ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೩ ಅಧ್ಯಾ. ೬೮.] ದಶಮಸ್ಕಂಧವು. { ಬಲರಾಮನ್ನು ಹಸ್ತಿನಾವತೀಪಟ್ಟಣವನ್ನು ತನ್ನ } ಬಲರಾಮನು ಹಸ್ತಿನಾವತೀಪಟ್ಟಣವನ ನೇಗಿಲಿನಿಂದ ಎಳೆದುದು. ಓ ! ಪರೀಕ್ಷಿದ್ರಾಜಾ ! ದುರೋಧನನಿಗೆ ಲಕ್ಷಣೆಯೆಂಬೊಬ್ಬ ಕಸ್ಯೆಯಿದ್ದಳು. ಅವಳ ಸ್ವಯಂವರಕಾಲದಲ್ಲಿ ಜಾಂಬವತೀಪುತ್ರನಾದ ಸಾಂಬನೆಂಬ ಯಾದವಕುಮಾರನು, ದುಧನನ ಅನುಮತಿಯಿಲ್ಲದೆ ಅವಳನ್ನು ಅಪಹರಿಸಿಕೊಂಡು ಹೋದನು. ಇದರಿಂದ ಕ7ರವರೆಲ್ಲರೂ, ಕೋಪಗೊಂಡವರಾಗಿ, ತಮ್ಮೊಳಗೆ ತಾವು ಹೀಗೆಂದು ಮಂತ್ರಾಲೋಚನೆ ಯನ್ನು ನಡೆಸಿದರು. “ಆಹಾ ! ದುರ್ವಿನೀತನಾದ ಆ ಸಾಂಬನ್ನು, ನಮ್ಮನ್ನೂ ಲಕ್ಷಮಾಡದೆ, ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿರುವನು. ಆ ಕನ್ಯಕೆಯು ಅವನಲ್ಲಿ ಪ್ರೀತಿಯನ್ನು ತೋರಿಸದಿದ್ದರೂ, ಅವಳನ್ನು ಬಲಾ ತರಿಸಿ ಕರೆದುಕೊಂಡು ಹೋಗಿರುವನು. ಇರಲಿ! ಅವನಿಗೆ ತಕ್ಕ ಶಿಕ್ಷೆಯನ್ನು ಮಾಡವೆ ತೀಗದು! ನಾವೆಲ್ಲರೂ ಸೇರಿ ಆ ಸಾಂಬವನ್ನು ಹಿಡಿದುಕಟ್ಟೆ ತರುವೆವು! ಆಗ ಅವನ ಕಡೆ ಯವರಾದ ವೃತ್ತಿಗಳು ನಮ್ಮನ್ನೇನು ಮಾಡ ಬಲ್ಲರು! ಅವರೆಲ್ಲರೂ, ನಾವು ನಮ್ಮ ಪರಾಕ್ರಮದಿಂದ ಸಂಪಾದಿಸಿಕೊಟ್ಟ ರಾಜ್ಯವನ್ನೇ ಅನುಭವಿಸತಕ್ಕವರು, ಈಗ ನಾವು ಅವರ ಕಡೆಯವನಾದ ಈ ಸಾಂಬನೆಂಬ ಬಾಲಕನನ್ನು ಹಿಡಿದು ಬಂಧಿಸಿದಮೇಲೆ, ಅವರೇನಾದರೂ ನಮ್ಮೊಡನೆ ಯುದ್ಧಕ್ಕೆ ಬಂದರೆ, ಇದೇ ನೆವದಿಂದ ನಾವು ಅವರ ಹೆಮ್ಮೆ ಯನ್ನಡಗಿಸಬಹುದು. ಪ್ರಾಣಾಯಾಮಾದಿಗಳಿಂದ ಇಂದ್ರಿಯಗಳನ್ನು ಹೇಗೋಹಾಗೆ, ಅವರನ್ನು ನಮ್ಮ ಶ್ರದಿಂದ ಉಸಿರೆತ್ತದಹಾಗೆ ಮಾಡ ಬಹುದು" ಎಂದರು. ಹೀಗೆ ತಮ್ಮೊಳಗೆ ತಾವು ನಿಶ್ಚಯಿಸಿಕೊಂಡು, ಈ ವಿಷಯದಲ್ಲಿ ಧೃತರಾಷ್ಟ್ರನೇ ಮೊದಲಾದ ಕುರುವೃದ್ದರ ಅನುಮತಿ ಯನ್ನೂ ಪಡೆದು, ಆ ಸಾಂಬನನ್ನು ಹಿಡಿದು ಕಟ್ಟುವುದಕ್ಕಾಗಿ, ಕರ್ಣ, ಶಲ್ಯ, ಭೂರಿಶ್ರವಸ್ಸು, ಯಜ್ಞಕೇತು, ದುರೊಧನನೇ ಮೊದಲಾದವರೆಲ್ಲ ರೂ ಹೊರಟರು. ಹೀಗೆ ಮಹಾರಥರಾದ ಕರ್ಣಾದಿಗಳೆಲ್ಲರೂ ಬೆನ್ನಟ್ಟಿ ಬರುವಾಗಲೂ, ಸಾಂಬನು ಧೈರಗುಂದದೆ, ತನ್ನ ಧನುಸ್ಸನ್ನು ಕೈಗೆತ್ತಿಕೊಂಡು, ಆನೆಗಳನ್ನಿ ದಿರಿಸುವ ಸಿಂಹದಂತೆ, ತಾನೊ