ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಕಲ್ಲೋಲಂ ಅನಂತರದಲ್ಟಾ ಮಹಾರಾಜನಾದ ದುಷ್ಯಂತರಾಜನು ಆ ತಪೋವನವಂ ಪ್ರವೇಶಿಸಿ, ಯಜ್ಞವಿಘಾತಕರಾದ ರಾಕ್ಷಸರಂ ನಿಗ್ರಹಿಸಿ, ಆ ಆಶ್ರಮವಾಸಿಗಳಾದ ಋಷಿಗಳ ಆಶೀರ್ವಾದವಂ ಕೈಕೊಂಡು, ಚತುರಂಗಬಲದೊಡಗೊಂಡು, ಮಣಿಮ ಯರಥಾರೂಢನಾಗಿ, ತನ್ನ ಪ್ರತಿಷ್ಠಾನನಗರವು ಕುತು ಬರುತ, ಶಕುಂತಲೆಯಂ ಹೃದಯದಲ್ಲಿ ಸ್ಮರಿಸುತ, ತಾನು ಆ ಶಕುಂತಲೆಯೊಡನೆ ರತಿಗೆಯುದನ್ನಾ ಮುನೀ ಶ್ವರನು ಜ್ಞಾನದೃಷ್ಟಿಯಿಂ ತಿಳಿದು ಸಂತುಷ್ಟನಾಗುವನೋ ಕೋಪಾನ್ವಿತನಾಗಿ ಶಾಪವನ್ನಿಯ್ಯುವನೋ ತಿಳಿಯದೆಂದು ಮನದಲ್ಲಿ ಕಳವಳಬಹುತ, ಆ ಪುರವಂ ಪ್ರವೇಶಿಸಿ, ಸಮಸ್ತ ಸಾಮಾಜೆಕರುಗಳಿಗೆ ತಮ್ಮ ತಮ್ಮ ನಿವಾಸಂಗಳಿಗೆ ಅಪ್ಪಣೆಯ ನ್ನಿತ್ತು, ಅಂತಃಪುರವಂ ಪೊಕ್ಕು, ತನ್ನ ತಾಯಿಯ ಚರಣಸಂಕಜಕ್ಕೆ ನಮಸ್ಕಾರವಂ ಗೊಯ್ಯು, ವಿನಯಾನ್ವಿತನಾಗಿ ಮಧುರಾಲಾಪವಂ ವಿರಚಿಸುತ್ತಿರಲು ಇತ್ತಲಾಶಕುಂತಲೆಯು ಪೂಜ್ಯಳಾದ ಗೌತಮಿಯೊಡನೆ ಕಣ್ವಮುನೀಶ್ವರನ ಪರ್ಣಶಾಲೆಯಂ ಸೇರಲು ; ಅನಸೂಯೆ ಪ್ರಿಯಂಗೆಯರೀರ್ವರು ಪರ್ಣಶಾಲೆಯ ಸಮೀಪದಲ್ಲಿರುವ ವನಕ್ಕೆ ದೇವತಾರ್ಚನೆಗೋಸುಗ ಇಷ್ಟವಂ ಕೊಯ್ಯುತ್ತ, ಅನಸೂಯೆಯು ಪ್ರಿಯಂವದೆಯಃ' ಕು” ತು ಎಲೆ ಪ್ರಿಯಂವದೆಯೇ, ನಮ್ಮ ಶಕುಂತ ಲೆಯು ಗಾಂಧರ್ವನಿರ್ವಹನಿಧಾನದಿಂ ಮದುವೆಯಾಗಿ ಅನುರೂಪನಾದ ಮಹಾ ರಾಜನ 'ಪೊಕಿದಳೆಂದು ಎನ್ನ ಮನವು ಅತಿ ಸಂತುಷ್ಟನಾಗಿರುವುದು. ಹಾಗಾದರೂ ಒಂದು 'ಕಾರವಾತ್ರ ಯೋಚಿಸತಕ್ಕದಿರುವುದು ” ಎನಲು; ಪ್ರಿಯಂವದೆಎಲೆ ಸಖೀ, ೬ ಯೋಚಿಸತಕ್ಕೆ ಕಾರವೇನು? ಎಂದು ಕೇಳಲು; ಆ ವಾಕ್ಯಕ್ಕೆ ಅನಸೂಯೆಯು “ ಈಗ ಆ ರಾಜಶ್ರೇಷ್ಠನಾದ ದುಷ್ಯಂತರಾ ಯನು ರಾಕ್ಷಸರಂ ಸಿಗ್ರಹಿಸಿ, ಯಜ್ಞಸಂಪೂರ್ತಿಯಂ ಸೈಯ್ಯು, ಋಷಿಗಳಾಜ್ಞೆಯಂ ಪಡೆದು, ತನ್ನ ಪ್ರವಮ್ಮ ಪ್ರವೇಶಂಗೆಯ್ಯು, ಅಂತಃಪುರವಂ ಸೇರಿದವನಾಗಿ, ಇಲ್ಲಿ ನಮ್ಮ ಶಕುಂತಲೆಯೊಡಗೂಡಿದ ವೃತ್ತಾಂತವೆಂ ಸ್ಮರಿಸುವನೋ ತನ್ನ ಸ್ತ್ರೀಯರು ಗಳಂ ಬೆರೆದು ಇವಳಂ, ಮರೆಯುವನೋ ತಿಳಿಯದು ” ಎನಲು;

  • * *