ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ೨೬ ಕರ್ಣಾಟಕ ಕಾವ್ಯಕಲಾನಿಧಿ ಪ್ರಥಮಕಲ್ಲೋಲದ ಚತುರ್ಥ ತರಂಗ, ಅನಂತರದಲ್ಲಿ ಆ ಶಕುಂತಲಾದೇವಿಯು ಮನ್ಮಥನಂತೆ ಅತಿಸುಂದರನಾದ ದುಷ್ಯಂತರಾಯನಂ ನೋಡಿ ಮನ್ಮಥವಿಕಾರವು ತಲೆದೋಡ ದುದಂ ತಿಳಿದು, “ ಈ ಪುರುಷನಂ ನೋಡಿದ ನಾನು ಈ ತಪೋವನವಿರೋಧಿಯಾದ ಮನ್ಮಥವಿಕಾರಕ್ಕೆ ಪಾತ್ರಳಾದೆ ?” ನೆಂದು ಆಲೋಚನೆಯಂ ಗೆಯ್ಯುತ, ಆ ರಾಯನಲ್ಲಿ ಅಭಿಲಾಷೆಯು ಇವಳಾಗುತಿರಲು; ಆರಾಯನು ಮುಂಭಾಗದಲ್ಲಿ ಕುಳಿತಿರುವ ಮಮಂದಿ ಸ್ತ್ರೀಯರಂ ಕುಚಿ' ತು-ಎಲ್‌ ಸುಂದರಾಂಗಿಯರೇ! ಸಮಾನವಾದ ರೂಪಿನಿಂದ ಗುಣದಿಂದಲೂ ವಯಸ್ಸಿನಿಂದಲೂ ಯುಕ್ತವಾಗಿರುವ ನಿಮ್ಮ ಮಿತ್ರತ್ವವು ನೋಡು ವವರಮನವನ್ನಪಹರಿಸುತಿರುವುದು ” ಎಂದು ನುಡಿಯುತಿರಲು; ಆ ಪ್ರಿಯಂವದೆಯು ಅನಸೂಯೆಯಂ ಏಕಾಂತಕ್ಕೆ ಕರೆದು.. ಎಲ್‌ ಸಬಿಯೆ, ಜಾಣೆ ಯಿಂ ಕೂಡಿದ ಗಂಭೀರವಾದ ಆಕಾರವುಳ್ಳ, ಇನ್ನೂ ಮೈ ಕೇಳು ವೆನೆಂಬ ಇಚ್ಛೆಯನ್ನು ಂಟು ಮಾಡುತಿರುವ, ಪ್ರಿಯಕರವಾದ ವಾಕ್ಯವಂ ಹೇಳುತ್ತಿ ರುವ, ಎನ್ನ ಶರೀರವಂ ಅನುರಾಗದಿಂ ಅಧಿಕವಾದುದನ್ನಾಗಿ ಮಾಡುತ್ತಿರುವ ಈ ಪುರುಷನು ಯಾವನೋ ಪ್ರಭುವಿರಬಹುದು ” ಎನಲು; ಆ ಅನಸೂಯೆಯುಸಖಿ ಪ್ರಿಯಂವದೆ, ನಿನ್ನಂತೆ ಎನಗೂ ಈ ಪುರುಷನ ವೃತ್ತಾಂತವಂ ಕೇಳುವೆನೆಂಬ ಕುತೂಹಲವಿರುವುದಾದ್ದರಿಂದದಂ ತಿಳಿಯುವುದಕ್ಕೋಸುಗ ಇವನಂ ಪ್ರಶ್ನೆಗೆ ಯುವೆ,ನೆಂದು, ಏಕಾಂತವಂ ಬಿಟ್ಟು, ರಾಯನಂ ಕುಳತು- ಎಲೈ ಪೂಜ್ಯನಾದ ಪುರುಷನೇ, ನಿನ್ನ ಮಧುರಾಲಾಪದಿಂದುಂಟಾದ ವಿಶ್ವಾಸವು ನಿನ್ನನ್ನು ಕೇಳುವಂತೆ ಎನ್ನನ್ನು ಪ್ರೇರಿಸುತಿರುವುದು. ನೀನು ಯಾವ ರಾಜಋಷಿಯ ವಂಶದಲ್ಲಿ ಪಟ್ಟಿದ್ದ ಅಂದಾವಂಶವು ಅಲಂಕೃತವಾಗಿರುವುದು? ಯಾವ ದೇಶಕ್ಕೆ ಅಧೀಶ್ವರನಾಗಿರುವೆ ? ಏನು ನಿಮಿತ್ತವಾಗಿ ನಿನ್ನ ಮೃದುವಾದ ಶರೀರವಂ ಈ ತಪೋವನದ ಸಂಚಾರ ದಿಂದುಂಟಾದ ಬಳಕೆಗೆ ಯೋಗ್ಯವನ್ನಾಗಿ ಮಾಡುತಿರುವೆ? ” ಎಂದು ನುಡಿ ಯುತಿರಲು ; ಅಷ್ಟ ಅಲ್ಲಿ ಶಕುಂತಲೆಯು, ರಾಯನಂಕು ತು ಅನಸೂಯೆಯು ಪ್ರಶ್ನೆಯಂ ಗೈದ ವಾಕ್ಯವಂ ಕೇಳಿ ಸಂತುಷ್ಟಳಾಗಿ, ತನ್ನ ಮನವಂ ಕುಕಿ ತು_ಎಲೈ ಮನವೇ, ಅಧಿಕವಾಗಿ ಬಳಲಬೇಡ, ಬಳಲಬೇಡ, ನೀನು ಈ ಪುರುಷನಂ ಕುರಿತು ಏನು - ೧