ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯ ಕಲ್ಲೋಲಂ ಅನಂತರದಲ್ಲಿ ದುಷ್ಯಂತರಾಯನು ಕಣಾಶ್ರಮದಲ್ಲಿ ಶಕುಂತಲೆಯು ಪರ್ಣ ಶಾಲೆಯಂ ಕುಜೆ' ತು ಪೋದಳೆಂಬ ಚಿಂತೆಯಿಂ ಯುಕ್ತನಾಗಿ ತನ್ನ ಹುಡುಕುವು ದಕ್ಕೆ ಬಂದಸೇನೆಯ ಸವಿಾಪವಂ ಸೇರಲು; ಅಷ್ಟ ಅಲ್ಲೇ ವಿದೂಷಕನು ಪ್ರತಿವ್ಯಾನ ಪಟ್ಟಣದಿಂ ರಾಯನಂ ಅಸಿಕೊಂ ಡು ಆತಪೋವನಕ್ಕೆ ಬಂದು, ರಾಯನಂ ಕಾಣದೆ, ಅಧಿಕಾಯಾಸದಿಂ ಕೂಡಿದ ವನಾಗಿ, ಆ8 ! ಬೇಟೆಯಲ್ಲಿ ಆಸಕ್ತನಾಗಿರುವ ಈ ದುಷ್ಯಂತರಾಯನ ಮಿತ್ರತ್ವದಿಂ ನಾನು ಹಾನಿಯಂ ಪೊಂದಿದೆನು. ಈಗಲೂ ಈ ರಾಯನೊಡನೆ-ಇದು ಹರಿಣವು, ಇದು ಕಾಡುಹಂದಿಯು, ಇದು ಹುಲಿಯು ಎಂದು ಗ್ರೀಷ್ಮಕಾಲದ ಮಧ್ಯಾ ಹ್ನದ ಬಿಸಲಿನಲ್ಲಿ ಸ್ವಲ್ಪ ನೆರಳು ವೃಕ್ಷರಾಜಿಗಳಲ್ಲಿ ತಿರುಗುತಿರುವೆನು. ಮತ್ತು ವೃಕ್ಷ ಲತೆ ಪರ್ಣಗಳ ಸಂಪರ್ಕದಿಂ ಕಷಾಯವಾಗಿ ಬೇಗೆಯ ಬಿಸಲಿನಿಂ ಸ್ವಲ್ಪ ಬಿಸಿ ಯಾಗಿ ಬೆಟ್ಟದಿಂ ಬೀಳುವ ನದೀ ಜಲವಂ ಪಾನವಂ ಗೆಯ್ಯುತ, ಶುಷ್ಕ ಮಾಂಸವಂ ಅಕಾಲದಲ್ಲಿ ಭಕ್ಷಿಸುತ್ತಿರುವೆನು. ಇದೂ ಅಲ್ಲದೆ ಈ ರಾಯನ ಕುದುರೆಯ ಮಾರ್ಗವನ್ನನುಸರಿಸಿ ಓಡಿದ್ದಿ೦ದ ವ್ಯಥೆಯಿಂ ಯುಕ್ತವಾದ ತೊಡೆಗಳ ಸಂದಿಗ ಳುಳ್ಳ ಎನಗೆ ರಾತ್ರಿಯಲ್ಲಿ ಮಲಗುವುದಕ್ಕೆ ಆಗಲಿಲ್ಲ ವಾದುದು. ಸ್ವಲ್ಪ ನಿದ್ರೆ ಬರುವು ದಲ್ಲಿಯೇ ದಾಸೀಪುತ್ರರಾದ ಈಬೇಟೆಗಾತರು ಪ್ರಾತಃಕಾಲದಲ್ಲಿ ಬೇಟೆನಾಯಿಗಳಲ್ಲಿ ಆಸೆಯುಳ್ಳವರಾಗಿ ಅರಣ್ಯವಂ ಮುತ್ತಿಗೆಯಂ ಗೆಯ್ಯುವೆವೆಂಬ ಕಲಕಲಧ್ವನಿಯಿಂ ದೆನ್ನ ಎಚ್ಚೆ ಹೆಂ ಗೈದರು. ಇನ್ನು ಮೇಲಾದರೂ ಇವರ ಬಾಧೆಯಿಲ್ಲದೆ ಸುಖವಾಗಿ ರುವೆನೆಂದರೆ ಕಪೋಲದ ಕುರುವಿನಮೇಲೆ ಒಂದು ಹುಣ್ಣಾಗಿ ಎನ್ನ ವ್ಯಥೆಬಡಿಸು ತಿರುವುದು. ನಿನ್ನೆ ದಿವಸ ನಾನು ಇಲ್ಲ ದವೇಳೆಯಲ್ಲಿ ರಾಯನು ಮೃಗವನ್ನನುಸ ರಿಸಿ ಈ ಋಷಿಗಳಾಶ್ರಮಕ್ಕೆ ಬಂದು ಎನ್ನ ದೌರ್ಭಾಗ್ಯದ ದೆಸೆಯಿಂದ ಋಷಿಪತ್ರಿ ಯಾಗಿ ಅತಿಸುಂದರಳಾದ ಶಕುಂತಲೆಯೆಂಬ ಸ್ತ್ರೀಯಂ ಕಂಡನು ಎಂಬ ವರ್ತಮಾನ ವಂ ಕೇಳಿರುವೆನು. ಇನ್ನು ಮೇಲೆ ಈ ರಾಯನು ತನ್ನ ಪಟ್ಟಣಕ್ಕೆ ಪೋಗುವೆನೆಂಬ ಕಥೆಯಂ ಸ್ಮರಿಸಲಾನೆಂದು ತೋಯುವುದು. ಆ ವಿಶೇಷವನ್ನೇ ಯೋಚಿಸುತ್ತಿರುವ ನನ್ನ ಕಣ್ಣುಗಳಿಗೆ ಈಗ ಪ್ರಭಾತವಾಯಿತು. ಮುಂದೆ ಏನು ಗತಿಯಾಗುವುದೋ