ್ರಿಯಿಂ ಸನ್ನದ್ದರಾಗಿ ನಾನು ಬರುವುದಕ್ಕೆ ಮೊದಲೇ ಪೋಗಿ ಮೃಗಸಮೂಹವಿರುವ ಅರಣ್ಯವನ್ನಾಕ್ರಮಿಸಿ ಮೃಗಂಗಳು ಚದರಿಪೋಗದಂತೆ ಜಾಗರೂಕರಾಗಿ ಕಾದುಕೊಂಡು ಇರಲಿ ! ? ಎಂದು ಅಪ್ಪಣೆಯನ್ನೀಯಲಾಮಂತ್ರಿಯು ಅದೇ ರೀತಿಯಿಂದಾಜ್ಞೆಯಂ ಕೊಡಲಾ ಸೇನಾ ಜನರು ಬಲೆಗಳು ಕಾಲುಕ ಬೇಟೆನಾಯಿ ಭಲ್ಲೆ ತುಪಾಕಿ ಹರಿಗೆ ಶಕ್ತಿ ಕಠಾರಿ ಮೊದಲಾದ ಪದಾರ್ಥಂಗಳಂ ಸನ್ನಾಹ ಗೊಳಿಸಿಕೊಂಡು ಆರಣ್ಯಕ್ಕೆ ಹೋಗಲು ಅಷ್ಟ ಅಲ್ಲೇ ಆದುಷ್ಯಂತರಾಯನು ಜಯಭೇರಿ ಕಹಳೆ ಮೊದಲಾದ ವಾದ್ಯ ಧ್ವನಿಗಳು ಎಂಟು ದೆಸೆಯಂ ವ್ಯಾಪಿಸುತ್ತಿರಲು ಸಿಂಹಾಸನದಿಂದೆದ್ದು ಬೇಟೆಗೆ ಅನು ಗುಣವಾದ ಆಯುಧಗಳಿಂದ ಆಭರಣವಸ್ತ್ರಂಗಳಿಂದಲಂಕೃತನಾಗಿ ವಾಯುವೇ ಗವಂ ವಂಚಿಸಿ ನಡೆಯುವ ಜಾತ್ಯಶ್ವಗಳಿಂದ ರಮ್ಯವಾಗಿ ರತ್ನ ಮಯ ಕಿಳಗಂಟೆ ಗಳಿಂದ, ಉನ್ನತಧ್ವಜದಂಡದಿಂದಲೂ ಮಂಡಿತವಾದ ರಥವನ್ನೇ ಚತುರಂಗ ಬಲಸಮೇತನಾಗಿ ಅರಣ್ಯವಂ ಕು ತು ತೆರಳುತಿರಲು .