ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ -ಶಾಕುಂತಲನಾಟಕ ನವೀನಟೀಕೆಹರನೇತ್ರವುಳ್ಳವಳೇ, ಮೋದಲೆ ಮನ್ಮಥನಿಂ ಒಹಳವಾಗಿ ಪೆಟ್ಟು ಬಿದ್ದಿರುವೆನು, ಮರಳಿ ನಿನ್ನ ವಾಕ್ಯದಿಂ ಅಧಿಕಾಸವುಳ್ಳವನಾಗುವೆನು ” ಎನಲು ; ಆ ಅನಸೂಯೆಯು_* ಎಲೈ ಮಿತ್ರನಾದ ಮಹಾರಾಯನೇ, ದೊರೆಗಳಾ ದವರು ಬಹುಜನ ಸ್ತ್ರೀಯರುಳ್ಳವರೆಂಬುದು ಲೋಕಪ್ರಸಿದ್ಧವಾಗಿರುವುದಾದ್ದ೦ ದೀಶಕುಂತಲೆಯಂ ನಮಗೂ ಕಣ್ವಋಷಿ ಮೊದಲಾದ ಬಂಧುಗಳಿಗೂ ವ್ಯಸನ ವುಂಟಾಗದಂತೆ ಸಂರಕ್ಷಿಸಬೇಕು ” ಎನಲು ; ಆರಾಯನು-- ಎ ಅನುಸೂಯೆಯೇ, ಬಹಳವಾಕ್ಯಂಗಳಂ ಹೇಳಿದ್ದ೦ ಫಲವಿಲ್ಲ. ಎನಗೆ ಬಹುಜನ ಪತ್ನಿಯರಿದ್ದರೂ ಎನ್ನ ಕುಲಪ್ರತಿಷ್ಠೆಗೆ ಕಾರಣವಾದ ವಳು ಈ ಶಕುಂತಳೆಯೊಬ್ಬಳು ಸಮುದ್ರವೇ ಒಡ್ಯಾಣವಾಗಿರುವ ಭೂಮಿಯೊಂದು ಇವು ಎರಡಲ್ಲದೆ ಇನ್ನಾವುದೂ ಎನಗೆ ಪ್ರೀತಿಕರವಾದುದು ಇಲ್ಲ ” ಎಂದು ನುಡಿಯಲು ; ಆ ಸಖಿಯರಿಲ್ವರು ರಾಯನಾಡಿದ ವಾಕ್ಯಕ್ಕೆ ಸಂತೋಷಯುಕ್ತರಾಗು ತಿರಲು; ಅಷ್ಟಲ್ಲೇ ಪ್ರಿಯಂವದೆಯು ಅನಸೂಯಯಂ ಕುಳಿತು, ನಾವಿಲ್ಲಿರಬಾರ ದೆಂದು ಕಣ್ಣು ಸನ್ನೆ ಯಂ ಮಾಡಿ, ಎಲೆ ಅನಸೂಯೆ, ಈಮುಂಭಾಗದಲ್ಲಿ ಹುಲ್ಲೆ ಮ” ಯು ತನ್ನ ತಾಯಂ ಕಾಣದೆ ನಾಲ್ಕು ದಿಕ್ಕಂ ನೋಡುತ ವ್ಯಥೆಯಂ ಪೊಂದು ತಿರುವುದು. ನಾವೀರ್ವರು ಪೋಗಿ ಅದನ್ನು ಅದ ತಾಯೊಡನೆ ಕೂಡಿಸಿ ಬರುವವು ನಡೆ ಎಂದು ಪೋಗುವುದಕ್ಕೆ ಉದ್ಯುಕ್ತರಾಗಲು; ಶಕುಂತಲೆಯು ಪೋಗುತ್ತಿರುವ ಸಖಿಯರುಗಳಂ ಕು” ತು__C ಎಲ್‌ ಸಖಿಯರುಗಳಿರಾ, ನಾನು ರಕ್ಷಕರಿಲ್ಲದವಳಾದೆನು. ನಿಮ್ಮಿಬ್ಬರಲ್ಲಿ ಒಬ್ಬಳಾದರೂ ನಾನಿರುವ ಸ್ಥಾನಕ್ಕೆ ಬನ್ನಿರಿ” ಎಂದು ಕರೆಯಲು ; ಆಸಖಿಯರೀತ್ವರು ನಸುನಗುತ, ಎಲೆ ಶಕುಂತಲೆ, ಪೃಥವೀಪತಿಯಾದ ದುಷ್ಯಂತರಾಯನೇ ನಿನ್ನ ಸಮೀಪದಲ್ಲಿರುವಲ್ಲಿ ನೀನು ರಕ್ಷಕರಿಲ್ಲವೆಂದು ಹೇಳುವ ವಾಕ್ಯವು ಯುಕ್ತವಲ್ಲ ” ಎಂದು ನುಡಿದು, ಶಕುಂತಲೆಬರುವ ಲತಾಗೃಹವಂ ಬಿಟ್ಟು ಪೋಗಲು; ಶಕುಂತಲೆಯು, “ಮನದಲ್ಲಿ ನುರಾಗವಿದ್ದರೂ ಎನ್ನ ಸಖಿಯರು ಎನ್ನ ವಚನ ನನ್ನತಿಕ್ರಮಿಸಿ ವೋಗುತ್ತಿರುವರು. ಅವರೆ ಬದನೆ ನಾನೂ ಪೋಗುವೆನು” ಎಂದು ಭ