ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨೦ ಅಧ್ಯಾ, ೮೩.] ದಶಮಸ್ಕಂಧವು. ಯರೆನಿಸಿಕೊಂಡ ಮಹಾವೀರರಿಗೂ ಯಾವನ ಪಾದಧೂಳಿಯು ತಲೆಯಿಂದ ಧರಿಸತಕ್ಕುದಾಗಿರುವುದೋ, ಅಂತಹ ಮಹಾತ್ಮನಾದ ಕೃಷ್ಣನು, ಮೇಕೆ ಗಳ ಗುಂಪಿನಲ್ಲಿರುವ ಆಹಾರವನ್ನು ಸಿಂಹವು ಎತ್ತಿಕೊಂಡು ಹೋಗುವಂತೆ, ಆ ರಾಜರ ಗುಂಪಿನಿಂದ ನನ್ನನ್ನು ಸಾಗಿಸಿ ಕರೆತಂದನು, ಅದರಿಂದ ನಾನು ಶ್ರೀ ಮಹಾಲಕ್ಷಿ ಗೂ ವಿಹಾರಸ್ಥಾನವಾದ ಆ ಶ್ರೀಕೃಷ್ಣನ ಪಾದಶುಶ್ರ ಷೆಯನ್ನು ಮಾಡುವ ಭಾಗ್ಯಕ್ಕೆ ಪಾತ್ರಳಾದೆನು.” ಎಂದಳು. ಆಮೇಲೆ ಸತ್ಯಭಾಮೆಯು ಅಮ್ಮ ಪಾಂಚಾಲಿ! ನನ್ನ ತಂದೆಯಾದ ಸತ್ರಾಜಿತನಿಗೆ ಪ್ರಸೇನನೆಂಬ ತಮ್ಮನಿದ್ದನು, ಅವನು ಬೇಟೆಗೆ ಹೋದಾಗ ಒಂದಾನೊಂದು ಸಿಂಹದ ಬಾಯಿಗೆ ತುತ್ತಾದನು, ಈ ನಿಜಸ್ಥಿತಿಯನ್ನು ತಿಳಿ ಯದ,ನನ್ನ ತಂದೆಯು,ಶ್ರೀ.ಕೃಷ್ಣನಮೇಲೆ ಇಲ್ಲದ ಅಪವಾದವನ್ನು ಹೊರಿ ಸಲು, ಆ ಅಪವಾದಪರಿಹಾರಾರ್ಥವಾಗಿ ಕೃಷ್ಣನೇ ಪ್ರಸೇನನನ್ನು ಹುಡುಕು ತಕಾಡಿಗೆ ಹೊರಟು,ಅಲ್ಲಿ ಭಲ್ಲೂಕರಾಜನಾದ ಜಾಂಬವಂತನನ್ನು ಜಯಿಸಿ, ಅವನಲ್ಲಿದ್ದ ಸ್ಯಮಂತಕಮಣಿಯನ್ನು ತಂದು ನನ್ನ ತಂದೆಗೊಪ್ಪಿಸಿ, ಪ್ರಸೇನ ನು ಮೃತಿಹೊಂದಿದ ಕಾರಣವನ್ನು ಸ್ಪಷ್ಟಪಡಿಸಿದನು.ಆಗ ನನ್ನ ತಂದೆಯು ಕೃಷ್ಣನಮೇಲೆ ಅಪವಾದಹೊರಿಸಿದ ಅಪರಾಧಕ್ಕಾಪಣಕ್ಕಾಗಿ, ಆ ರತ್ನ ದೊ ಡನೆ ನನ್ನ ನ್ಯೂ ಆತನಿಗೆ ಕೊಟ್ಟುಬಿಟ್ಟನು” ಎಂದಳು. ಆಮೇಲೆ ಜಾಂಬವತಿಯು ಅಮ್ಮ ಯಾಜ್ಞಸೇನಿ ! ಈಗ ಸತ್ಯಭಾ ಮೆಯು ಹೇಳಿದ ಜಾಂಬವಂತನ ಮಗಳೇ ನಾನು'ನನ್ನ ತಂದೆಯು ಶ್ರೀರಾಮ ನಿಗೆ ಪರಮಭಕ್ತನೆಂಬುದನ್ನು ಬಲ್ಲೆ ಯಷ್ಟೆ ? ಆದರೆ ನನ್ನ ತಂದೆಯು ಆ ಕೃಷ್ಣನೇ ತನಗೆ ಸ್ವಾಮಿ ಯೂ, ಕುಲದೈವವೂ ಆದ ಶ್ರೀರಾಮನ ಅಪರಾವ ತಾರವೆಂಬುದನ್ನು ತಿಳಿಯದೆ, ಅವನೊಡನೆ ಇಪ್ಪತ್ತೇಳುದಿನಗಳವರೆಗೆ ಯು ವ್ಯ ಮಾಡುತಿದ್ಯನು, ಕೊನೆಗೆ ಆ ಭಗವಂತನ ಅಸಾಧಾರಣಬಲವನ್ನು ನೋಡಿ ದಮೇಲೆ, ನನ್ನ ತಂದೆಗೆ, ಅವನೇ ತನ್ನ ಸ್ವಾಮಿಯಾದ ರಾಮನೆಂಬುದು ತಿಳಿಯಿತು.ತಾನು ಸಿಂಹವನ್ನು ಕೊಂದು ತಂದಿದ್ದ ಸ್ಯಮಂತಕ ಮಣಿಯೊಡನೆ ನನ್ನ ನ್ಯೂ ಆಭಗವಂತನ ಪಾದಗಳಿಗೆ ಒಪ್ಪಿಸಿಬಿಟ್ಟನು. ಆಗಿನಿಂದ ನಾನು ಆ ಕೃಷ್ಣನ ದಾಸ್ಯವನ್ನು ಮಾಡುತ್ತಿರುವೆನು.” ಎಂದಳು.