ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೫ ಆಧ್ಯಾ, 40.] ದಶಮಸ್ಕಂಧವು. ರಿಗೇ ನಿನ್ನ ಮೂಲವನ್ನು ಹೀಗೆಂದು ತಿಳಿಯಲು ಸಾಧ್ಯವಿಲ್ಲದಿರುವಾಗ, ಬೇರೆ ಸಾಮಾನ್ಯ ಜನರಿಗೆ ನಿನ್ನ ಕುಲರೂಪಜನ್ಮಾದಿಗಳು ಹೇಗೆತಾನೇ ತಿಳಿಯು ವುವು ? ಆಹಾರ, ನಿದ್ರೆ ಮೈಥುನಾದಿಗಳಲ್ಲಿ ಮಾತ್ರ ಕಾಲವನ್ನು ಕಳೆಯುತ್ತ ಪಶುಪ್ರಾಯರಾಗಿರುವ ಪ್ರಾಕೃತಮನುಷ್ಯರಿಗೆ ನಿನ್ನ ಸ್ಥಿತಿಯನ್ನು ಹೀಗೆಂ ದೊಹಿಸಿನೋಡುವುದಕ್ಕೂ ಶಕ್ಯವಲ್ಲ. ನನ್ನ ನಡತೆಯು ಲೋಕವಿಪರೀತ ವಾ ದು” ದೆಂದು ಹೇಳಿದೆಯಲ್ಲವೆ? ನಿನ್ನ ದುಮಾತ್ರವೇನು? ನಿನ್ನನ್ನು ಅನುವ ರ್ತಿಸಿ ಸೇವಿಸತಕ್ಕವರ ನಡತೆಯೂ, ಲೋಕವಿಲಕ್ಷಣವಾಗಿಯೇ ಇರುವುದು. ಹೀಗಿರುವಾಗ ಅಪರಿಚ್ಛಿನ್ನ ನಾಗಿಯೂ, ಸತ್ಯೇಶ್ವರನಾಗಿಯೂ ಇರುವ ನಿನ್ನ ನಡತೆಯು ಲೋಕಮತ್ಯಾದೆಯನ್ನು ಮೀರಿರುವುದೆಂದು ಹೇಳಬೇಕಾದು ದೇನು ? ('ನಾವು ಅಕಿಂಚನರೆಂದು ಹೇಳಿದೆ ಯಲ್ಲವೆ? ನಾಥಾ: ನೀನು ಹೊಂದಬೇ ಕಾದುದು ಕಿಂಚಿತ್ತಾದರೂ ಸ್ವಲ್ಪ ಮಾತ್ರವೂ) ಇಲ್ಲದುದರಿಂದ ನೀನು ನಿಷಿಂಚನನೆಂಬುದೂ ವಾಸ್ತವವೇ, ಲೋಕಪೂಜ್ಯರಾದ ಬ್ರಹ್ಮಾದಿ ಗಳ ಯಾವ ಸಿನಗೆ ಪೂಜೆಯನ್ನರ್ಪಿಸುವರೋ, ಅಂತಹ ಸರೈಶ್ವರನಾದ ನಿನ್ನ ಐಶ್ವರಕ್ಕೆ ಕಡಿಮೆಯೇನಿರುವುದು? ನಾವು ಬಡವರನ್ನೇ ಪ್ರೀತಿಸುವೆ” ವೆಂದು ನೀನು ಹೇಳಿದ ಮಾತೂ ನಿಜವೇ ? ಏಕೆಂದರೆ, ಅನನ್ಯಪ್ರ ಯೋಜನರಾದ ಯೋಗಿಗಳನ್ನೇ ನೀನು ಪ್ರೀತಿಸುವೆ : ಕುಲ, ರೂಪ, ಭಾಗ್ಯ ಮೊದಲಾದುವುಗಳಿಂದ ಮದಾಂಧರಾಗಿರುವವರು ನಿನ್ನನ್ನು ನೆನೆಯ ಲಾರರು. ಅವರು ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲಿಯೇ ನಿರತರಾಗಿರುವರು. ' ಕುಲ, ರೂಪ,ಧನಾದಿಗಳಲ್ಲಿ ಅನುರೂಪರಾಗಿಬ್ಯಾಗಲೇ ವಿವಾಹವೂ, ಸ್ನೇಹವೂ ಶೋಭಿಸುವು” ದೆಂದು ಹೇಳಿದೆ ! ನಾಥಾ ! ನೀನೇ ಸಮಸ್ತ ಪುರುಷಾರ್ಥ ಸ್ವರೂಪನು, ಚತುರ್ವಿಧಪುರುಷಾರ್ಥನಿರ್ವಾ ಹಕನಾಗಿಯ, ಪೂರ್ಣ ಕಾಮನಾಗಿಯೂ, ನಿತ್ಯಾನಂದಸ್ವರೂಪನಾ ಗಿಯೂ ಇರುವ ನಿನಗೆ ಅಲ್ಪಸುಖಸಾಧಕಗಳಾದ, ಗೃಹಧನಾದಿಗಳಲ್ಲಿ ಆಸೆ ಯುಳ್ಳವರೊಡನೆ ಹೇಗೆತಾನೇ ಹೋಲಿಕೆ ಯುಂಟಾಗುವುದು? " ಹಾಗೆ ಯಾರೂ ನನಗೆ ಸಮಾನರಲ್ಲದುದರಿಂದಲೇ, ನಿನಗೂ, ನನಗೂ ವಿವಾಹ ಸಂಬಂಧವೂ ಸರಿಯಲ್ಲ ” ವೆಂದು ಹೇಳುವೆಯೇನು? ನಾಥಾ ! ನಾನು ನಿನಗೆ