ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೦. ದಶಮಸ್ಕಂಧವು. sot೧ ನ್ನು ನೋಡಿ, ಭಯದಿಂದಲೂ, ದುಃಖದಿಂದಲೂ ತತ್ವಳಿಸುತ್ಯ, ಹಾಗಯೇ ಪ್ರಜ್ಞೆ ತಪ್ಪಿದಂತಾದರು, ಹೀಗೆ ಮೇಫುಗಳು ಮಳೆಯನ್ನು ಕರೆಯುವಂತೆ ಶತ್ರುಸೈನ್ಯವು ತನ್ನ ಸೈನ್ಯದಮೇಲೆ ಎಡೆಬಿಡದೆ ಬಾಣವರ್ಷವನ್ನು ಕರೆಯು ವುದನ್ನು ನೋಡಿ ಕೃಷ್ಣನು, ದೇವಾಸುರರಿಂದಲೂ ಪೂಜಿತವಾದ ಶಾರ್ಜೃ ವೆಂಬ ತನ್ನ ಮಹಾಧನುಸ್ಸನ್ನು ಟಂಕಾರಮಾಡಿ, ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ಆ ಧನುಸ್ಸಿನಲ್ಲಿ ಸಂಧಾನಮಾಡಿ, ಆ ಕರ್ಣಾಂತ ವಾಗಿ ನಾಣೆಳೆದು, ಪರಂಪರೆಯಾಗಿ ಬಾಣಗಳನ್ನು ವರ್ಷಿಸುತ್ತ, ಶತ್ರು ಪಕ್ಷ ದಲ್ಲಿದ್ದ ರಥಗಜತುರಗಪದಾತಿಗಳೆಂಬ ಚತುರಂಗಸೈನ್ಯಗಳನ್ನೂ ಧ್ವಂಸ ಮಾಡುತ್ತ ಬಂದನು. ಆಲಾತಚಕ್ರದಿಂದ ಕಿಡಿಗಳು ಹೊರಡುವಂತೆ ಆಗ ಕೃಷ್ಣನ ಕೈಯಲ್ಲಿದ್ದ ಮಂಡಲಾಕಾರವಾದ ಧನುಸ್ಸಿನಿಂದ, ಎಡೆಬಿಡದೆ ಬಾಣಗಳು ಬಿಳುತಿದ್ದುವು. ಆ ಬಾಣಪ್ರಹಾರಗಳಿಂದ ಜರಾಸಂಧನ ಸೈನ್ಯ ದಲ್ಲಿದ್ದ ಆನೆಗಳೆಲ್ಲವೂ ತಲೆಯೊಡೆದು ಕೆಳಗೆ ಬಿದ್ದುವು, ಕುದುರೆಗಳು ಕತ್ತು ಮುರಿದು ಬಿದ್ದುವು. ರಥಗಳೆಲ್ಲವೂ ಧ್ವಜದಂಡಗಳೊಡನೆ ಮುರಿದುಬಿದ್ದುವು. ರಥಾಶಗಳೂ ಸತ್ತುಬಿದ್ದುವು, ಸಾರಥಿಗಳೆಲ್ಲರೂ ಮಡಿದರು. ಆ ರಥದಲ್ಲಿದ್ದ ಯುದ್ಧ ಸಾಧನಗಳೆಲ್ಲವೂ ತುಂಡಾಗಿ ಬಿದ್ದುವು, ಪದಾತಿಸೈನ್ಯವೆಲ್ಲವೂ ಕೈ ಕಾಲುಮುರಿದು, ತಲೆಹರಿದು ಕೆಳಗೆ ಬಿದ್ದುವು. ಹೀಗೆ ಕೃಷ್ಣನ ಬಾಣಪ್ರ ಹಾರದಿಂದ ಸತ್ತುಬಿದ್ದ ರಥಗಜಪದಾತಿಗಳ ದೇಹದಿಂದ ಹೊರಟ ರಕ್ತವು, ರಣರಂಗದಲ್ಲಿ ಅನೇಕನದಿಗಳಾಗಿ ಪ್ರವಹಿಸುತ್ತಿದ್ದುವು. ಆ ರಕ್ತನಡಿಗ ಇಲ್ಲಿ ವೀರಭಟರ ನೀಡಿದ ತೋಳುಗಳು ಹಾವುಗಳಂತೆಯೂ, ತಲೆಬುರುಡೆಗಳು ಆಮೆಗಳಂತೆಯೂ, ದೊಡ್ಡದೊಡ್ಡ ಆನೆಗಳ ಶರೀರವು ದ್ವೀಪದಂತೆಯೂ, ಕುದುರೆಗಳು ಮೊಸಳೆಗಳಂತೆಯೂ, ಕೈಕಾಲುಗಳು ಮೀನುಗಳಂತೆಯೂ, ತಲೆಕೂದಲುಗಳು ಪಾಚಿಗಳಂತೆಯೂ, ಮುರಿದ ಧನುಸ್ಸುಗಳು ಅಲೆಗಳಂ ತೆಯೂ, ಆಯುಧಗಳು ಪೊದೆಗಳಂತೆಯೂ, ಚಕ್ರಗಳು ಸುಳಿಗಳಂತೆಯೂ, ಅಭರಣದಿಂದುದಿಂದ ರತ್ನಗಳು ಮಳಲುಗಳಂತೆಯೂ ಕಾಣುತಿದ್ದುವು. ಆ ರಣರಂಗವು, ಭೀರುಸ್ವಭಾವವುಳ್ಳವರಿಗೆ ಮನಸ್ಸಿನಲ್ಲಿ ಮಹಾಭಯವನ್ನೂ, ನೃತ್ಯಶಾಲಿಗಳಿಗೆ ಸಂತೋಷವನ್ನೂ ಉಂಟುಮಾಡುತ್ತಿತ್ತು, ಹೀಗೆಯೇ