ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನಪೀನಟೀಕೆ ಇರುವ ತಟ್ಟೆಗಳಂ ಪಿಡಿದು ಕುಳಿತುಕೊಂಡು ಎಲೆ ಶಕುಂತಳೆಯೇ, ನಾವೀರ್ವರು ಎಣ್ಣೆಯನ್ನೊತ್ತಿ ಮಂಗಳಾಭ್ಯಂಗನವಂ ಮಾಡಿಸುವೆವು. ನೀನು ಸನ್ನಾಹವುಳ್ಳವಳಾ ಗು ಎಂದು ಹೇಳಲಾ ಶಕುಂತಳೆಯು-- ಎಲ್‌ ಸಖಿಯರುಗಳಿರಾ, ನಾನು ನನ್ನ ದ್ದಳಾಗಿ ನೀವು ಹೇಳಿದ ವಾಕ್ಯವಂ ಅನುಮತಿಸುವೆನು. ಇನ್ನು ಮೇಲೆ ಎನಗೆ ನೀವು ಮಾಡುವ ಉಪಚಾರವು ಅಲಂಕಾರವು ಸಹ ದುರ್ಲಭವಾಗುವುವು. ಏನು ಅಲಂ ಕಾರ ಮಾಡಬೇಕಾದರೂ ಈಗಲೇಮಾಡಿ ಎಂದು ಅಧಿಕದುಃಖದಿಂ ಕಣ್ಣೀರಂ ಬಿಡು ತಿರಲವರೀರ್ವರು_ಎಲೆಪ್ರಿಯ ಸಖಿಯೇ, ಕೇಳು. ಮಂಗಳಕಾಲದಲ್ಲಿ ರೋದನವಂ ಗೆಯ್ಯುವುದು ಯುಕ್ತವಲ್ಲಾ ” ಎಂದು ತಮ್ಮ ಸೀರೆಯಸೆಗಿನಿಂದವಳ ಕಂಬನಿಗಳಂ ಒರಸಿ ದುಃಖಸಮಾಧಾನವಾಗುವಂತೆ ಮಾಡಲಾ ಪ್ರಿಯಂವದೆಯು-'ಎಲೆ ಅನಸೂ ಯೇ, ನಮ್ಮ ಶಕುಂತಳೆಯ ಸೌಂದರ್ಯವು ದಿವ್ಯವಾದ ನವರತ್ನಾಭರಣಕ್ಕೆ ಉಚಿತ ಮಾಗಿರುವುದು. ಹೀಗಿರುವಲ್ಲಿ ನಮ್ಮ ಋಷಿಗಳಿಗೆ ಯೋಗ್ಯವಾದ ನಾರಸೀರೆ, ದೂರ್ವಾ ದಳ, ತೀರ್ಥಮೃತ್ತಿಕೆ ಮೊದಲಾದ ಈ ವಸ್ತುಗಳಿಂದಿವಳನ್ನಲಂಕರಿಸಿ ವಿಕಾರವಂ ಗೆಯ್ಯಬಾರದು. ಇವಳಿಗೆ ಯೋಗ್ಯವಾದ ಆಭರಣಗಳಿಲ್ಲ” ಎಂದು ಯೋಚಿಸು ತಿರಲು ; ಅಷ್ಟ ಅಲ್ಲೇ ಇಬ್ಬರು ಋಷಿಕುಮಾರರು ಆಭರಣವಂ ಹಸ್ತಗಳಲ್ಲಿ ಹಿಡಿದು ಕೊಂಡು ಶಕುಂತಲೆಯಿರುವ ಬಳಿಗೆ ಬಂದು, ಗೌತಮಿಯಂ ಕುರಿತು “ಎಲ್‌ ತಾಯೇ, ಈಗ ನಾವು ತಂದಿರುವ ಆಭರಣಗಳಂ ತೆಗೆದುಕೊಂಡು ಪೂಜ್ಯಳಾದ ಶಕುಂ ತಳೆಗೆ ಅಲಂಕಾರವಂ ಮಾಡುವುದು' ಎಂದು ಆಭರಣಗಳಂ ಅವಳ ಮುಂದಿರಿಸಲು; ಎಲ್ಲರೂ ಆ ಮನೋಹರವಾದ ಆಭರಣಗಳಂ ನೋಡಿ ಅತ್ಯಾಶ್ಚರ್ಯದಿಂ ಯುಕ್ತರಾಗಲು; ಗೌತಮಿಯು ಆ ಆಭರಣಗಳಂ ತಂದ ನಾರದನೆಂಬ ಋಷಿಕುಮಾರನಂ ಕುತು- ಎಲೈ ನಾರದನೇ, ಈ ಆಭರಣಗಳು ಎಲ್ಲಿಂದ ಬಂದುವು? ಯಾರು ನಿನಗೆ ಕೊಟ್ಟರು? ” ಎನಲು; ನಾರದನು-ಎಲ್ ಪೂಜ್ಯಳೇ, ನಮ್ಮ ಗುರುವಾದ ಕಣ್ವ ಋಷಿಯ ಪ್ರಭಾವದಿಂದುಂಟಾದುವು ” ಎನಲು ; ಆ ಗೌತಮಿಯು-“ಎಲೈ ಬಾಲಕನೇ, ನಮ್ಮ ಋಷೀಶ್ವರನು ತನ್ನ ಮನ ಸ್ಸಿನಿಂದಲೇ ಈ ಒಡವೆಗಳಂ ನಿರ್ಮಾಣವಂ ಗೈದನೋ ಏನು ? ಎಂದು ಬೆಸ ಗೊಳ್ಳಲು ; 11 S