ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೨ ಶ್ರೀಮದ್ಭಾಗವತವು [ಅಧ್ಯಾ. ೬೪. ಹೋದರು. ಹೀಗೆ ಸಕಲಸಂಭ್ರಮದೊಡನೆ ಕೃಷ್ಣನು ಪುರಪ್ರವೇಶವನ್ನು ಮಾಡಿದನು. ಓ ಪರೀಕ್ಷಿದ್ರಾಜಾ ! ಯಾವನು ಕೃಷ್ಣನಿಗೂ, ರುದ್ರನಿಗೂ ನಡೆದ ಈ ಯುದ್ಧವನ್ನೂ , ಕೃಷ್ಣ ವಿಜಯವನ್ನೂ, ಪ್ರಾತಃಕಾಲದಲ್ಲಿ ಸ್ಮರಿ ಸುವನೋ, ಅವನಿಗೆ ಎಂದಿಗೂ ಪರಾಜಯವಿಲ್ಲವು.ಇದು ಅರುವತ್ತು ಮೂರ ನೆಯ ಅಧ್ಯಾಯವು. +4 ಗೋಪಾಖ್ಯಾನವು.+ - ಓ ಪರೀಕ್ಷಿದ್ರಾಜಾ ! ಒಮ್ಮೆ ಸಾಂಬ, ಪ್ರದ್ಯುನ್ನು , ಚಾರುಭಾನು, ಗದ, ಮೊದಲಾದ ಯಾದವಕುಮಾರರೆಲ್ಲರೂ ವನವಿಹಾರಾರ್ಥವಾಗಿ ಕಾಡಿಗೆ ಹೋಗಿ, ಅಲ್ಲಿ ಬಹಳಹೊತ್ತಿನವರೆಗೆ ಆಟವಾಡುತ್ತಿರು ಬಿಸಿಲಿನಲ್ಲಿ ಸುತ್ತಿ ಬಹಳವಾಗಿ ಬಳಲಿದುದರಿಂದ, ಅವರಿಗೆ ಬಾಯಾರಿಕೆಯು ತೋರಿತು. ಸೀರನ್ನು ಹುಡುಕುತ್ತ ಬರುವಾಗ ಮುಂದೆ ಒಂದಾನೊಂದು ಕಾಳು ಬಾವಿಯು ಕಾಣಿಸಿತು. ನೀರಿಲ್ಲದೆ ಒಣಗಿಹೋಗಿದ್ಯ ಆ ಬಾವಿಯಲ್ಲಿ ಅದ್ಭುತಾ ಕಾರವುಳ್ಳ ಒಂ:ತಾನೊಂದು ಕೃಕಲಾಸವು ಹೆಂಟೆಗೊಡ್ಡ ಅಥವಾ ಓತೀಕೇ ತವು ಬಿದ್ದು, ಅತ್ತಿತ್ತ ಕದಲಲಾರದೆ ನರಳುತ್ತಿರುವುದನ್ನು ಕಂಡರು. ಪರೈತದಂತೆ ಬಿದ್ದಿರುವ ಆ ದೊಡ್ಡ ಪ್ರಾಣಿಯನ್ನು ನೋಡಿ ಆಶ್ವರಪಡುತ್ತ, ಅದರ ಕಷ್ಟವನ್ನು ನೋಡಿ ಕನಿಕರದಿಂದ, ಅದನ್ನು ಆ ಬಾವಿಯಿಂದ ಮೇಲಕ್ಕೆ ತಂದುಬಿಡಬೇಕೆಂದು ಯತ್ನಿಸಿದರು, ಅದ್ಭುತಾಕಾರವುಳ್ಳ 13 ಜಂತುವನ್ನು ಸುಲಭವಾಗಿ ಕೈಯಿಂದ ತರುವುದಕ್ಕೆ ಸಾಧ್ಯವಿಲ್ಲದೆ, ಚರದ ಕಗ್ಗ ಳನ್ನೂ ನೂಲುಹಗ್ಗಗಳನ್ನೂ ಜೋಡಿಸಿತಂದು, ಅದರ ಮೈಗೆ ಸುತ್ತಿ, ಎಲ್ಲರೂ ಪ್ರಯತ್ನ ಪೂರೈಕವಾಗಿ ಎಳೆಯಲಾರಂಭಿಸಿದರು. ಆಗಲೂ ಅವರಿಂದ ಸಾಧ್ಯವಾಗಲಿಲ್ಲ. ಆಮೇಲೆ ಆಶ್ಚರದಿಂದ ಎಲ್ಲರೂ ಬಂದು ಕೃಷ್ಣನಿಗೆ ಆ ಸಂಗತಿಯನ್ನು ತಿಳಿಸಿದರು. ಲೋಕನಿರ್ವಾಹಕನಾದ ಕೃಷ್ಣನು, ತಾನೂ ಆಶ್ವ ವ್ಯವನ್ನು ನಟಿಸುತ್ತ, ಆ ಬಾವಿಯಬಳಿಗೆ ಬಂದು ನೋಡಿ, ತನ್ನ ಎಡಗೈ ಯಿಂದಲೇ ಅದನ್ನು ಅನಾಯಾಸವಾಗಿ ಮೇಲಕ್ಕೆತ್ತಿ ಹೊರಕ್ಕೆ ತಂದು ಬಿಟ್ಟನು. ಭಗವಂತನ ಹಸ್ತಸ್ಪರ್ಶವಾದೊಡನೆ ಆ ಜಂತುವಿಗೆ ಮೊದ