ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೩೩ ನೋಡುವೆನು. ಯಾವ ಶಕುಂತಲೆಯ ಪದ್ಧಿ ನೀಜಾತಿಯಾದ೦ ಸ್ವಲ್ಪ ವಾಗಿ ಬಗ್ಗಿ ರುವ ಬಾಹುಗಳು ಜಲಕುಂಭವನೆತ್ತಿದ್ದ ೦ ಬಲು ಕೆಂಪುವರ್ಣ ವುಳ್ಳ ಪ್ರದೇಶದಿಂದ ಯುಕ್ತವಾಗಿರುವುವೋ , ಯಾವಳ ಪ್ರಮಾಣವಂ ಮಿಕ್' ಬರುವ ನಿಟ್ಟುಸಿರುಗಳು ಈಗಲೂ ಸ್ತನಕಂಪವನ್ನುಂಟುಮಾಡುತ್ತಿರುವುವೋ; ಯಾವ ಳ ಮುಖದಲ್ಲಿ ಮುತ್ತಿನಂತೆ ಮುದ್ದಾದ ಬೆಮರ್ವನಿಗಳ ಸಮಹವು ಕರ್ಣದಲ್ಲಿರುವ ಜಾಗೆಯ ಪುಷ್ಪವಂ ವ್ಯಾಪಿಸುತ್ತಿರುವುದೋ; ಯಾವಳ ಬಲು ಕಪ್ಪಾಗಿ ಮೃದು ವಾಗಿರುವ ಕೇಶಪಾಶವು ಒಂದು ಕೈಯ್ಯಲ್ಲಿ ಕಟ್ಟು ನಿರ್ದರೂ ಕೆದರಿದ ಎಣೆಗಂಟಿನಿಂ ಜಾರುತ್ತಿರುವುದೋ ; ಯಾವಳನ್ನು ವೃಕ್ಷಂಗಳಿಗೆ ನೀರನ್ನೆ ಕಳೆಯುವ ಸಾಲವಿ ರುವುದೆಂದು ನೀವು ನಿರೂಪಿಸುವಿರೋ ಆನಿಮ್ಮ ಸಖಿಯ ಋಣವನ್ನು ತೀರಿಸುವೆನು” ಎಂದು ಹೇಳಿ, ಅನಸೂಯೆ ಪ್ರಿಯಂವದೆಯರೀರ್ವರಿಗೆ-Cಇವಳಿಂ ಜಲಸೇಚವನಂ ರೈಸದೆ ಬಿಡಿ ” ಎಂದು ತನ್ನ ಮುದ್ರಿಕೆಯಂ ಕೊಡಲು ಆ ಈರ್ವರು ಆವುಂಗರದಲ್ಲಿ ದುಷ್ಯಂತರಾಯನೆಂದು ಕೆತ್ತಿರುವ ಅಕ್ಷರಂಗಳಂ ಓದಿ ಒಬ್ಬರೊಬ್ಬರು ಮುಖಗಳಂ ನೋಡಿಕೊಳ್ಳುತ್ತಿರಲು; ರಾಯನು « ಈಸವಿಯ ರುಗಳು ಉಂಗರದ ಅಕ್ಷರಗಳಿ೦ ಎನ್ನಂ ದೊರೆಯಾದ ದುಷ್ಯಂತರಾಯನೆಂದು ತಿಳಿದಿರುವರು, ಈ ಸಂದೇಹವಂ ಪರಿಹರಿಸುವೆನು” ಎಂದು ಆ ಸಖಿಯರಂ ಕುತು • ಎಲೌ ಸಖಿಯರುಗಳಿರಾ, ಎನ್ನ೦ ಮತ್ತೊಂದು ಪ್ರಕಾರವಾಗಿ ತಿಳಿಯದಿರಿ. ಈ ವುಂಗರ ಮಾತ್ರ ರಾಯನು ಧರಿಸಿಕೊಳ್ಳುವುದಕ್ಕೆ ಯೋಗ್ಯವಾದುದು' ಎಂದು ನುಡಿ ಯಲು ಪ್ರಿಯಂವದೆಯು- ಎಲೈ ಪೂಜ್ಯನೆ, ದೊರೆಗೆ ಯೋಗ್ಯವಾದ್ದ೩೭ಂದೀ ವುಂಗರವು ನಿನ್ನ ಬೆರಳು ಬಿಟ್ಟು ಇರುವುದಕ್ಕೆ ಯೋಗ್ಯವಾಗಲಾರದು. ಈ ಶಕುಂ ತಲೆಯು ನಿನ್ನ ಪ್ರಿಯವಾದ ವಾಕ್ಯದಿಂದಲೇ ಋಣದಿಂ ವಿಮುಕ್ತಳಾದಳು” ಎಂದು ಸ್ವಲ್ಪವಾಗಿ ಹಿಂದಿರುಗಿ ನಿಂದು ಎಲೆಶಕುಂತಲೇ, ದಯಾಶಾಲಿಯಾದ ಪೂಜ್ಯನಾದ ಮಹಾರಾಜನು ಈ ವೃಕ್ಷಗಳಿಗೆ ನೀರೆರೆಯುವ ಕಾರ್ಯದಿಂ ಬಿಡಿಸುವಂತೆ ಮಾಡಿ ದನು. ಆದ್ದಕಂದ ನೀನು ತಡೆಯಿಲ್ಲದೆ ಪೋಗುವುದು” ಎಂದು ನುಡಿದು ಆವಂಗು ರವಂ ರಾಯನ ಹಸ್ತಕ್ಕೆ ಕೊಡಲಾಶಕುಂತಲೆಯು-ಈ ರಾಯನಲ್ಲಿ ಎನ್ನ ಮನವು ಲೀನವಾಗಿರುವುದಂದಡಿಯಿಟ್ಟು ಪೋಗುವುದಕ್ಕೆ ಸಮರ್ಥಳಾಗಲಾರು ? ಎಂದು ತನ್ನ ಮನದಲ್ಲಾಲೋಚಿಸುತ್ತ ಪ್ರಿಯಂವದೆಯಂ ಕುತು_ಎಲೆ ಪ್ರಿಯಂವದೇ, ಎನ್ನ೦ ಕುತು ಪೋಗೆಂದು ಹೇಳುವುದಕ್ಕೂ ತಡೆಯುವುದಕ ನೀನಾರು?” ಎಂದು ಕೋಪಿಸಿ ನುಡಿಯಲು