** ಶ್ರೀ ಕೃಷ್ಣಬೋಧಾಮೃತಸಾರವು. ೩೧ - ಆ ಅಡಗೂಲಜ್ಜಿಯು ಆ ರಾಜಾತೃಜನನ್ನು ಕುರಿತು, ಅಯ್ಯಾ ! ಈ ದೇಶಕ್ಕೆ ಕಾಶ್ಮೀರದೇಶವೆಂದು ಹೆಸರು, ಇಲ್ಲಿ ನಮ್ಮ ರಾಜನಿಗೆ ಶಾರ ದಾವೇಣಿಯೆಂಬ ಮಗಳಿರುವಳು. ಈ ಕಾರದವೇಣಿಯ ಸ್ವಯಂವರಮ ಹೋತ್ಸವವು ನಡೆಯುವುದು, ಇದೇ ನಿಮಿತ್ತವಾಗಿ ಅನೇಕ ಜನ ರಾಜರು ತಮ್ಮ ತಮ್ಮ ಸೇನಾಸಮೇತರಾಗಿ ಊರುಸುತ್ತಲೂ ಬಂದು ನಿಂತಿರುವರು. ರಾಜನು ಒಂದು ಮಯಂತ್ರವನ್ನಿಟ್ಟಿರುವನು. ಈ ಮಯಂ ತ್ರವನ್ನು ಭೇದಿಸಿದ ವೀರನಿಗೆ ಇದೇಶದ ರಾಜನು ತನ್ನ ಪುತ್ರಿಯನ್ನು ಕ ಟ್ಟು ಮದುವೆ ಮಾಡುವನೆಂದು ನುಡಿದಳು. ಶಶಿಬಿಂದುಮಹಾರಾಯನು ಇದನ್ನು ಕೇಳಿ ತನ್ನ ಇಷ್ಟವನ್ನು ಸಂಪೂ ರ್ಣಚಂದ್ರಿಕೆಯೊಂದಿಗೆ ಹೇಳಿ, ತನ್ನ ಮಂತ್ರಿಯನ್ನು ಜೊತೆಯಲ್ಲಿ ಕರೆ ದುಕೊಂಡು, ಆ ಮಯಂತ್ರದ ಬಳಿಗೆ ಹೋದನು. ಆ ಪಟ್ಟಣದ ಬ್ರಾಹ್ಮಣನೊಬ್ಬನು ರಾಜಸಭೆಯಲ್ಲಿ ಎದ್ದು ನಿಂತು, ಒ ರಾಜಾಧಿರಾಜರು ಗಳಿರಾ : ಇಲ್ಲಿಟ್ಟಿರುವ ಮತ್ಯಂತ್ರದಡಿಯಲ್ಲಿ ನೋಡುತ್ತಾ, ನಿಲುಗ ನ್ಯ ಡಿಯಲ್ಲಿ ಕೆಳಗಡೆ ನೋಡಿಕೊಂಡು ಒಂದೇ ಬಾಣದಿಂದ ಯಾರು ಮೇಲ್ಲ ತೆ ಇರುವ ಮಯಂತ್ರವನ್ನು ಭೇದಿಸುವರೋ ಅಂತಹ ಶರನನ್ನು ನಮ್ಮ ರಾಜಕುಮಾರಿಯು ಏರಿಸುವಳು, ಶೂರರು ಬಂದು ಪ್ರಯತ್ನ ಪಡ ಬಹುದೆಂದು ನುಡಿದನು. ಇದನ್ನು ಕೇಳಿದ ರಾಜರಲ್ಲಿ ಕೆಲವರು, ಇದು ದೇವತೆಗಳಿಗೂ ಅಸಾಧ್ಯವೆಂದೂ, ಹಲವರು ಈ ಯುತವನ್ನು ತ್ರಿ ತ್ರಧಾರಿಯಾದ ಪರಮೇಶರನೂ ಭೇದಿಸಲಾರನೆಂದೂ, ಬೇರೆ ಕೆಲವರು ಇದಕ್ಕೆ ಲಕ್ಷ ವನ್ನು ಇಡುವುದು ಹೇಗೆಂದು ಚಿಂತಿಸುತ್ತಲೂ, ಈ ರೀತಿ ಯಾಗಿ ನಾನಾಬಗೆಯಾಗಿ ಮಾತನಾಡುತ್ತಿರುವಲ್ಲಿ, ಆ ಶಬಿಂದುಮಹಾರ ಯನು ತನ್ನ ಮನಸ್ಸಿನಲ್ಲಿ ಭಾಸ್ಕರಮಹರ್ಷಿಯನ್ನು ಧ್ಯಾನಿಸುತ್ತಾ, ಛಾ ಯಾಪುರುಷ ಲಕ್ಷಣವನ್ನು ಬಲ್ಲ ನನಿಗೆ ಈ ಬಲ್ಲು ಅಸಾಧ್ಯವೇ ಎನ್ನು ತಾ, ಧೈರವಾಗಿ ಆ ಯಂತ್ರ ದ ಹತ್ತಿರಕ್ಕೆ ಹೋಗಿ ಧನುಷ್ಟಂಕಾರವನ್ನು ನಾ ಡಿದನು. ಈ ಧ್ವನಿಯನ್ನು ಕೇಳಿದ ಕೂಡಲೇ ಅಲ್ಲಿದ್ದ ರಾಜರು ಈ ಶಶಿ ಬಿಂದುವಿನ ಕಡೆಗೆ ತಿರುಗಿನೋಡುತ್ತಾ, ಆಹಾ ! ಇದೇನು : ಇವನು ಯಾವಲೋಕದಿಂದ ಬಂದ ಪುಣ್ಯಪುರುಷನೆ ಎಂದು ರೆಪ್ಪೆ ಬಡಿಯದೆ ನೋಡುತ್ತಿರುವಲ್ಲಿ, ಆ ಶಶಿಬಿಂದುವು ಬಾಣವನ್ನು ತಗುಲಿಸಿ, ಲಕ್ಷವನ್ನು ನಿಲ್ಲಿಸಿಕೊಂಡು ಗುರುವಾದ ಮಹರ್ಷಿಯನ್ನು ಧ್ಯಾನಿಸುತ್ತಾ ಕೆಳಗಡೆಯ ನಿಲುಕನ್ನಡಿಯನ್ನು ನೋಡಿಕೊಂಡುಹೊಡೆದ ಕೂಡಲೇ, ಆ ಮಯಂ ತ )ವು ಮುರಿದು ಕೆಳಗೆ ಬಿತ್ತು, ಅಲ್ಲಿದ್ದ ರಾಜರೆಲ್ಲಾ ತಮ್ಮಷ್ಟಕ್ಕೆ ತಾ ವೇ, ಆಹಾ ! ಈತನುಇಂದ್ರನೋದೇವೇ೦ದ ನೋ, ಅಥವಾ ಲಕ್ಷ್ಮಿ
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೨
ಗೋಚರ