ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೪ ಶ್ರೀಮದ್ಭಾಗವತವು [ಅಞ್ಞಾ, ೭! -w+ಶ್ರೀ ಕೃಷ್ಣನು ಸಾಲ್ಪನನ್ನು ವಧಿಸಿದುದು. ಆಮೇಲೆ ಪ್ರದ್ಯುಮ್ನ ನು ಆಚಮನವನ್ನು ಮಾಡಿ, ದೃಢವಾದ ಬೇ ರೊಂದು ಯುದ್ಧ ಕವಚವನ್ನು ತೊಟ್ಟು,ಧನುರ್ಧಾರಿಯಾಗಿ «ಓ ! ಸೂತಾ! ಆ ದ್ಯುಮಂತನೆಲ್ಲಿರುವನೋ ಆ ಸ್ಥಳಕ್ಕೆ ರಥವನ್ನು ಬಿಡು. ಆತನೇ ನನಗೆ ಸಮಾನನಾದ ವೀರನು”ಎಂದನು. ಅದರಂತೆಯೇ ಸಾರಥಿಯು, ರಥವನ್ನು ಮುಂದೆಬಿಡಲು, ಪ್ರದ್ಯುಮ್ನ ನು ತನ್ನ ಕಡೆಯ ಅನೇಕಸೈನ್ಯಗಳನ್ನು ಧ್ವಂಸಮಾ ಡುತ್ತ ಬರುತಿದ್ದ ಆ ದ್ಯುಮಂತನನ್ನಿ ಹರಿಸಿ, ಮಂದಹಾಸದಿಂದ ನಗುತ್ತ, ಎಂಟುಬಾಣಗಳನ್ನು ಪ್ರಯೋಗಿಸಿದನು, ಅವುಗಳಲ್ಲಿ ನಾಲ್ಕು ಬಾಣಗಳಿಂದ ಅವನ ನಾಲ್ಕುರಧಾಶ್ವಗಳನ್ನೂ ,ಒಂದು ಬಾಣದಿಂದ ಅವನ ಸಾರಥಿಯನ್ನೂ > ಮತ್ತೊಂದು ಬಾಣದಿಂದ ಅವನ ಧನುಸ್ಸನ್ನೂ, ಇನ್ನೊಂದುಬಾಣದಿಂದ ಅವನ ಧ್ವಜವನ್ನೂ, ಕೊನೆಯ ಬಾಣದಿಂದ ಆ ದ್ಯುಮಂತನ ತಿರಸ್ಸನ್ನೂ ಕತ್ತರಿಸಿ ಕೆಡಹಿಬಿಟ್ಟನು. ಇದೇ ಸಮಯದಲ್ಲಿ ಇತ್ತಲಾಗಿ, ಗದ, ಸಾತ್ಯಕಿ, ಸಾಂಬ,ಮೊದಲಾದ ಯಾದವವೀರರೂ ಸಾಲ್ವನ ಸೈನ್ಯಗಳನ್ನು ಕೊಲ್ಲುತ್ತ ಬಂದರು. ಸೌಭವಿಮಾನದಲ್ಲಿ ಸೇರಿ ಯುದ್ಧ ಮಾಡುತಿದ್ದ ಸೈನಿಕರನೇಕರು, ಯಾದವರ ಬಾಣಗಳಿಂದ ತಲೆಮುರಿದು ಸಮುದ್ರದಲ್ಲಿ ಬಿದ್ದು ಸತ್ತರು. ಹೀಗೆ ಯಾದವರೂ, ಸಾಲ್ವರೂ ಒಬ್ಬರಿಗೊಬ್ಬರಿಗೆ ಹೊಡೆದಾಡುತ್ತ, ಇಪ್ಪ ತೇಳು ದಿನಗಳವರೆಗೆ ಹಗಲುರಾತ್ರಿಯೂ ಎಡೆಬಿಡದೆ ಹೋರಾಡುತಿದ್ದರು. ಪರೀಕ್ಷಿದಾಜಾ ! ಈ ಸಂಗತಿಯು ಹಾಗಿರಲಿ ! ಅತ್ತಲಾಗಿ ಥಮ್ಮ ರಾಜನ ರಾಜಸೂಯಕ್ಕಾಗಿ ಕರೆಸಲ್ಪಟ್ಟಿದ್ದ ಕೃಷ್ಣನು, ಆ ರಾಜಸೂಯಯಾಗವು. ಸಾಂಗವಾಗಿ ನೆರವೇರಿ, ಶಿಶುಪಾಲನೂ ಸಂಹೃತನಾದಮೇಲೆ, ಕೆಲವು ದಿನ ಗಳವರೆಗೆ ಅಲ್ಲಿಯೇ ಇರುತಿದ್ದನಷ್ಟೆ? ಈನಡುವೆ ಆ ಕೃಷ್ಣನಿಗೆ ಘೋರವಾದ ಕೆಲವು ದುಶಕುನಗಳು ಕಂಡುಬಂದುವು. ಈ ದುರ್ನಿಮಿತ್ತಗಳನ್ನು ಕಂಡೊ ಡನೆಕೃಷ್ಣನು, ಅಲ್ಲಿ ನಿಲುವುದಕ್ಕೆ ಮನಸ್ಸಮಾಧಾನವಿಲ್ಲದೆ, ಗುರುವೃದ್ಧಿ ರನ್ನೂ, ಭೀಷ್ಮಾದಿಗಳನ್ನೂ, ಕುಂತೀದೇವಿಯನ್ನೂ , ಅವಳ ಮಕ್ಕಳಾದ ಪಂಚಪಾಂಡವರನ್ನೂ ಕಂಡು, ಅವರೊಡನೆ “ ನಾನು ಬಲರಾಮನೊಡನೆ ಇಲ್ಲಿಗೆ ಬಂದು ಬಹಳ ದಿನಗಳಾದುವು. ಇಲ್ಲಿ ಶಿಶುಪಾಲನೂ ನನ್ನಿಂದ