ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೭ ಅಧ್ಯಾ, 2೧.] ದಶಮಸ್ಕಂಧವು. ಹುದಲ್ಲವೆ ? ಹೀಗೆ ನಾವು ಈಗ ಇಂದ್ರಪ್ರಸ್ಥಕ್ಕೆ ಹೋಗುವುದರಿಂದ, ನಮ್ಮ ಎರಡುಕಾಠ್ಯಗಳಿಗೂ ಅನುಕೂಲವಾಗುವುದು, ಕೃಷ್ಣಾ ! ಈ ನೆವದಿಂದಲೇ ನೀನು ನಿನ್ನಲ್ಲಿ ಶರಣಾಗತರಾದ ರಾಜರನ್ನು ರಕ್ಷಿಸಿ, ಅಪಾರ ಕೀರ್ತಿಗೆ ಪಾತ್ರ ನಾಗಬಹುದು, ನಮ್ಮ ಯಾದವರೆಲ್ಲರೂ ಹಿಂದುಮುಂದುಯೋಚಿಸದೆ ಆ ತುರದಿಂದ ಜರಾಸಂಧನಮೇಲೆ ದಂಡೆತ್ತಿ ಹೊರಡಬೇಕೆಂದು ಹೇಳುತ್ತಿರುವ ರೇಹೊರತು, ಅವನ ಬಲವಂತದೆಂಬುದನ್ನು ಯೋಚಿಸಿದಹಾಗೆ ತೋರಲಿಲ್ಲ. ಅವನು ಹತ್ತು ಸಾವಿರ ಆನೆಗಳ ಬಲವುಳ್ಳವನು, ಅವನನ್ನು ನಿಗ್ರಹಿಸುವುದು ಸುಲಭಸಾಧ್ಯವಲ್ಲ. ಮಹಾಬಲಾಢನಾದ ಭೀಮಸೇನನೊಬ್ಬನು ಹೊರತು ಬೇರೊಬ್ಬರೂ ಅವನಿಗಿಲರಾಗಿ ನಿಲ್ಲುವವರಿಲ್ಲ. ಅವರನ್ನು ದ್ವಂದ್ವ ಯುದ್ಧ ದಿಂದಲ್ಲದೆ ಬೇರೆ ವಿಧದಿಂದ ಜಯಿಸುವುದೂ ಸಾಧ್ಯವಿಲ್ಲ. ನೂರಾರು ಅಕ್ಷ ಹಿಣೀಸೈನ್ಯಗಳನ್ನು ಸೇರಿಸಿಕೊಂಡು ಹೋದರೂ ಅವನ್ನು ಜಯಿಸಲಾರೆವು. ಅಪರಿಮಿತವಾದ ಸೇನಾಬಲವುಳ್ಳ ತನು, ತಾನೊಬ್ಬನೇ ಭೀಮನೊಡನೆ ದ್ವಂದಯುದ್ಧಕ್ಕೆ ಸಲ್ಲು ವನೆ ?” ಎಂದರೆ, ಅದಕ್ಕೊಂದುಪಾಯವನ್ನೂ ಹೇಳುವೆನು ಕೇಳು. ಆ ಜರಾಸಂಧನು ಬ್ರಾಹ್ಮಣಭಕ್ತಿಯುಳ್ಳವನು, ಬ್ರಾ ಹ್ಮಣರು ತನ್ನಲ್ಲಿ ಆರ್ಥಿಗಳಾಗಿ ಬಂದು ಯಾಚಿಸಿದಪಕ್ಷದಲ್ಲಿ, ಆತನು ಎಂದಿ ಗೂ ತಿರಸ್ಕರಿಸಲಾರನು. ಭೀಮನು ಬ್ರಾಹ್ಮಣವೇಷದಿಂದ ಹೋಗಿ ಅವನಲ್ಲಿ ಯುದ್ಧಭಿಕ್ಷೆಯನ್ನು ಯಾಚಿಸಿದ ಪಕ್ಷದಲ್ಲಿ, ಅವನು ನಿಸ್ಸಂದೇಹವಾಗಿ ಸಮ್ಮತಿಸುವನು. ಆಗ ಭೀಮನ ಕೈಯಿಂದ ಜರಾಸಂಧನಿಗೆ ಮರಣವೇ ನಿಶ್ನ ಯವು ನಿನ್ನ ಕಣ್ಣಿರಾಗಿಯೇ ಭೀಮನು ಆತನನ್ನು ಕೊಲ್ಲುವನು' ಕೃಷ್ಣಾ! ನೀನಾದರೋ ಈ ಜಗತ್ತಿನ ಉತ್ಪತ್ತಿಲಯಗಳೆರಡಕ್ಕೂ ಕಾರಣನು, ಸಧ್ವನಿ ಯಾಮಕನು. ನೀನು ಪ್ರಾಕೃತರೂಪವಿಲ್ಲದವನು, ನೀನೇ ಕಾಲಶರೀರಕನಾ ಗಿ ಈ ಪ್ರಪಂಚದ ಸೃಷ್ಟಿಸ್ಥಿತಿ ಲಯಗಳನ್ನು ನಡೆಸುವೆ. ಬ್ರಹ್ಮರುದ್ರರಿಬ್ಬ ರೂ ಸೃಷ್ಟಿಸಂಹಾರಗಳಿಗೆ ಕಾರಣರೆಂಬುದು ನಿಮಿತ್ತ ಮಾತ್ರವೇ ಹೊರತು, ನಿನ್ನ ಅಂಶದಿಂದಲೇ ಅವರು ಆಯಾಕಾರಗಳನ್ನು ನಡೆಸಬಲ್ಲರು. ಹಿಂದೆ ನೀನು ಶಂಖಚೂಡನನ್ನು ಕೊಂದು, ಆವನ ಸೆರೆಯಲ್ಲಿ ಸಿಕ್ಕಿದ ಗೋಪಿಯರನ್ನು ಬಿಡಿಸಿದೆ ! ಅದಕ್ಕೆ ಹಿಂದಿನ ಅವತಾರಗಳಲ್ಲಿಯೂ, ಒಮ್ಮೆ ಮೊಸಳೆಯ 142 B.