ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೯ ಅಧ್ಯಾ, ೭೨. ದಶಮಸ್ಕಂಧವು. ಗದೆಯನ್ನು ತೆಗೆದುಕೊಂಡನು. ಪಟ್ಟಣದ ಹೊರಗಿನ ಒಂದಾನೊಂದು ಮೈದಾನಕ್ಕೆ ಅವರೆಲ್ಲರನ್ನೂ ಕರೆತಂದನು. ಅಲ್ಲಿ ಭೀಮಜರಾಸಂಧರಿಬ್ಬರೂ, ಯುದ್ಧಾವೇಶದಿಂದ, ಒಬ್ಬರಮೇಲೊಬ್ಬರು ವಜ್ರಾಯುಧಕ್ಕೆ ಸಮಾನ ವಾದ ತಮ್ಮ ತಮ್ಮ ಗದೆಗಳಿಂದ ಹೊಡೆ ವಾಡುವುದಕ್ಕೆ ತೊಡಗಿದರು. ಆವ ರಿಬ್ಬರೂ ವಿಚಿತ್ರವಾದ ಮಂಡಲಗತಿಯಿಂದ ಎಡಬಲಪಾರ್ಶ್ವಗಳಿಗೆ ತಿರ ಗುತ್ತಿರುವಾಗ, ರಂಗಸ್ಥಳದಲ್ಲಿ ನಟರು ವಿಚಿತ್ರಗತಿಯಿಂದ ನಡೆಸುವ ನೃತ್ಯ ದಂತೆ, ನೋಡುವವರಿಗೆ ಆಸೆಯನ್ನು ಹುಟ್ಟಿಸುತಿತ್ತು, ಅವರಿಬ್ಬರೂ ಒಬ್ಬರಿ ಗೊಬ್ಬರು ತಮ್ಮ ತಮ್ಮ ಗದೆಗಳನ್ನು ತಿರುಗಿಸುವಾಗ, ಆ ಗದೆಗಳ ಪರಸ್ಪರ ತಾಡನದಿಂದುಂಟಾದ ಧ್ವನಿಯು, ಸಿಡಿಲಿನಂತೆಯೂ, ಮದಖಾನೆಗಳ ಹೋ ರಾಟದಲ್ಲಿ ಅವುಗಳ ಪರಸ್ಪರಬಂತಪ್ರಹಾರಬಂದುಂಟಾಗುವ ಧ್ವನಿಯಂ ತೆಯೂ, ಭಯಂಕರವಾದ ಚಟಚಟಾತ್ಕಾರವನ್ನು ಹುಟ್ಟಿಸುತಿತ್ತು. ಅವ ರಿಬ್ಬರೂ ತಮ್ಮ ಶಕ್ತಿಮೀರಿ ಪ್ರಯೋಗಿಸುತಿದ್ರ ಗದಾಪ್ರಹಾರಯಿಂದ, ಒಬ್ಬೊಬ್ಬರ, ಹೆಗಲು, ನಡು, ಕೈ, ಕಾಲು, ತೊಡೆ, ಮೊಳಕಾಲ., ಮುಂ ತಾದ ಅವಯವಗಳೆಲ್ಲವೂ ಮದದಾನೆಗಳ ಹೋರಾಟದಲ್ಲಿ ನಡುವೆ ಸಿಕ್ಕಿಬಿದ್ದ ಎಕ್ಕದ ಕೊನೆಯಂತೆ ಭಿನ್ನ ಭಿನ್ನ ವಾಗಿ ಹರಿದುಹೋಗುತ್ತಿದ್ದುವು. ಅವ ರಿಬ್ಬರೂ ಹೀಗೆ ಗದಾಯುದ್ಧವನ್ನು ಮಾಡುತ್ತಿರುವಾಗ, ನಡು ನಡುವೆ ಒಮ್ಮೆ ವಜ್ರಸಮಾನವಾದ ಮುಮ್ಮಿಗಳಿಂದಲೂ ಒಬ್ಬರನ್ನೊಬ್ಬರು ಅಪ್ಪಳಿಸುತಿದ್ದರು. ಈಮುಷ್ಠಿ ಪ್ರಹಾರದಿಂದ, ಅವರ ಹಸ್ತತಾಡನ ದಿಂದಲೂ ಉಂಟಾದ ಧ್ವನಿಯು, ಸಿಡಿಲಿನಂತೆ ಭಯಂಕರವಾಗಿ ಕೇಳಿಸು ತಿತ್ತು. ಆ 'ಭೀಮಜರಾಸಂಧರಿಬ್ಬರೂ, ಯುದ್ಯಾಭ್ಯಾಸದಲ್ಲಿಯೂ, ದೇಹ ಬಲದಲ್ಲಿಯೂ, ಪರಾಕ್ರಮದಲ್ಲಿಯೂ ಸಮಾನರು ಒಬ್ಬರಿಗೊಬ್ಬರು ಯಾವವಿಧದಲ್ಲಿಯೂ ಸೋಲುವ ಹಾಗಿಲ್ಲ! ಅವರ ಯುದ್ಧಚಾತುರವೂ ಅಸ ಮಾನವಾಗಿದ್ದಿತು. ಇದನ್ನು ನೋಡಿ ಸತ್ವಜ್ಞನಾದ ಕೃಷ್ಣನು, ಆ ಜರಾಸಂಧನು ಹುಟ್ಟುವಾಗೆ ಎರಡು ತುಂಡಾಗಿ ಹುಟ್ಟಿದುದನ್ನೂ, ಜರೆಯೆಂಬ ರಾಕ್ಷಸಿಯು ಆ ತುಂಡುಗಳನ್ನು : ಸೇರಿಸಿ ಅದನ್ನು ತಿರುಗಿ ಬದುಕಿಸಿದುದನ್ನೂ ಯೋಚಿಸಿ, ಆತನನ್ನು ಕೊಲ್ಲುವುದಕ್ಕೆ ಉಪಾ