ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೨ ಶ್ರೀಮದ್ಭಾಗವತವು [ಅಧ್ಯಾ, ೮೦. ಉಪಹಾರಪದಾರ್ಥಗಳೂ ಇಲ್ಲದುದರಿಂದ, ಅವಳು ಆ ಗ್ರಾಮದಲ್ಲಿದ್ದ ನಾ ಲಾರುಮನೆಗಳಿಂದ ನಾಲ್ಕುಹಿಡಿ ಅವಲಕ್ಕಿಯನ್ನು ಯಾಚಿಸಿತಂದು,ಅದನ್ನು ಅವನ ಚಿಂದಿಬಟ್ಟೆ ಯ ಸೆರಗಿನಲ್ಲಿ ಕಟ್ಟಿ ಕಳುಹಿಸಿದಳು. ಆ ಬ್ರಾಹ್ಮಣನು ಅದನ್ನೆ ಕಾಣಿಕೆಯಾಗಿ ತೆಗೆದುಕೊಂಡು ದ್ವಾರಕೆಗೆ ಬಂದನು. ಕೇವಲ ಬಡಬ್ರಾಹ್ಮಣನಾದ ತನಗೆ, ಕೃಷ್ಣನ ದರ್ಶನವು ಹೇಗೆ ಲಭಿಸುವುದೋ ಎಂದು ಚಿಂತಿಸುತ್ತ, ಆ ಕೃಷ್ಣನ ಅರಮನೆಯ ಕೋಟೆಯ ಬಾಗಿಲಿನಲ್ಲಿ ನಿಂತಿದ್ದು, ಕೊನೆಗೆ ಹೇಗೋ ಪ್ರಯತ್ನ ದಿಂದ ಆ ಅರಮನೆಯ ಸುತ್ತಲೂ ಇದ್ದ ಮೂರು ಸೇನಾಸಿವೇಶಸ್ಥಾನಗಳನ್ನೂ ದಾಟಿಹೋದನು. ಇಲ್ಲಿಂದಾ ಚೆಗೆ ಆ ಅರಮನೆಯ ಮರುಪ್ರಾಕಾರಗಳನ್ನೂ ದಾಟಿದನು, ಅಲ್ಲಿ ಕೃಷ್ಣನಂತೆಯೇ ಗುಣದಿಂದಲೂ, ಸಂಪತ್ತಿನಿಂದಲೂ ಮೇಲೆನಿಸಿಕೊಂಡ ಆಂಧಕ, ವೃಷ್ಟಿ ಮೊದಲಾದ ಯಾದವರ ಅರಮನೆಯ ಸಾಲುಗಳ ನ್ನು ನೋಡಿದನು, ಅದರಿಂದಾಚೆಗೆ ಹದಿನಾರುಸಾವಿರ ಮಂದಿ ಕೃತ್ಯಪತ್ನಿ ಯರ ಮನೆಗಳ ಸಾಲನ್ನೂ ಕಂಡನು.ಅವುಗಳಲ್ಲಿ ವಿಶೇಷಶೋಭಾ ತಿಶಯದಿಂದ ಕೂಡಿದ ಒಂದಾನೊಂದು ಮನೆ ಯನ್ನು ನೋಡಿ, ಮೋಕ್ಷಸುಖಕ್ಕೆ ಪಾತ್ರನಾ ದವನು ವೈಕುಂಠವನ್ನು ಪ್ರವೇಶಮಾಡುವಂತೆ, ಅದರೊಳಗೆ ಪ್ರವೇಶಿಸಿ ದನು. ಓ ! ಪರೀಕ್ಷೆ ಬ್ರಾಜಾ ! ಅದೇ ರುಕ್ಕಿಣಿದೇವಿಯ ಮನೆ! ಅಲ್ಲಿ ಶ್ರೀ ಕೃಷ್ಣನು ರುಕ್ಕಿಣಿಯೊಡನೆ ಮಂಚದಲ್ಲಿ ಕುಳಿತು ಸರಸಸಲ್ಲಾಪಗಳನ್ನು ಮಾಡುತ್ತಿದ್ದನು. ಈ ಬ್ರಾಹ್ಮಣನ್ನು ಕಂಡೊಡನೆ ಕೃಷ್ಣನು, ಥಟ್ಟನೆ ಮಂಚದಿಂದಿಳಿದು ಮುಂದೆ ಬಂದು, ಆ ಬ್ರಾಹ್ಮಣನನ್ನು ಎರಡುತೋಳುಗಳಿಂ ದಲೂ ಆಲಿಂಗಿಸಿಕೊಂಡನು. ತನಗೆ ಬಾಲ್ಯಸ್ನೇಹಿತನಾದ ಆ ಬ್ರಾಹ್ಮಣನ ಅಂಗಸ್ಪರ್ಶದಿಂದುಂಟಾದ ಅತ್ಯಾನಂದದಿಂದ, ಆ ಕೃಷ್ಣನ ಕಣ್ಣುಗಳಲ್ಲಿ ಫಳಫಳನೆ ಆನಂದಬಾಷ್ಪವು ಸುರಿಯುತಿತ್ತು. ಆ ಬ್ರಾಹ್ಮಣನನ್ನು ಕೈಹಿಡಿ ದು ಕರೆದುಕೊಂಡುಹೋಗಿ, ತಾನು ಕುಳಿತಿದ್ದ ಮಂಚದಮೇಲೆಯೇ ಕುಳ್ಳಿರಿ ಸಿದನು. ಅವನಿಗೆ ಕಾಣಿಕೆಗಳನ್ನು ತಂದೊಪ್ಪಿಸಿದನು. ತನ್ನ ಕೈಯಿಂದಲೇ ಅವನ ಪಾದಗಳನ್ನು ತೊಳೆದು,ಆ ಪಾದತೀರ್ಥವನ್ನು ತಲೆಗೆ ಪ್ರೋಕ್ಷಿಸಿಕೊಂ ಡನು. ಕುಂಕುಮಕೇಸರಿಯಿಂದ ಕದಡಿದ ಆಗರುಚಂದನವನ್ನು ತಂದು, ತನ್ನ |