ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೯] ದಶಮಸ್ಕಂಧವು. ೨೨೩೧ ವೇ ಆಶ್ಚರವು! ಆ ಕೃಷ್ಣನು, ತನ್ನ ಒಂದೇ ಶರೀರದಿಂದ ಹದಿನಾರುಸಾವಿರ ಮಂದಿ ಸ್ತ್ರೀಯರ ಮನೆಗಳಲ್ಲಿಯೂ ಬೇರೆಬೇರೆಯಾಗಿ ಏಕಕಾಲದಲ್ಲಿ ಕಲೆತಿ ದ್ರ, ಅವರೆಲ್ಲರನ್ನೂ ಸಂತೋಷಪಡಿಸುವುದು ಹೇಗೆಂಬುದನ್ನು ಕಣ್ಣಾರೆ ನೋ ಡಿಬರಬೇಕು.” ಎಂಬ ಆಸೆಯಿಂದ ದ್ವಾರಕಾಪುರವನ್ನು ಪ್ರವೇಶಿಸಿದನು.ಆಗ ಆ ಪಟ್ಟಣದ ಸೊಬಗನ್ನು ಕೇಳಬೇಕೆ ? ಎಲ್ಲಿ ನೋಡಿದರೂ ಪುಷ್ಪಸಮೃದ್ಧ ವಾದ ಉಪವನಗಳು! ಅವುಗಳಲ್ಲಿ ಕರ್ಣಾಮೃತಪ್ರಾಯವಾಗಿ ಕೂಗುತ್ತಿ ರುವ ಪಕ್ಷಿಗಳ, ಮತ್ತು ಭ್ರಮರಗಳ ಕೋಲಾಹಲಧ್ವನಿ ! ಅಲ್ಲಲ್ಲಿ ಕಮಲ, ಕಹ್ಲಾದ, ಕುಮುದ, ಉತ್ಸಲ, ಮೊದಲಾದ ನೀರು ಹೂಗಳಿಂದ ಕಂಗೊಳಿಸುವ ಸರೋವರಗಳು ! ಆ ಸರೋವರಗಳಲ್ಲಿ ಕಿವಿಗಿಂಪಾಗಿ ಕೂಗುತ್ತಿರುವ ಹಂಸಸಾರಸಾದಿ ಜಲಪಕ್ಷಿಗಳು! ಪಟ್ಟಣದ ನಾನಾಭಾಗಗಳಲ್ಲಿಯೂ ಸ್ಪಟಿಕದ ಕಲ್ಲುಗಳಿಂದಲೂ, ಬೆಳ್ಳಿಯಿಂದಲೂ ನಿರ್ಮಿತಗಳಾದ ಒಂಬತ್ತು ಕಕ್ಷೆ (ಆಂತಸ್ತು) ಗಳುಳ್ಳ ಉಪ್ಪರಿಗೆಯ ಮನೆ ಗಳು! ಅವುಗಳಲ್ಲಿ ಪತ್ತೆ , ಕೆಂಪು, ಮುಂತಾದ ರತ್ರ ಗಳಿಂದಲ, ಸುವರ್ಣ ದಿಂದಲೂ ರಚಿತಗಳಾದ ಗೃಹೋಪಕರಣಗಳು ಮತ್ತು ಅಲ್ಲಿ ಬೇಬೇರೆಯಾಗಿ ವಿಭಾಗಿಸಿ ತೋರಿಸಲ್ಪಟ್ಟ ರಾಜಭಾವಗಳು, ಸಣ್ಣ ದಾರಿ ಗಳು, ಚತುಷ್ಪಥಗಳು, ಅಂಗಡಿಬಿಡಿಗಳು, ಕಾರಶಾಲೆಗಳು, ಸಭಾಮಂ ಟಪಗಳು, ದೇವಾಲಯಗಳು ಮುಂತಾದ ನಾನಾತರದ ಸನ್ನಿವೇಶಗಳೂ ಮನೋಹರವಾಗಿರುವುವು, ಬೀಟಗಳೂ, ಅಂಗಳಗಳೂ, ರಾಜಮಾರ್ಗಗಳೂ, ಪಡಸಾಲೆಗಳೂ, ಸುಗಂಧಜಲಸೇಚನುಂದ ತಂಪಾಗಿ ಫುಮುಫುಮಿಸು ತಿರುವುವು, ಎಲ್ಲಿ ನೋಡಿದರೂ ಧ್ವಜಪತಾಕೆಗಳು ಬಿಸಿಲಿನತಾಪವೇ ತಿಳಿಯ ದಂತೆ ತೂಗಾಡುತ್ತಿರುವುವು. ನಾರದನು, ಅಂತಹ ದ್ವಾರಕಾಪುರಿಯ ಸನ್ನಿ ವೇಶವನ್ನು ನೋಡುತ್ತ, ಬರುವಾಗ ಅದರನಡುವೆ ಸಕಲಸಂಪತ್ಸಮೃದ್ಧ ವಾಗಿ, ಸಮಸ್ತಲೋಕಪಾಲಕರಿಗೂ , ಆಸೆಹುಟ್ಟಿಸತಕ್ಕುದಾಗಿಯೂ ಇರುವ ಒಂದಾನೊಂದು ಅಂತಃಪುರವನ್ನು ಕಂಡನು. ಅದು ಸಾಕ್ಷಾತ್ಕೃಷ್ಟ ನಿಗೆ ವಾಸಗೃಹವಾದುದರಿಂದ, ದೇವಶಿಲ್ಪಿಯಾದ ವಿಶ್ವಕರ್ಮನು ತನ್ನ ಶಿಲ್ಪ ನೈಪುಣ್ಯವೆಲ್ಲವನ್ನೂ ಅದರಲ್ಲಿ ತೋರಿಸಿರುವನು.ಹದಿನಾರುಸಾವಿರಸಂಖ್ಯೆಯ 141 B