ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#೦ ಕರ್ಣಾಟಕ ಕಾವ್ಯಕಲಾನಿಧಿ ಇವಳಲ್ಲಿ ಎನ್ನ ಮನವು ಅಭಿಲಾಷೆಯುಳ್ಳುದಾಗಿರುವುದು. ಆದರೂ ಈಶಕುಂತಳೆಯ) ವನಜ್ಯೋತ್ಸೆಯೆಂಬ ಲತೆಯಂ ನೋಡಿ ಈ ಲತೆಯು ತನಗೆ ಅನುರೂಪವಾದ ಸೀಮಾ ವಿನಮರದೊಡನೆ ಕೂಡಿ ಇರುವುದು; ಅದರಂತೆ ನಾನು ಯೋಗ್ಯನಾದ ಪುರುಷನ ಪಡೆಯುವೆನೆಂದು ಹೇಳಿದ ವಾಕ್ಯವು ನಿಜವಾದುದೋ? ಅಲ್ಲದಿರೆ ವಿನೋದಕ್ಕೋ ಸ್ಕರ ನುಡಿದಿರುವಳೋ ತಿಳಿಯದೆಂದು ಎನ್ನ ಮನವು ಚಾಂಚಲ್ಯವಂ ಎರಡು ಪ್ರಕಾರ ವಾಗಿ ಪೊಂದುತಿರುವುದು ಎಂದು ಆಲೋಚನೆಯ ಗೈಯ್ಯುತ್ತಿರಲು. ಆಪ್ರಿಯಂವದೆಯು ಮುಗುಳುನಗೆಗೂಡಿ ಶಕುಂತಳೆಯ ಮುಖವಂ ನೋಡಿ ರಾಯನಿಗೆ ಅಭಿಮುಖಳಾಗಿ- ( ಎಲೈ ಪೂಜ್ಯನೇ, ನಿನ್ನಾ ಕಾರವಂ ನೋ ಡಲು ಮರಳಿ ಏನೋ ಒಂದು ವಾಕ್ಯವಂ ಪೇಳಲಿಚ್ಛೆಯುಳ್ಳವನಂತೆ ತೋರು ವುದು ” ಎನಲು; ಆ ಶಕುಂತಲೆಯು ಅಂತರಂಗದಲ್ಲಿ ಸಂತೋಷವಿದ್ದರೂ ಪ್ರಿಯಂವ ದೆಯಂ ತನ್ನ ಬೆರಳು ತೂಗಿ ಬೆದರಿಸುತ್ತಿರಲು; ಆ ರಾಯನು-ಎಲ್‌ ಪ್ರಿಯಂವದೆಯೇ, ಎನ್ನ ಭಿಪ್ರಾಯವಂ ಚೆನ್ನಾಗಿ ತಿಳಿ ದು ಹೇಳಿದೆ ಎಂದು ಶ್ಲಾಘನೆಯಂ ಗೈದು, ಈ ಶಕುಂತಲೆಯ ಸಚ್ಚರಿತ್ರಶ್ರವಣವಂ ಗೆಯ್ಯಲಿಚ್ಛೆಯುಳ್ಳ ಎನಗೆ ಇನ್ನು ಕೇಳತಕ್ಕ ಕೆಲವು ಸಂದೇಹವಾಕ್ಯವಿರುವುದು? ಎನಲು; ಆ ಪ್ರಿಯಂವದೆಯು-“ಎಲೈ ಪೂಜ್ಯನಾದವನೇ, ಇದ ಕೇಳಬೇಕು ಕೇಳ ಬಾರದೆಂದು ಸಂದೇಹವೇ ಕೆಲಸವಿಲ್ಲ. ನಾವು ತಪಸ್ವಿ ಜನವಾದ್ದರಿಂದೇನು ಇಚ್ಛೆ ಯಿದ್ದರೂ ಅದಂ ಕೇಳಬೇಕು” ಎಂದು ನುಡಿಯಲು; ಆ ರಾಯನು- ಎಲೌ ಪ್ರಿಯಂವದೆಯೇ, ಹಾಗಾದಲ್ಲಿ ಪೂರ್ವದಲ್ಲಿ ಹೇಳಿ ದ ನಿಮ್ಮ ಸಖಿಯ ವೃತ್ತಾಂತವಂ ಕೇಳಲಿಚ್ಛಿಸುವುದೇನಂದರೆ-ಈ ನಿಮ್ಮ ಶಕುಂ ತಲೆಯು ವಿವಾಹವಂ ಗೆಯುವವರೆಗೆ ಹಾವ ಭಾವ ವಿಲಾಸ ಭೂವಿಕ್ಷೇಪ ಮೊದಲಾದ ಮನ್ಮಥವ್ಯಾಪಾರಕ್ಕೆ ವಿರೋಧಿಯಾದ ಈ ಋಷಿಯ ಚರ್ಯದಲ್ಲಿರ ತಕ್ಕ ದೊ, ಹಾಗಿಲ್ಲದಿದ್ದರೆ ಮನೋಹರವಾಗಿ ಕರ್ಣಾ೦ತನೇತ್ರವುಳ್ಳ ಈ ಸ್ತ್ರೀಯು ವಿವಾಹವಿಲ್ಲದೆ ಹೆಣ್ಣು ಹುಲ್ಲೆಗಳೊಡನಾಡಿಕೊಂಡು ಈ ಅರಣ್ಯದಲ್ಲಿರತಕ್ಕದೊ? ಏನು ” ಎಂದು ಪ್ರಶ್ನೆ ಯಂ ಗೆಯ್ಯಲು; ಪ್ರಿಯಂವದೆಯು. ಎಲೈ ಪೂಜ್ಯನೇ, ಈ ಶಕುಂತಲೆ ಮೊದಲಾದ ನಾವು ಧರ್ಮಸಂಪಾದಕವಾದ ತಪಸ್ಸಂ ಗೆಯ್ಯುವ ಕಾರ್ಯದಲ್ಲಿಯ ಸ್ವಾತಂತ್ರ ಎ