ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೮ ಶ್ರೀಮದ್ಭಾಗವತವು [ಅಧ್ಯಾ, ೭೫ನು. ಇಂತಹ ದುಕ್ಕೋಧನನು, ಚಕ್ರವರ್ತಿಯೋಗ್ಯವಾದ ಕಿರೀಟವನ್ನು ತಲೆ ಯಲ್ಲಿ ಧರಿಸಿ,ಹಾರ ಕುಂಡಲ ಮೊದಲಾದ ಆಭರಣಗಳಿಂದಲಂಕೃತನಾಗಿ, ಕೈಯಲ್ಲಿ ಖಡ್ಗವನ್ನು ಹಿಡಿದು, ತನ್ನ ಮನಸ್ಸಿನಲ್ಲಿರುವ ಹೆಮ್ಮೆಯಿಂದ ಇತರ ರಾಜರೆಲ್ಲರನ್ನೂ ನಿಂದಿಸುತ್ತ, ಅಸಭೆ ಯ ಬಾಗಿಲನ್ನು ದಾಟಿ ಮುಂದೆ ಬಂದನು. `ವಿಶ್ವಕರ್ಮನ ಶಿಲ್ಪ ಚಾತುರದಿಂದ ನಿರ್ಮಿತವಾದ ಆ ಸಭಾಮಂಟಪದ ಸನ್ನಿ ವೇಶವು, ಇವನ ಮನಸ್ಸಿಗೆ ಹಿಗ್ಧಮೆ ಹಿಡಿಯುವಂತೆ ಮಾಡಿತು. ಒರೀನೆಲವ ನ್ನು ನೋಡಿದಾಗ, ಅದರ ಹೊಳಪಿನಿಂದ ಅದು ನೀರು ನಿಂತ ಹಳ್ಳದಂತೆ ಕಾ ಣುವುದು. ಆಗ ದುಧನನು ಉಟ್ಟ ಬಟ್ಟೆಯು ನೆನೆದು ಹೋಗುವುದೆಂಬ ಭಯದಿಂದ, ಅದನ್ನು ಮೇಲಕ್ಕೆತ್ತಿಕೊಂಡು, ಇಳಿಯುವುದಕ್ಕಾಗಿ ಯತ್ನಿಸಿ ಕೆ ಳಗೆಬಿಳುವನು. ಹೀಗೆ ದುರೊಧನನು, ಮಯನ ಶಿಲ್ಪಮಾಯೆಯಿಂದ ಮೋ ಹಿತನಾಗಿ, ನೆಲವನ್ನು ಸೀರೆಂದೂ, ನೀರನ್ನು ನೆಲವೆಂದೂ ಭ್ರಮಿಸಿ, ಅಲ್ಲಲ್ಲಿ ಬಿ. ದೈಳುತ್ತ ಬರುವುದನ್ನು ನೋಡಿ, ಭೀಮನು ಅಟ್ಟಹಾಸದಿಂದ ನಕ್ಕುಬಿಟ್ಟನು. ಅದರಂತೆಯೇ ಅಲ್ಲಿದ್ದ ರಾಜರೂ, ರಾಜಸ್ತೀಯರೂ, ಅಟ್ಟಹಾಸದಿಂದ ನಕ್ಕರು. ಆದರೆ ಸಾಧುಸ್ವಭಾವವುಳ್ಳ ಧರ್ಮರಾಜನು, ಅವರನ್ನು ಹಾಗೆ ನಗಬಾರದೆಂದು ಬಹಳವಾಗಿ ನಿರ್ಬಂಧಿಸುತ್ತಿದ್ದರೂ, ಕಪಟನಾಟಕ ಸೂತ್ರಧಾರಿಯಾದ ಕೃಷ್ಣನು, ಆ ಧರ್ಮರಾಜನಿಗೂ ತಿಳಿಯದಂತೆ ಕಣ್ಣು ಕನ್ನೆ ಯಿಂದ ಆ ಸ್ತ್ರೀಯರನ್ನು ಮತ್ತಷ್ಟು ಪ್ರೋತ್ಸಾಹಿಸುತಿದ್ದನು. ಈ ಸಂಚನ್ನು ತಿಳಿದು ಅಲ್ಲಿದ್ದವರೆಲ್ಲರೂ ಮತ್ತಷ್ಟು ಹಾಸ್ಯಮಾಡುತ್ತ ಫಕಫಕ ನೆ ನಗುತಿದ್ದರು. ಆಗ ದುಕ್ಕೋಧನನಿಗಾದರೋ ಸಹಿಸಲಾರದ ನಾಚಿಗೆಯುಂಟಾಯಿತು. ಆ ನಾಚಿಕೆಯಿಂದ ತಲೆಯೆತ್ತಿ ನೋಡದೆ, ಮನಸ್ಸಿನಲ್ಲಿ ಕೋಪದಿಂದ ಕುದಿಯುತ್ತ ಥಟ್ಟನೆ ಅಲ್ಲಿಂದ ಹಿಂತಿರುಗಿ ಯಾರಿಗೂ ಹೇಳದೆ ತನ್ನ ರಾಜಧಾನಿಯಾದ ಹಸ್ಸಿ ನಾವತಿಗೆ ಹೊರಟುಹೋದನು. ಕುರುಚಕ್ರವರ್ತಿಯಾದ ದುದ್ರೋ ಧನನು ಹೀಗೆ ಅವಮಾನಿತನಾಗಿ ಕೋಪದಿಂದ ಹಿಂತಿರುಗಿದುದನ್ನು ನೋಡಿ ! ಅಸಭೆಯಲ್ಲಿ ಹಾಹಾಕಾರವು ಹೊರಟಿತು. ಅಜಾತಶತ್ರು ವಾದ ಧರ್ಮರಾಜನೂ ಕೂಡ ಈ ವಿಚಾರವನ್ನು ಕುರಿತು ಪರಿತಪಿಸುತಿ