ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ - ಕರ್ಣಾಟಕ ಕಾವ್ಯಕಲಾನಿಧಿ ಯಾದ ಗೌತಮಿಗೆ ವಿಜ್ಞಾಪನೆಯಂ ಗೈದು ಇವಳಿಗೆ ತಕ್ಕ ಶಿಕ್ಷೆಯಂ ವಿರಚಿಸುವು ದಕ್ಕೋಸುಗ ಪೋಗುವೆನು' ಎಂದು ನುಡಿದು, ಮೃದುವಾಗಿ ಕಮಲಗಳಿಗೆ ಕಾಂತಿಯನ್ನೀಯುತ್ತಿರುವ ಪಾದವನ್ನಿಡುತ, ಪೋಗುತ್ತಿರಲು ; ಆ ಅನಸೂ ಯೆಯು ಎಲ್‌ ಶಕುಂತಲೆ, ಈ ಆಶ್ರಮಕ್ಕೆ ಬಂದಿರುವ ಈ ಅತಿಥಿಗೆ ಫಲ ಪಪ್ಪ ಮೊದಲಾದ ವಸ್ತುವನ್ನಿತ್ತು ಸತ್ಕಾರವಂ ಗೆಯ್ಯದೆ ಮನಬಂದಂತೆ ಪೋಗುವುದು ಆಶ್ರಮವಾಸಿಯಾದ ನಿನಗೆ ಯುಕ್ತವಲ್ಲ' ಎಂದು ಹೇಳಲಾ ಶಕುಂತಲೆಯು ಅನಸೂಯೆ ಪೇಳಿದ ವಾಕ್ಯವಂ ಮನಕ್ಕೆ ತಾರದೆ ಅವಳಿಗೆ ಪ್ರತ್ಯುತ್ತರವಂ ನುಡಿಯದೆ ಪೋಗುತ್ತಿರಲು, ಆ ರಾಯನು ಈ ಶಕುಂತಲೆಯು ಪೋಗುವಳು. ಏನು ಮಾಡಲಿ, ಅವಳಂ ಸಿಡಿಯುವೆನೆ ? ” ಎಂದು ಇಚ್ಛಿಸಿ, ಅಷ್ಟ ಅಲ್ಲಿ ತನ್ನ ಮನವಂ ದೃಢವಂ ಗೈದು....ಲೋಕದಲ್ಲಿ ಕಾಮುಕರಾದ ಪ್ರರುಷರುಗಳ ಮನೋವೃತ್ತಿ ಯು ಅವರು ಮಾಡುವ ಕಾರ್ಯಗಳಿಗೆ ಅನುಕೂಲವಾಗಿರುವುದು. ಹೇಗೆಂ ದೆರೆ: - ಈಗ ನಾನು ಪೋಗುತಿರುವ ಮುನಿಪುತ್ರಿಯಾದ ಶಕುಂತಲೆಯನ್ನನುಸರಿಸಿ ಪೋಗಲಿಕ್ಕೆ ಯುಳ್ಳವನಾಗಿ, ಜಾಗ್ರತೆಯಿಂ ಎನ್ನ ಸದ್ದು ಣಗಳಿ೦ ತಡಯಲ್ಪಟ್ಟ ಮನೋವ್ಯಾಪಾರವುಳ್ಳವನಾಗಿ, ಇರುವ ಸ್ಥಾನದಿಂ ಚಲಿಸದೆ ಇದ್ದರೂ ಆ ಶಕುಂತಲೆ ಯೊಡನೆ ಪೋಗಿ ಮರಳಿ ಬಂದವನಂತೆ ಇರುವೆನು, ಎಂದು ಮನದಲ್ಲಾಲೋಚ ನೆಯಂ ಗೈಯ್ಯುತ್ತಿರಲು; ಆಪ್ರಿಯಂವದೆಯು ಪೋಗುತ್ತಿರುವ ಶಕ. ತಲೆಯಂ ತಡೆದು “ಎಲೆ ಶಕುಂ ತಲೆ, ಈಗ ನೀನು ಪೊಗುವದು ಯುಕ್ತವಲ್ಲ” ಎನಲಾಶಕುಂತಲೆಯು ಅಧಿಕವಾದ ಕೃತ್ರಿಮ ಕೋಪದಿಂ ಕೊಂಕುಗೂಡಿದ ಪುರ್ಬುಗಳಿ೦ ಯುಕ್ತಳಾಗಿ- ಎಲೆ ಪ್ರಿಯಂ ವದೆಯೇ, ಏನು ನಿಮಿತ್ತ ದಿಂದೆನ್ನಂ ಪೋಗಬೇಡವೆಂದು ತಡೆಯುತ್ತಿರುವೆ ? ಎನ್ನ ಲಾ ಪ್ರಿಯಂವದೆಯು-( ಎಲೆ ಶಕುಂತಲೆಯೇ, ಈ ವೃಕ್ಷ ಲತೆಗಳು ಮೊದಲಾದವುಗ ಳಿಗೆ ಜಲವಂ ಪೊಯ್ಯುವ ಕಾರ್ಯದಲ್ಲಿ ಇನ್ನು ಎರಡು ವೃಕ್ಷಗಳಿಗೆ ನೀರೆರೆಯುವ ಕಾರ್ಯವು ಉಳಿದಿರುವಾಗ ನಮ್ಮಿಬ್ಬರಂ ಬಿಟ್ಟು ನಿನ್ನ ಶರೀರವಂ ತಪ್ಪಿ ಸಿಕೊಂಡು ಪೋಗುವೆನೆಂದರೆ ನಾನು ಬಿಡುವೆನೆ, ಎಂದು ನುಡಿದು ಅವಳಂ ಬಲಾ ತ್ಯಾರದಿಂ ಹಿಂದಿರುಗಿಸಿ ಕಲಶವನ್ನು ಆ ಶಕುಂತಲೆಯ ಕರದಲ್ಲಿ ವೃಕ್ಷಗಳಿಗೆ ನೀರೆರೆಯುವಂತೆ ಮಾಡಲು; ಆ ರಾಯನು(1 ಎಲ್ ಪ್ರಿಯಂವದೆ, ಗಿಡಮರಗಳಿಗೆ ಜಲಸೇಚನವಂ