ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೨ ಶ್ರೀಮದ್ಭಾಗವತವು | [ಅಧ್ಯಾ, ೬೦. ರುಕ್ಕೋಣಿಯ ಮನಸ್ಸಿನಲ್ಲಿ ತನಗಿಂತಲೂ ಕೃಷ್ಣನಿಗೆ ಬೇರೆ ಪ್ರಿಯ ಜನವಿಲ್ಲವೆಂದೂ, ತನ್ನನ್ನು ಕ್ಷಣಮಾತ್ರವೂ ಬಿಟ್ಟಿರಲಾರನೆಂದೂ, ಹುಟ್ಟಿದ ಹೆಮ್ಮೆಯನ್ನು ನೀಗಿಸುವುದಕ್ಕಾಗಿ ಕೃಷ್ಣನು ಇಷ್ಟು ಮಾತ್ರವನ್ನು ಹೇಳಿ ಸುಮ್ಮನಾದನು. ತ್ರಿಲೋಕಥಿಪತಿಯಾಗಿಯೂ, ತನಗೆ ಪ್ರಾಣೇಶ ನಾಗಿಯೂ ಇರುವ ಕೃಷ್ಣನ ಬಾಯಿಂದ ಹೊರಟ ಲೋಕವಿಪರೀತವಾದ ವಾಕ್ಯವನ್ನು ಕೇಳಿ ರುಕ್ಕಿಣಿಯ ಎದೆಯು ನಡುಗಿತು, ಮಹತ್ತಾದ ಚಿಂತೆ ಯಿಂದ ನಡುಗುತ್ತ ಅಳುವುದಕ್ಕೂ ತೊಡಗಿದಳು.ತಲೆಯೆತ್ತಲಾರದೆ ತನ್ನ ಕಾಲುಗುರುಗಳಿಂದ ನೆಲವನ್ನು ಗೀರುತಿದ್ದಳು.ಸನದ ಮೇಲಿನ ಕುಂಕುಮ ವೆಲ್ಲವೂ ಕದಲುವಂತೆ ಅವಳ ಕಣ್ಣುಗಳಿಂದ ಧಾರೆಧಾರೆಯಾಗಿ ನೀರು ಹರಿ ಯುತಿತ್ತು.ಬಾಯಿಂದ ಮಾತುಗಳು ಹೊರಡದಂತಾದುವು.ಭಯದಿಂದಲೂ, ದುಃಖದಿಂದಲೂ ಹಾಗೆಯೇ ಪ್ರಜ್ಞೆ ತಪ್ಪಿದಂತಾಯಿತು. ಅವಳಿಗೂ ತಿಳಿಯ ದಹಾಗೆ ಅವಳು ಹಿಡಿದಿದ್ದ ಚಾಮರವು ಜಾರಿಬಿದ್ದಿತು. ಬಿರುಗಾಳಿಯಿಂದ ಮುರಿದುಬಿದ್ದ ಬಾಳೆಯ ಗಿಡದಂತೆ ಅವಳೂ ಮೂರ್ಛಯಿಂದ ಕೆಳಗೆ ಬಿದ್ದು ಬಿಟ್ಟಳು.ಅವಳ ತಲೆಕೂದಲುಗಳೆಲ್ಲವೂ ಕೆದರಿಹೋದುವು. ಇದನ್ನು ನೋಡಿ ಕೃಷ್ಣನು, ಅವಳಿಗೆ ತನ್ನ ಕ್ಲಿರುವ ಅಸಾಧಾರಣವಾದ ಪ್ರೇಮಪಾಶವನ್ನು ತಿಳಿ ದು,ಮನಸ್ಸಿನಲ್ಲಿ ಸಂತೋಷಪಡುತಿದ್ದನು.ತಾನು ಕೇವಲಹಾಸ್ಯಕ್ಕಾಗಿ ಹೇಳಿ ದ ಆಮಾತಿನ ರಹಸ್ಯವನ್ನು ತಿಳಿಯಲಾರದೆ,ಸಂಕಟದಿಂದ ಮೂರ್ಛಿತಳಾದ ಆಕೆಯವಿಷಯದಲ್ಲಿ; ಅವನಿಗೆ ಕನಿಕರವು ಹುಟ್ಟಿತು. ಭಯಚಕಿತನಾ ದಂತೆ ತೋರಿಸುತ್ತ, ತಾನು ಕುಳಿತಿದ್ದ ಮಂಚದಿಂದ ಥಟ್ಟನೆ ಕೆಳಗಿಳಿದು ಬಂದು, ಅವಳನ್ನು ಕೈಹಿಡಿದು ಮೇಲಕ್ಕೆತ್ತಿದನು. ಅವಳ ಕೆದರಿದ ಕೇಶಪಾ ಶಗಳನ್ನು ತಿದ್ದಿ ಸರಿಮಾಡಿದನು. ಕಮಲದಂತಿರುವ ತನ್ನ ಕೈಯಿಂದ ಅವಳ ಮುಖದ ಬೆವರನ್ನೊರೆಸಿದನು. ಕಣ್ಣುಗಳಲ್ಲಿಯೂ, ಸ್ತನಾಗ್ರದಲ್ಲಿಯೂ, ಬಿದ್ದಿದ್ದ ಕಣ್ಣೀರನ್ನೊ ರಸಿದನು, ತನ್ನಲ್ಲಿಯೇ ನಟ್ಟ ಮನಸ್ಸುಳ್ಳ ಆಕೆಯನ್ನು ಎರಡು ತೋಳುಗಳಿಂದಲೂ ಆಲಿಂಗಿಸಿದನು. ತಾನು ಕೇವಲಹಾಸ್ಯಕ್ಕಾಗಿ ಹೇಳಿದ ಮಾತನ್ನೂ ಸಹಿಸಲಾರದೆ, ದೈನ್ಯದಿಂದ ಕಳವಳಿಸುತ್ತಿದ್ದ ಸುಕು ಮಾರಾಂಗಿಯಾದ ಆಕೆಯನ್ನು ಹೀಗೆಂದು ಸಮಾಧಾನಪಡಿಸತೊಡಗಿದನು.