ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೨ ಶ್ರೀಮದ್ಭಾಗವತವು [ಅಧ್ಯಾ, ೬ ೭. ಮನಮೇಲೆ ಪ್ರಯೋಗಿಸಿದನು, ಆ ಮರವು ಮೇಲೆ ಬಿಳುವಷ್ಟರಲ್ಲಿಯೇ, ಬಲರಾಮನು ಅದನ್ನು ತುಂಡುತುಂಡಾಗಿ ಕತ್ತರಿಸಿಬಿಟ್ಟನು. ಆಮೇಲೆ ಆಕಸಿಯು, ಮತ್ತೊಂದು ಮರವನ್ನು ಕಿತ್ತೆಸೆಯಲು, ಆದನ್ನೂ ಬಲರಾಮನು ಕತ್ತರಿಸಿ ಕೆಡಹಿದನು. ಹೀಗೆಯೇ ದ್ವಿವಿದನು, ಆ ಅರಣ್ಯದಲ್ಲಿದ್ದ ವೃಕ್ಷಗಳೆ ಲ್ಲವನ್ನೂ ಕಿತ್ತುಕಿತು ಬಲರಾಮರಮೆಲೆ ಪ್ರಯೋಗಿಸುತ್ಯ, ಆ ಕಾಡಿ ನಲ್ಲಿ ಒಂದು ಮರವಾದರೂ ಕಾಣದಂತೆ ಮಾಡಿದನು. ಆ ಒಂದೊಂದು ವೃಕ್ಷವನ್ನೂ ಬಲರಾಮನು ತನ್ನ ಬಾಣಗಳಿಂದ ವಿಫಲವಾಗಿ ಮಾಡುತ್ತ ಬಂದನು, ಕೊನೆಗೆ ಸಿದನು, ಅಲ್ಲಿ ವೃಕ್ಷಗಳೊಂದೂ ತನಗೆ ಸಿಕ್ಕದುದನ್ನು ನೋಡಿ, ಬಲರಾಮನಮೇಲೆ ಶಿಲಾವರ್ಷವನ್ನು ಕರೆಯುವುದಕ್ರಾರಂಭಿಸಿ ದನು, ಅವುಗಳನ್ನೂ ಬಲರಾಮನು ತನ್ನ ಮಸಲಾಯುಧಂದ ಭೇಷಿಸುತ್ತ ಬಂದನು, ಆ ಕಾಡಿನಲ್ಲಿದ್ದ ಕಲ್ಲುಗಳೂ ತೀರಿಹೋದಮೇಲೆ, ದ್ವಿವಿದನು ತಾಲಪ್ರಮಾಣವುಳ್ಳ ತನ್ನ ತೋಳುಗಳನ್ನೇ ಮುಷ್ಟಿ ಹಿಡಿದು, ಆ ಮುಷ್ಟಿ ಗಳಿಂದ ಬಲರಾಮನ ಎದೆಯಮೇಲೆ ಅಪ್ಪಳಿಸಿದನು, ಆದನ್ನು ನೋಡಿ ಬಲ ರಾಮನೂಡ, ತನ್ನ ಕೈಯಲ್ಲಿದ್ದ ಹಲಮುಸಲಾಯುಧಗಳೆರಡನ್ನೂ ಹಿಂದೆ ಬಿಸುಟು, ತಾನೂ ವಜ್ರಮುಷ್ಠಿ ಯನ್ನು ಹಿಡಿದು, ಆ ದ್ವಿವಿದನ ಹೆಕ್ಕತ್ತಿನ ಮೇಲೆ ಹೊಡೆದನು. ಒಡನೆಯೇ ದ್ವಿವಿದನು, ಆ ಮುಷ್ಠಿಪ್ರಹಾರವನ್ನು ತಡೆ ಯಲಾರದೆ, ರಕ್ತವನ್ನು ಕಾಯುತ್ತ ಕೆಳಗೆ ಬಿದ್ದನು. ಆ ವಾನರನು ಕೆಳಗೆ ಬಿಳುವಾಗ, ರೈವತಕಪತವೆಲ್ಲವೂ ಬಿರುಗಾಳಿಗೆ ಸಿಕ್ಕಿದ ಹಡಗಿನಂತೆ ಕಂಪಿಸುತಿತ್ತು. ದುಷ್ಯನಾದ ದ್ವಿವಿದನು ಹತನಾಗಿ ಬಿದ್ದುದನ್ನು ನೋಡಿ, ಆಕಾಶದಲ್ಲಿ ದೇವತೆಗಳೂ, ಸಿದ್ದರೂ, ದೇವರ್ಷಿಗಳೂ ಜಯಶಬ್ದದಿಂದಲೂ, ನಮಶ್ಯಬ್ದದಿಂದಲೂ ಬಲರಾಮನನ್ನು ಕೊಂಡಾಡುತ್ತ, ಅವನಮೇಲೆ ಪು ಹೃವೃಷಿಯನ್ನು ಕರೆದರು, ಓ! ಪರೀಕ್ಷಿ ಬ್ರಾಜಾ ! ಹೀಗೆ ಬಲರಾಮನು ಲೋಕಕಂಟಕನಾದ ದ್ವಿವಿದನೆಂಬ ವಾನರನನ್ನು ಸಂಹರಿಸಿ, ಪುರವಾಸಿ ಗಳಿಂದ ಸ್ತುತಿಸಲ್ಪಡುತ್ಯ, ದ್ವಾರಕೆಯನ್ನು ಪ್ರವೇಶಿಸಿದನು. ಇದು ಅರುವತ್ತೇಳನೆಯ ಅಧ್ಯಾಯವು.