ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೬. ಅಧ್ಯಾ, ೬೨.]*. ದಶಮಸ್ಕಂಧವು. ಲಿಲ್ಲವೆ ? ಒಂದು ಕಪೋತಪಕ್ಷಿಯು, ಒಬ್ಬ ಬೇಡನ ಹಸಿವನ್ನು ತೀರಿಸುವುದ ಕ್ಯಾಗಿ, ತಾನೇ ತನ್ನ ಪತ್ನಿ ಯೊಡನೆ ಆಗ್ನಿ ಯಲ್ಲಿ ಬಿದ್ದು, ತನ್ನ ದೇಹವನ್ನು ಪಕ್ಷ ಮಾಡಿ ಕೊಡಲಿಲ್ಲವೆ ? ಆಗ ಆ ಕಪೋತದ ದಯಾಗುಣವನ್ನು ನೋಡಿ ಆ ಬೇ ಡನೂ ತನ್ನ ದೇಹವನ್ನು ಅಗ್ನಿಗೆ ಆಹುತಿಮಾಡಿ ಪೂಣ್ಯಲೋಕವನ್ನು ಸೇರ ಲಿಲ್ಲವೆ? ಓ ರಾಜೇಂದ್ರಾ ! ಹೀಗೆಯೇ ಇನ ಎಷ್ಟೋ ಮಂದಿ ಮಹಾಪುರು ಷರು,ಕ್ಷಣಸ್ಥಾಯಿಯಾದ ಈ ಶರೀರತ್ಯಾಗದಿಂದ ಚಿರಸ್ಥಾಯಿಯಾದ ಕೀರ್ತಿ ಯನ್ನು ನೆಲೆಗೊಳಿಸಿಹೋಗಿರುವರು. ಆದುದರಿಂದ ಈಗ ಸೀನೂ ನಮ್ಮ ಕೋರಿಕೆಯನ್ನಿಡೇರಿಸಿ ಶಾಶ್ವತವಾದ ಕೀರ್ತಿಯನ್ನು ಹೊಂದು” ಎಂದರು. ಓ ಪರೀಕ್ಷಿದ್ರಾಜಾ ! ಆ ಮೂವರೂ ಈ ಮಾತುಗಳನ್ನು ಹೇಳುತ್ತಿರುವಾಗ, ಜರಾಸಂಧನಿಗೆ ಅವರ ಮುಖಲಕ್ಷಣಗಳಿಂದಲೂ, ಕಂಠಧ್ವನಿಗಳಿಂದಲೂ ಅವ ರನ್ನು ತಾನು ಹಿಂದೆ ನೋಡಿದ್ದಂತೆ ಸಂದೇಹವು ಹುಟ್ಟಿತು. ಇದಲ್ಲದೆ ಅವರ ಮಣಿಕಟ್ಟುಗಳಲ್ಲಿ, ಬಿಲ್ಲಿನ ನಾಣೋತ್ತಿನಿಂದ ಜಿಡ್ಡು ಕಟ್ಟಿದ ಗುರುತುಗಳನ್ನೂ ಕಂಡು, ಅವರು ಕ್ಷತ್ರಿಯರೆಂದೇ ನಿಶ್ಚಯಿಸಿ ಹೀಗೆಂದು ಯೋಚಿಸುವನು. 14ಇವರಾದರೋ ಕ್ಷತ್ರಿಯರಂತೆ ತೋರುವುದು!ಆದರೆ ಬ್ರಾಹ್ಮಣವೇಷವನ್ನು ಧರಿಸಿರುವರು. ಹೇಗಾದರೂ ಇರಲಿ! ವೇಷ ಮಾತ್ರದಿಂದಲೇ ಇವರು ಪೂಜ್ಯ ರು!ಆದುದರಿಂದ ಇವರು ಕೇಳಿದುದನ್ನು ಕೊಟ್ಟುಬಿಡುವೆನು.ಕೊನೆಗೆ ಮುಖ್ಯ ಜವಾದ ನನ್ನ ಶರೀರವನ್ನೇ ಕೇಳಿದರೂ ನಾನು ಹಿಂತೆಗೆಯಲಾರೆನು. ಹಿಂದೆ ಬ ಲಿಚಕ್ರವರ್ತಿಯು ಬ್ರಾಹ್ಮಣವೇಷದಿಂದ ಬಂದ ವಿಷ್ಣುವಿಗೆ ಭೂದಾನವನ್ನು ಮಾಡಿದಾಗ, ಅದರಿಂದ ತಾನು ರಾಜ್ಯಭ ನಾದರೂ, ಅವನ ಕೀರ್ತಿಯು ಈಗಲೂ ನಿಷ್ಕಲ್ಮಷವಾಗಿ ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿರುವುದಲ್ಲವೆ ! ವಿಷ್ಣುವು ತನ್ನ ರಾಜ್ಯವನ್ನು ಕಿತ್ತು ಇಂದ್ರನಿಗೆ ಕೊಡಿಸುವುದಕ್ಕಾಗಿ ಕಪಟ ಬ್ರಾಹ್ಮಣವೇಷದಿಂದ ಬಂದನೆಂಬುದನ್ನು ತಾನು ತಿಳಿದಿದ್ದರೂ, ಶುಕ್ರಾಚಾ ರನೇ ಮೊದಲಾದ ತನ್ನ ಹಿತೈಷಿಗಳು ಅನೇಕವಿಧದಿಂದ ತನ್ನನ್ನು ನಿವಾರಿಸಿದ ರೂ ಕೇಳದೆ,ಆ ದೈತ್ಯರಾಜನು,ಅವನಿಗೆ ಭೂದಾನವನ್ನು ಮಾಡಿದುದರಿಂದಲ್ಲ. ವೇಅಪಾರ ಕೀರ್ತಿಗೆ ಭಾಗಿಯಾದನು.ಅದರಂತೆ ಈಗ ನಾನೂ ಇವರ ಕೋರಿಕೆ ಯನ್ನು ಕೈಗೂಡಿಸುವುದರಲ್ಲಿ ಹಿಂಜರಿಯಬಾರದು, ಉತ್ತಮವಾದ ಕೃತಿ