ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೮ ಶ್ರೀಮದ್ಭಾಗವತವು (ಅಧ್ಯಾ, ೬೦, ವ ನಿನ್ನ ಕಥೆಗಳನ್ನು ಒಂದಾವರ್ತಿಯಾದರೂ ಕಿವಿಯಿಂದ ಕೇಳುವಭಾಗ್ಯಕ್ಕೆ ಪಾತ್ರಗಲ್ಲವೋ, ಅಂತಹ ದುರ್ಭಾಗ್ಯಸ್ತ್ರೀಯರಿಗೆ ಆ ರಾಜರು ಪತಿಗಳಾಗಲಿ! ಓ, ದೇವಾ! ನಿನ್ನ ಪಾದಾರವಿಂದಮಕರಂದವನ್ನು ಒಂದಾವರ್ತಿಯಾದರೂ ಅನುಭವಿಸದ ಸ್ತ್ರೀಯರುಮಾತ್ರವೇ, ಇತರಪುರುಷರನ್ನು ತಮಗೆ ಪತಿಯೆಂ ಬ ಮೋಹಬುದ್ದಿಯಿಂದ ಭಜಿಸಬೇಕಲ್ಲದೆ ಬೇರೆಯಲ್ಲ, ಹೊರಗೆ, ಚರ್ಮ, ಉಗುರು, ಕೂದಲು, ಮೀಸೆ, ಮುಂತಾದುವುಗಳಿಂದ ಮುಚ್ಚಲ್ಪಟ್ಟು, ಒಳಗೆ ರಕ್ತ ಮಾಂಸ, ಮೂಳೆ, ಕ್ರಿಮಿಗಳು, ಮಲಮೂತ್ರಗಳು, ವಾತ, ಪಿತ್ಯ, ಕಫ ಮೊದಲಾದುವುಗಳಿಂದ ತುಂಬಿ, ಜೀವಚ್ಛವವೆನಿಸಿಕೊಳ್ಳತಕ್ಕ ಪುರುಷ ಶರೀರವನ್ನು ತನಗೆ ಪತಿಯೆಂಬ ಭಾವದಿಂದ ಮೋಹಿಸುವುದು ಕೇವಲ ಮೌ ಗ್ಯವಲ್ಲವೆ ? ಅಂತಹ ಪರುಷಾಧಮನನ್ನು ಕೇವಲ ಮೂಢಸಿಯರೇ ತನಗೆ ಕಾಂತನೆಂದು ತಿಳಿದು ಭಜಿಸುವರು, ನೀವು ಸಮಸ್ಯವಿಷಯದಲ್ಲಿಯೂ ಉJಸೀನನೆಂದು ಹೇಳಿಕೊಂಡೆಯಲ್ಲವೆ ? ಅದೂ ನ್ಯಾಯವೆ ? ಪೂರ್ಣ ಕಾಮನಾಗಿ, ಆತ್ಮಾರಾಮನಾಗಿರುವ ನಿನಗೆ ಬೇರೆ ಯಾವದರಲ್ಲಿ ತಾನೇ ಆಸೆಗೆ ಕಾರಣವುಂಟು. ನೀನು ನನ್ನ ವಿಷಯದಲ್ಲಿ ಕಾಮರಹಿತನಾಗಿದ್ದ ರೂ, ನನಗೆ ನಿನ್ನ ಪಾದಸೇವೆಯಲ್ಲಿ ನಿತ್ಯವಾದ ಅನುರಾಗವಿರಲಿ! ನೀನು ವಾ ಸವದಲ್ಲಿ ಸಮಸ್ತಲೋಕಸುಖಗಳಲ್ಲಿಯೂ ಉದಾಸೀನನಾಗಿ, ಹೊರಗೆ ಮಾತ್ರ ಗೃಹಸ್ಥಧರ್ಮಗಳನ್ನು ಅಭಿನಯಿಸುತ್ತಿರುವೆಯಲ್ಲವೆ ? ನನಗೂ ಹಾಗೆಯೇ ನಿನ್ನ ಪಾದಸೇವೆಯಲ್ಲಿ ಮಾತ್ರ ಅನುರಾಗವಿದ್ದರೆ ಸಾಕು ! ಅದಕ್ಕಿಂತ ಹೆಚ್ಚಾಗಿ ಬೇರೆ ಸುಖವನ್ನು ನಾನೇನೂ ಅಪೇಕ್ಷಿಸುವಹಾಗಿಲ್ಲ ಓ! ದೇವಾ ! ಯಾವಾಗ ನೀನು ಈ ಜಗತ್ತನ್ನು ವೃದ್ಧಿಗೊಳಿಸುವುದಕ್ಕಾಗಿ ಸೃ ಷಿಕಾರಕ್ಕೆ ಸಾಧನವಾದ ರಜೋಗುಣವನ್ನು ಹೆಚ್ಚಾಗಿ ಸ್ವೀಕರಿಸುವೆ ಯೋ,ಆಗ ಅದೇ ರಜೋಗುಣದ ಪ್ರಾಬಲ್ಯದಿಂದ ನನ್ನನ್ನು ಪ್ರೇಮಪೂರೈಕ ವಾಗಿ ನೋಡುವೆ. ಆ ನಿನ್ನ ನೋಟಕ್ಕಿಂತಲೂ ನನಗೆ ನೀನು ತೋರಿಸತಕ್ಕ ಅತಿಶಯವಾದ ಅನುಗ್ರಹವೇನುಂಟು ? ಮಧುಸೂಧನಾ ! ನೀನು ನನ್ನನ್ನು ಕುರಿತು (ಸಿನಗೆ ಅನುರೂಪನಾದ ಬೇರೆ ಯಾವನಾದರೂ ಪತಿಯನ್ನು ನೋ ಡಿಕೊಳ್ಳುವಂತೆ ಹೇಳಿದೆಯಲ್ಲವೆ ! ಸಾಮಾನ್ಯ ಸ್ತ್ರೀಯರ ವಿಷಯದಲ್ಲಿ