ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JW4 ಶ್ರೀಮದ್ಭಾಗವತವು | [ಅಧ್ಯಾ, ೬೧ ಅಭಿಪ್ರಾಯದಂತೆ ನಡೆಯುವುದಕ್ಕೆ ನಾನು ಸಿದ್ಧನಾಗಿರುವೆನು. ಈಗ ನಾ ಪು ಮೊದಲು ಜರಾಸಂಧನಮೇಲೆ ಯುದ್ಧಕ್ಕೆ ಹೊರಡುವುದು ಯುಕ್ತವೆ ? ಅಥವಾ ನಾರದಾಜ್ಞೆಯಂತೆ ಯುಧಿಷ್ಠಿರನ ರಾಜಸೂಯಯಾಗಕ್ಕೆ ಹೋಗ ಬೇಕಾದುದು ಯುಕ್ತವೆ ? ನಿನ್ನ ಉದ್ದೇಶವನ್ನು ತಿಳಿಸು” ಎಂದನು. ಕೃಷ್ಣ ನು ತಾನೇ ಸರೈಜ್ಞನಾಗಿದ್ದರೂ, ಏನೂ ತಿಳಿಯದವನಂತೆ ತನ್ನನ್ನು ಪ್ರಶ್ನೆ ಮಾಡಲು, ಉದ್ದವನು ತನ್ನ ಪ್ರಭುವಾದ ಕೃಷ್ಣನ ಆಜ್ಞೆಯನ್ನು ತಿರಸಾ ವಹಿಸಬೇಕಾದುದು ತನ್ನ ಕರ್ತವ್ಯವೆಂದು ತಿಳಿದು ಹೀಗೆಂದು ಹೇಳುವನು. ಇದು ಎಪ್ಪತ್ತನೆಯ ಅಧ್ಯಾಯವು. wಧರ್ಮರಾಜನ ರಾಜಸಯಕ್ಕಾಗಿ ಕೃಷ್ಣನ ಪ್ರಯಾಣವು ww ಉದ್ಯವನು ಇಂಗಿತಜ್ಞನಾದುದರಿಂದ, ಕೃಷ್ಯನ ಮನೋಭಿಪ್ರಾ ಯವನ್ನೂ, ಸಭಿಕರು ಜರಾಸಂಧ ವದಾರ್ಥವಾಗಿಯೇ ಹೋಗಬೇಕೆಂದು ಹೇಳಿದುದನ್ನೂ, ಪಯ್ಯಾಲೋಚಿಸಿ, ಕೃಷ್ಣನ ಅಭಿಪ್ರಾಯವನ್ನೆ ಸ್ಥಿರೀಕರಿ ಸುವಂತೆ ಹೀಗೆಂದು ಹೇಳುವನು. “ಓ ಪ್ರಭೂ! ಈಗ ನೀನು ನಿನ್ನ ಅತ್ತೆಯ ಮಗನಾದ ಧರ್ಮರಾಜನ ರಾಜಸೂಯಕ್ಕಾಗಿ ಹೋಗಿ, ಅವನಿಗೆ ತಕ್ಕ ಸಹಾ ಯವನ್ನು ಮಾಡಬೇಕಾದುದು ನಿನಗೆ ಅವಶ್ಯಕರ್ತವ್ಯವೆ ? ಆದರಂತೆಯೇ ಇತ್ತಲಾಗಿ ನಿನ್ನಲ್ಲಿ ಶರಣಾರ್ಥಿಗಳಾದ ರಾಜರನ್ನು ರಕ್ಷಿಸುವುದಕ್ಕಾಗಿ ಜರಾ ಸಂಧನಮೇಲೆ ದಂಡೆತ್ತಬೇಕಾದುದೂ ಅವಶ್ಯವೇ ? ಈ ಎರಡುಕಾರಗಳಲ್ಲಿ ಯಾವುದನ್ನೂ ನಾವು ಉಪೇಕ್ಷಿಸುವುದಕ್ಕಿಲ್ಲ! ಆದರೆ ಈಗ ಯುಧಿಷ್ಠಿರನು, ಮೊದಲು ದಿಗ್ವಿಜಯವನ್ನು ಮಾಡಿದಮೇಲೆಯೇ ರಾಜಸೂಯವನ್ನು ನಡೆಸ ಬೇಕಾಗಿರುವುದು. ಆದುದರಿಂದ ಆ ದಿಗ್ವಿಜಯದಲ್ಲಿ ನೀನು ಅವನಿಗೆ ಸಹಾಯ ಮಾಡುವ ನೆವದಿಂದಲೇ ಜರಾಸಂಧನನ್ನು ನಿಗ್ರಹಿಸಿ, ಅವನಲ್ಲಿ ಸೆರೆಸಿಕ್ಕಿರುವ ರಾಜರನ್ನು ಬಿಡಿಸುವ ಸಂಭವವು ಫುಟಿಸಿದರೂ ಫುಟಿಸಬಹುದು. ಆದುದ ರಿಂದ ನಾವು ಮೊದಲು ಧರ್ಮರಾಜನ ಸಹಾಯಕ್ಕಾಗಿ ಇಂದ್ರಪ್ರಸ್ಥಕ್ಕೆ ಹೋಗುವುದೇ ಉಚಿತವೆಂದು ತೋರುವುದು, ಅಲ್ಲಿ ಹೋಗಿ ಧರ್ಮರಾಜನ ಅನುಮತಿಯನ್ನು ಪಡೆದು, ಅವನಿಗಾಗಿಯೇ ಜರಾಸಂಧನನ್ನು ನಿಗ್ರಹಿಸಬ