ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ -ಕರ್ಣಾಟಕ ಕಾವ್ಯಕಲಾನಿಧಿ ತಿಳಿಯದು. ಆದರೂ ಈ ರಾಂಡಂಗೆ ಸಮಸ್ತೋಪಚಾರವಂದು ಎಲ್ಲಿ ಇದ್ದರೂ ಹುಡುಕಿ ಕರೆದು ಕೊಂಡು ಪಟ್ಟಣಕ್ಕೆ ಪೋಗುವೆನು' ಎಂದು ಬರುತ್ತ, ಹಿಂದಿರುಗಿ ನೋಡಿ ಇದೊ! ರಾಯನು ಹಸ್ತದಲ್ಲಿ ಧರಿಸಿದ ಬಾಣಬತ್ತಳಿಕೆಯುಳ್ಳ ವನಪುಷ್ಪ ಮೂಲೆಗಳಂ ಧರಿಸಿರುವ ಬೇಡಸ್ತ್ರೀಯರುಗಳಿ೦ದಲೂ, ಮಿತಸೇನಾ ಜನರಿಂದಲೂ ಯುಕ್ತನಾಗಿ ಸವಿಾಪದಲ್ಲೇ ಬರುವನು.... ಅಷ್ಟರಲ್ಲೇ ನಾನು ಕೈ ಕಾಲುಗಳು ಮುಂದಿರುವನಂತೆ ಇಲ್ಲೇ ಕುಳಿತು ಇದಿಂದಲಾದರೂ ಬಳಲಿಕೆಯಂ ಪರಿಹರಿಸಿ ಕೊಳ್ಳುವೆನು ” ಎಂದು ಒಂದು ದೊಣ್ಣೆಯನ್ನೂ ಕೊಂಡು ಇರುತ್ತಿರಲು, ಇತ್ತಲು ರಾಯನು ಮಿತಸೇನೆಯಿಂದೊಡಗೂಡಿ ಬರುತ್ತಾ «ಪ್ರೀತಿಪಾತ್ರ ೪ಾದ ಶಕುಂತಲೆಯು ಎನಗೆ ಅಭಿಲಾಷೆಯಿರುವಂತೆ ಸ್ವಲ್ಪ ಪ್ರಯತ್ನ ಕೈ ಸಾಧ್ಯಳಾ ಗಲಾಳು, ಎನ್ನ ಮನವಾದರೋ ಅವಳ ನಾನಾ ವಿಧಚೇಷ್ಟೆ ಯ೦ ನೋಡಬೇಕೆಂದು ಆಯಾಸವಂ ಕೊಳ್ಳುವುದು. ಮನ್ಮಥನು ಆಲಿಂಗನಾದಿಗಳಿಂ ಕೃತಾರ್ಥನಾಗದಿರ್ದ ರೂ ನಮ್ಮಿಬ್ಬರ ಪ್ರಾರ್ಥನೆಯ ಒಂದಾನೊಂದು ಇಚ್ಛಾಎಶೇಷವಂ ಪುಟ್ಟಿಸುತ್ತಿರು ವನು ” ಎಂದು ಮನದಲ್ಲಿ ಒಂದು ಕ್ಷಣ ಯೋಚನೆಯಂ ಗೈದು, ತನ್ನೊಳು ತಾನು ನಸುನಕ್ಕು ಲೋಕದಲ್ಲಿ ಯಾವ ಕಾಮಿಪುರುಷನು ಸುಂದರಳಾದ ಸ್ತ್ರೀಯು ಸ್ವಭಾವವಾಗಿ ವಿಲಾಸದಿಂ ಕಣ್ಣುಗಳು ತೇಲಿಸುತ್ತಾ, ಮನೋಹರವಾಗುವಂತೆ ನೋಡುವುದು ಯಾವುದುಂಟೋ, ನಿತಂಬಗಳ ಭಾರದಿಂದ ಮೆಲ್ಲ ನಡಿಯಿಡುತ ನಡೆ ಯುವುದು ಯಾವುದುಂಟೋ, ಪೋಗುತಿರುವಳಂ ಅವಳ ಓರಗೆಯ ಹೆಣ್ಣುಗಳು ತಡೆಯುವಲ್ಲಿ ಹುಬ್ಬುಗಳಂ ಗಂಟಿಕ್ಕಿಕೊಂಡು ಯಾವ ವಚನವಂ ನುಡಿಯುವಳೋ ಈಚೇಷ್ಟೆಗಳೆಲ್ಲ ವಂ ಎನಗೋಸುಗವೇ ಮಾಡಿದಳೆಂದೂ, ಎನಗೆ ಅಭಿಲಾಷೆ ಅವಳಲ್ಲಿ ರುವಂತೆ ಅವಳಿಗೂ ಎನ್ನಲ್ಲಿ ಅನುರಾಗವಿರುವುದೆಂದು ತಿಳಿದು ಆ ಸ್ತ್ರೀಯಂ ಪ್ರಾರ್ಥಿ ಸುವುದಕ್ಕೆ ಇಷ್ಟೆ ಸುತ್ತಿರುವನೋ, ಅವನು ಹಾಸ್ಯಾಸ್ಪದನಾಗುವನು. ಪ್ರಕೃತಕ್ಕೆ ಶಕುಂತಲೆಯು ಮಾಡಿದ ಶೃಂಗಾರ ಚೇಷ್ಟೆಗಳಂ ನೋಡಿ, ತಡೆದ ಸಖಿಯರೊಡನೆ ಅಸೂಯೋಕ್ತಿಗಳಂ ನುಡಿದಿರುವುದು ಕೇಳಿ, ಅವಳಿಗೆ ಎನ್ನಲ್ಲಿ ಅಭಿಲಾಷೆಯಿರುವು ದೆಂದು ನಿಶ್ಚಿಸಿ ಹಾಸ್ಯಾಸ್ಪದನಾಗಿ ಹೋದೆನು ಎಂದು ಚಿಂತಿಸುತ್ತ ಬರುತ್ತಿರಲು, ಇತ್ತಲು ವಿದೂಷಕನು ದೊಣ್ಣೆಯನ್ನೂ ಕೊಂಡು ನಿಂತು ರಾಯನಂ ಕು' ತು-ಎಲೈ ಸ್ನೇಹಿತನಾದ ಮಹಾರಾಯನೇ, ಎನ್ನ ಹಸ್ತಪಾದಗಳು ಚಲಿಸು ವುದಕ್ಕಾಗದೆ ಇರುವುವಾದ್ದಂ ವಾಣ್ಮಾತ್ರದಿಂದಲೇ ಜಯಳ್ಳವನಾಗೆಂದು ನುಡಿ ಯಲು