ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ ಕ೦ll ಕಲುಷಾತ್ಮರ ಹೃದಯಮನೇ ಕಲಗಿಪೆ! ನೀಂ ಸತ ಪುಲಿಯನಿರಿವಂತಿರೆ ಕೇ। ಳೆಲೆಮದನೆ! ಯೋಗಬಲಸಿ ಶೈಲಹೃದಯರ ಮುಂದೆ ನಿನ್ನ ಬಲಮೇಗೆಯ್ಯುಂ !! ಮನ್ಮಥಂ-ದೇವರ್ಷಿ : ಈ ಸಿನ್ನ ದೋಷರೋಪಣವೂ ಸಮಂಜಸವಲ್ಲ! ಯೋಗಬಲದಲ್ಲಿಯೂ, ಇಂದ್ರಿಯಜಯದಲ್ಲಿಯೂ, ತಪಸ್ಸಿನ ಕ್ಲಿಯೂ ವಿಶ್ವಾಮಿತ್ರಮಹರ್ಷಿಯು ನಿಮ್ಮೆಲ್ಲರನ್ನೂ ಮೀರಿಸಿ ದವನಲ್ಲವೆ ? ಅವನೂಕೂಡ ಮೇನಕೆಯಲ್ಲಿ ಮೋಹಪರಶನಾ ಗುವಂತೆ ಮಾಡಿದವನು ನಾನಲ್ಲವೆ ? ಮಹಾತಪಸ್ವಿಯೆನಿಸಿಕೊಂ ಡ ಆ ವಿಶ್ವಾಮಿತ್ರನ ತಪೋಜ್ವಾಲೆಯಿಂದ ಲೋಕವೆಲ್ಲವೂ ದಗ್ಧ ವಾಗುತಿದ್ದಾಗ, ಈ ಇಂದ್ರನ ಪ್ರೇರಣೆಯಿಂದ ನಾನು ಹೋ ಗಿ,ಅವನ ಮನಸ್ಸನ್ನು ಕದಲಿಸಿದುದರಿಂದಲ್ಲವೇ, ಇದುವರೆಗೆ ಇ೦ ವಾಟಿಕೆಗಳೆಲ್ಲವೂ ಕ್ಷೇಮದಿಂದಿರುವಂತಾಯಿತು! ಆ ವಿ ಶ್ವಾಮಿತ್ರನ ಸಂಗತಿಯೂ ಹಾಗಿರಲಿ ! ಕೇಳು. ಕಂ ಪರಮತ ಪೋಸಿಧಿಯೆನಿಸಿದ ಹರಂಗೆ ನಾಂ ಗಿರಿಜೆಯಲ್ಲಿ ಮೋಹ೦ಕುರಮಂ ನೆಪದಿರಲ€ ತಾಕಸಂ ಹರಣಕ್ಕೆವಕಾಶವಿನ್ನದೆತ್ತಣಿನಕ್ಕುಂ?|| ಆ ಪರಮಶಿವನು ಪಾರತಿಯನ್ನು ಮೋಹಿಸಿ, ಅವಳಲ್ಲಿ ತನ್ನ ತೇಜಸ್ಸಿನಿಂದ ಷಣ್ಮುಖನನ್ನು ಪಡೆದುದರಿಂದಲ್ಲವೇ, ಲೋಕ ಕಂಟಕನಾದ ಆ ತಾರಕಾಸುರನ ಬಾಧೆಯು ತಪ್ಪಿ,ತೈಲೋಕ್ಯ ಕೂ ಕ್ಷೇಮವುಂಟಾಯಿತು. ಆ ರುದ್ರನಿಗಿಂತಲೂ ಲೋಕದಲ್ಲಿ ಜಿತೇಂದ್ರಿಯರು ಬೇರೊಬ್ಬರುಂಟೆ? ಆ ರುದ್ರನೇ ಕಾಲವಶದಿಂ ದ ನನ್ನ ಕಾಮಪಾಶಕ್ಕೆ ಸಿಕ್ಕಿಬಿದ್ದಿರುವಾಗ ಇತರರ ಮಾತೇನು! ನಾರದಮುನೀಂದ್ರಾ ! ಹೆಚ್ಚು ಮಾತಿನಿಂದೇನು ? ಕಾಲ ವು ಅನುಕೂಲಿಸಿಬಂದರೆ, ನೀನೂ ಎಂದಾದರೂ ಒಮ್ಮೆ ನನ್ನ