ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಕರ್ಣಾಟಕ ಕಾವ್ಯಕಲಾನಿಧಿಆ ರಾಯನು ಅದೇರೀತಿಯಿಂದಾಶಕುಂತಲೆಯ ಸಮೀಪದಲ್ಲಿ ಕುಳಿತು ಕೊಳ್ಳಲು; ಆ ಶಕುಂತಲೆಯು ಲಜ್ಜೆಯಿಂದಲೂ ಹರ್ಷದಿಂದಲೂ ರೋಮಾಂಚದಿಂದಲೂ ಕಂಪನಿಯಿಂದಲೂ ಯುಕ್ತಳಾಗಿ, ಶಿರವಂ ಬಾಗಿ, ಕುಳಿತು ಕೊಂಡಿರಲು ; ಪ್ರಿಯಂವದೆಯು “ಎಲೈ ಮಹಾರಾಜನೇ, ನಿಮ್ಮಿರ್ವರ ಹೃದಯಾನು ರಾಗವು ಈಗ ಪ್ರತ್ಯಕ್ಷವಾದುದು. ಆದರೆ ನಿಮಗೆ ನಮ್ಮ ಶಕುಂತಲೆಯಲ್ಲಿರುವ ಅನುರಾಗವು ಎನ್ನ೦ ಕೆಲವು ಸಂಕೇತವಾಕ್ಯವಂ ಪೇಳುವಂತೆ ಮಾಡುವುದು” ಎನಲು; ಆ ರಾಯನು ಎಲೌ ಶೋಭನಾಂಗಿಯಾದ ಪ್ರಿಯಂವದೆಯೇ, ಏನು ಕೇಳಬೇಕೆಂದು ನಿನ್ನ ಮನದಲ್ಲಿರುವುದೋ ಆ ವಾಕ್ಯವಂ ಕೇಳದೆ ಸುಮ್ಮನಿರಬಾರದು, ಏಕೆಂದರೆ:-ಪ್ರಕೃತಕ್ಕೆ ಹೇಳಬೇಕೆಂಬ ವಚನವಂ ಪೇಳದೆ ವಿಳಂಬವಂ ಮಾಡಿದರೆ ಏನೋ ಒಂದು ಸಂತಾಪಿಂಟಾಗುವುದು.” ಎಂದು ನುಡಿಯಲು; ಪ್ರಿಯಂವದೆಯು “ಎಲೈ ರಾಯನೇ, ರಾಜ್ಯದಲ್ಲಿ ದರಿದ್ರರಾದ ಜನರು ಗಳ ದುಃಖವಂ ಪರಿಹರಿಸುವನಾದ ದೊರೆಯು ಲೋಕದಲ್ಲಿ ಪುಟ್ಟ ಬೇಕೆಂದು ಪ್ರಾರ್ಥಿಸುವುದು ಮುಖ್ಯವಾದ ಧರ್ಮ ” ವೆನಲು; ಆ ರಾಯನು ನೀನು ಪೇಳುವ ವಾಕ್ಯವು ಯುಕ್ತವೇ ಸರಿ' ಎನಲು; ಪ್ರಿಯಂವದೆಯು_“ನೀನು ಅದೇರೀತಿಯಿಂದ ಸಮಸ್ಯರ ದುಃಖವಂ ಪರಿ ಹರಿಸುತ್ತ ದಯಾದಾಕ್ಷಿಣಾದಿ ಸದ್ಗುಣಸಂಪೂರ್ಣನಾದ್ದಂ ನಮ್ಮ ಪ್ರಿಯಸಖಿ. ಯಾದ ಶಕುಂತಳೆಯು ನಿನ್ನು ದೃಶ್ಯವಾಗಿ ಮನ್ಮಥನಿಂ ನಾನಾವಿಧ ತಾಪವನ್ನನು. ಭವಿಸಿರುವಳು. ಆದ್ದಂ' ನೀನು ಅಧಿಕದಯದಿಂ ಕಾಲವಿಳಂಬವಂ ಮಾಡದೆ ಇವಳ ಪ್ರಾಣಸಂರಕ್ಷಣೆಯಂ ಗೆಯ್ಯ ಬೇಕು” ಎನಲು; ಆ ವಾಕ್ಯಕ್ಕೆ ರಾಯನು-ಎಲ್‌ ಪ್ರಿಯಂವದೆಯೇ, ಇವಳಂ ನೀನು ಪೇಳಿದಂತೆ ಸಲಹುವುದು ವಿಶ್ವಾಸಕ್ಕೆ ಯೋಗ್ಯವಾದ ಕಾರವು ಎಂದು ನುಡಿಯಲು; ಶಕುಂತಲೆಯು ಪ್ರಿಯಂವದೆಯ ಮುಖವ ನೋಡಿ. ಎಲೆ ಪ್ರಿಯಂ ವದೆ, ಪುರದಲ್ಲಿರುವ ಅಂತಃಪುರಸ್ತ್ರೀಯರ ವಿರಹದಿಂ ದುಃಖಿತನಾಗಿ ಸಂತಾಪಯು ಕನಾಗಿರುವ ರಾಜಶ್ರೇಷ್ಠನಾದ ಈದುಷ್ಯಂತರಾಯನಂ ಈಪ್ರಕಾರವಾಗಿ ನಡೆಸಬೇ ಕೆಂದುಬಲಾತ್ಕಾರವಂಗೆಯ್ಯುವುದ೦ ಪ್ರಯೋಜನವಿಲ್ಲವು ಎಂದು ನುಡಿಯಲು; ಆ ವಾಕ್ಯಕ್ಕೆ ರಾಯನು- ಎನ್ನ ಹೃದಯದಲ್ಲಿ ವಾಸವಂ ಗೆಯ್ಯುತ್ತಿರುವ ಶಕುಂತಳೆಯೆ, ಕೇಳು. ನಿನ್ನಂತೆ ನಂಬಿಕೊಂಡಿರುವ ಎನ್ನ ಮನವ ಇನ್ನೊಬ್ಬ " ಯಲ್ಲಿ ಆಸಕ್ತಿಯುಳ್ಳದನ್ನಾಗಿ ನಿಶ್ವಯಂ ಗೆಯ್ದೆ ಯಾದರೆ, ಎಲೆ ಮನೋ