ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * -ಶಾಕುಂತಲನಾಟಕ ನವೀನಟೀಕೆ ನ೫ ತು ದೋಷಂಗಳಂ ದೂರೀಕರಿಸಿ, ರಸಿಕಜನ ಹೃದಯಾನಂದಕರವಾಗುವಂತೆ ನಾಟಕ ಪ್ರಹಸನ ಘಟಿಕಾಶತಕ ಭಾಣ ಮೊದಲಾದ ಕವಿತ್ತವಂ ಪೇಳುವ ಕವಿಸಾ ರ್ವಭೌಮರಿಂ ಭೂಷಿತವಾಗಿ ; ಮತ್ತೊಂದೆಡೆಯಲ್ಲಿ ಕಲ್ಯಾಣಿ ಮಾಳವಿ ಮೋಹನ ರೇಗುತ್ತಿ ಮಧ್ಯಮಾವತಿ ಕಾಂಬೋಧಿ ಪುನ್ನಾಗ ವರಾಳಿ ಮೊದಲಾದ ಭೇದವಂ ತಿಳಿದು ದ್ರುತವಿಲಂಬಮಧ್ಯಮವೆಂಬ ಕಾಲತ್ರಯವನ್ನನುಸರಿಸಿ, ಮೂರ್ಛನಾ ಕ್ರಮವಂ ತಿಳಿದು ತಾಳವಂ ಮೇಳೆಸಿ, ಕೇಳುವರ ಕಿಎಗಳೆ ಹಿತವಾಗುವಂತೆ ನಯವಾಗಿ ಪಾಡುವ ಗಾಯಕ ವೈಣಿಕರ ಗಾನಸ್ವರದಿಂದ ರಮ್ಯವಾಗಿ; ಮತ್ತೊಂದು ಸ್ಥಾನದಲ್ಲಿ ಅಂಗ ವಂಗ, ಕಳಿಂಗ ಕಾಂಭೋಜಾದಿ ದೇಶಗಳಿಂ ಬಂದು ದುಷ್ಯಂತ ರಾಯನ ಪಾದದರ್ಶನವಂ ಗೈಯುವೆವೆಂದು ಕಪ್ಪಂಗಳಂ ಕರಗಳಲ್ಲಿ ಹಿಡಿದು ಸಮಯವನ್ನಿರೀಕ್ಷಿಸುತ್ತಿರುವ ದೊರೆಗಳಿಂ ನಿಬಿಡಿತಮಾಗಿ ; ಒಂದು ಸ್ಥಳದಲ್ಲಿ ಮನ್ಮಥನ ಭ್ರಮರಶಿಂಜಿನಿಯಂ ಸಡಲಿಸಿ ನಿಲ್ಲಿಸಿದ ಧನುಗಳೋ ಎಂಬಂತೆ ನಿಡಿ ದಾದ ಜಡೆಗಳಿಂದೊಮ್ಮ ನಾನಾವಿಭೂಷಣಗಳಿಂ ಭೂಷಿತರಾಗಿ, ತಮ್ಮ ಬೆಡಗು ಗಳಿಂ ಸಭಾಜನರಂ ಚಿತ್ರಾರ್ಪಿತಪ್ರತಿಮೆಗಳಂತೆ ಮಾಡುತ್ತ, ತಮ್ಮ ಕಡೆಗಣ್ಣುಗಳ ಕುಡಿನೋಟಗಳೇ ಮಹಲೋಕಂಗಳಂ ಸೂಚನೆ ಗೊಳ್ಳುವಲ್ಲಿ, ಮಾರನಿಗೆ ನಿಸ್ಸಾರ ವಾದ ಈ ಪುಷ್ಪಬಾಣಂಗಳಿಂ ಪ್ರಯೋಜನವೇನೆಂದು ಚೆಲ್ಲುವರೋ ಎಂಬಂತೆ ಪುಷ್ಪಾಂಜಲಿಗಳಂ ವಿರಚಿಸಿ, ಕಲಕಂಠದ ಕಂಠನಾದದ ಕಲೆಯನ್ನನುಸರಿಸಿ ಕಂಠದಲ್ಲಿ ಗಾನವಂ ಹಸ್ತಂಗಳಲ್ಲಿ ಅಭಿನಯವಂ ನೇತ್ರಂಗಳಲ್ಲಿ ಅನುರಾಗಮಂ ಪುರ್ಬುಗಳಲ್ಲಿ ವಕ್ರತೆಯಂ ಪಾದಂಗಳಲ್ಲಿ ತಾಳವನ್ನವಲಂಬಿಸಿ ಮದ್ದಲೆಯ ಮುದ್ದಾದ ಸದ್ದಿಗೆ ಸರಿಯಾಗಿ ಜತಿಶ್ರುತಿಗಡಿ ನಾಟ್ಯವಂ ಗೆಯ್ಯುವ ವೇಶ್ಯಾಂಗನೆಯರಿಂ ರಮ ಣೀಯವಾಗಿ; ಮುಂಭಾಗದಲ್ಲಿ ಸಂಭ್ರಮದಿಂ ಜಯವಿಜಯೀಭವ ಎಂದು ಬಿರುದು ಪದ್ಯಗಳಂ ಅಧಿಕ ಸ್ವರದಿಂ ತರವೆತ್ತಿ ಪೊಗಳುವ ಭಟರುಗಳ ಸಮೂಹದಿಂ ಭೂಷಿತ ವಾಗಿ ; ಮತ್ತು ಅನೇಕ ದೇಶಂಗಳಂ ಜಯಿಸಿ ಅಶ್ವ ರಥ ಗಜ ಪದಾತಿಗಳೆಂಬ ಚತುರಂಗ ಸೇನೆಯಿಂ ಕೂಡಿದ ಶೂರಾಗ್ರೇಸರರಾದ ಸೇನಾನಾಯಕರುಗಳಿಂ; ಇನ್ನು ಅನೇಕರಾದ ಹಾಸ್ಯಗಾಹಿರು ಸೇವಕ ಜನರು ಮೊದಲಾದವರಿಂ ಸುತ್ತಲೂ ಸುಂದರವಾಗಿರಲು-ಆ ದುಷ್ಯಂತರಾಯನು ಇಂತಿನಂತಸೌಭಾಗ್ಯ ಸಂಪೂರ್ಣ ವಾದ ಸಭಾಮಧ್ಯದಲ್ಲಿ ಕೋಟಿಸೂರ್ಯಪ್ರಕಾಶಮಾನವಾಗಿ ತೇಜೋರಾಶಿಯಂತೆ ರಾಜಿಸುತ್ತಿರುವ ರತ್ನ ಸಿಂಹಾಸನದಲ್ಲಿ ಕುಳಿತು ಹಿಂಭಾಗದಲ್ಲಿ ಸರಸುಂದರಿಯರ ಸೊಬಗಂ ಸೂತ ಗೆಯ್ಯುವ ಸಖಿಯರುಗಳು ಸಂಭ್ರಮಯುಕ್ತರಾಗಿ ಕರಕಂಕಣ