ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ಶ್ರೀಮದ್ಭಾಗವತನ [ಅಧ್ಯಾ. ೫೧. ಲಿಸುತ್ತ ಬೆನ್ನಟ್ಟಿಹೋದನು. ಆದರೇನು? ಪಾಪಶೇಷವು ಕಳೆದಲ್ಲದೆ ಕೃಷ್ಣ ನು ಕೈಗೆ ಸಿಕ್ಕುವನೇ! ಎಷ್ಟು ದೂರಕ್ಕೆ ಹೋದರೂ ಕೃಷ್ಣನನ್ನು ಹಿಡಿಯು ವುದಕ್ಕೆ ಸಾಧ್ಯವಿಲ್ಲದಂತಾಯಿತು. ಕೃಷ್ಣನು ಆ ಗುಹೆಯನ್ನು ಪ್ರವೇಶಿಸಿ ಬಿಟ್ಟನು. ಯವನನೂ ಅದರೊಳಗೆ ಪ್ರವೇಶಿಸಿ, ಯಾವನೋ ಒಬ್ಬ ಪುರುಷನು ಅಲ್ಲಿ ಮಲಗಿರುವುದನ್ನು ಕಂಡನು.ಅವನನ್ನು ನೋಡಿ ಯವ ನನು ತನ್ನಲ್ಲಿ ತಾನು 1 ಓಹೋ ! ಈಗ ಶತ್ರುವು ಸಿಕ್ಕಿಬಿದ್ದನು, ನನ್ನನ್ನು ಮೋಸದಿಂದ ಇಷ್ಟು ದೂರಕ್ಕೆಳೆದುಕೊಂಡು ಬಂದು, ಇಲ್ಲಿ ಏನೂ ತಿಳಿಯದ ಪರಮಸಾಧುವಿನಂತೆ ಮಲಗಿರುವನು. ಇರಲಿ ! ಇವಸಿಗೆ ತಕ್ಕ ಪ್ರತೀಕಾರ ವನ್ನು ಮಾಡುವೆನು ?” ಎಂದು ನಿಶ್ಚಯಿಸಿ, ಅವನನ್ನೇ ತನಗೆ ಶತ್ರುವಾದ ಕೃಷ್ಣನೆಂದು ಭ್ರಮಿಸಿ, ಅಲ್ಲಿ ಮಲಗಿದ್ದ ಪುರುಷನನ್ನು ಕಾಲಿಂದ ಬಲವಾಗಿ ಒದೆದನು, ಬಹುಕಾಲದಿಂದ ಅಲ್ಲಿ ಮಲಗಿದ್ದ ಪುರುಷನು, ನಿಷ್ಕಾರಣವಾಗಿ ಹೀಗೆ ತನ್ನನ್ನು ಒದೆದವರಾರೆಂದು ಸಂಭ್ರಮದಿಂದ ತಟ್ಟನೆ ಮೇಲೆದ್ದು, ಕಣ್ಣುಗಳನ್ನೊರೆಸಿಕೊಂಡು, ನಾಲ್ಕು ಕಡೆಗೂ ತಿರುಗಿ ತನ್ನ ಸಮೀಪದಲ್ಲಿದ್ದ ಕಾಲಯವನನ್ನು ಕೋಪದಿಂದ ನೋಡಿದನು. ಆತನ ದೃಷ್ಟಿಯು ಬಿದ್ದ ಮಾತ್ರಕ್ಕೆ ಆ ಯವನನ ದೇಹದಲ್ಲಿ ಅಗ್ನಿ ಜ್ವಾಲೆಯು ಹುಟ್ಟಿ, ಅದರಿಂದಲೇ ಅವನು ಭಸ್ಮವಾಗಿ ಬಿದ್ದನು” ಎಂದು ಶುಕಮಹರ್ಷಿಯು ಮುಂದಿನ ಕಥೆಯ ನ್ನು ಹೇಳುವಷ್ಟರಲ್ಲಿ, ಪರೀಕ್ಷಿದ್ರಾಜನು ಪ್ರಶ್ನೆ ಮಾಡುವನು.ಓ ಬ್ರಾಹ್ಮ ಘೋತ್ತಮಾ ! ಅಲ್ಲಿ ಮಲಗಿದ್ದ ಮಹಾತ್ಮನಾರು? ಅವನು ಯಾರ ಕಡೆಯ ವನು : ಅವನ ವೀಠ್ಯವೆಂತದು? ಅವನು ಆ ಗುಹೆಯಲ್ಲಿ ಮಲಗಿದ್ದ ಕಾರಣವೇ ನು? ಕಾಲಯವನನನ್ನು ತನ್ನ ದೃಷ್ಟಿಮಾತ್ರದಿಂದಲೇ ದಹಿಸತಕ್ಕ ಅದ್ಭು ತಶಕ್ತಿಯು ಅವನಿಗೆ ಹೇಗೆ ಬಂದಿತು. ? ಈ ವಿಚಾರವನ್ನು ನನಗೆ ವಿವರಿಸಿ ತಿಳಿಸಬೇಕು” ಎಂದನು. ಅದಕ್ಕಾ ಶುಕಮಹರ್ಷಿಯು « ಓರಾಜೇಂದ್ರಾ ಕೇಳು ಆತನು ಇಕ್ಷಾಕುವಂಶದವನು.ಮಾಂಧಾತೃವಿನ ಮಗನು.ಅವನಿಗೆಮುಚುಕುಂದನೆಂ ದು ಹೆಸರು. ಆತನು ಬ್ರಾಹ್ಮಣಪ್ರಿಯನು. ಸತ್ಯಸಂಧನು.ಹಿಂದೆ ಇಂದ್ರಾದಿ ದೇವತೆಗಳು ದೈತ್ಯರಿಗೆ ಭಯಪಟ್ಟು, ಇವನಲ್ಲಿ ಬಂದು ಮರೆಹುಗಲು, ಇವ