ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ೨೪ ಶ್ರೀಮದ್ಭಾಗವತವು [ಅಧ್ಯಾ, ೮೩. ಆಮೇಲೆ ಕಾಳಿಂದಿಯು ಅಮ್ಮ ದಿಪದಿ ! ನಾನು ಆ ಭಗವಂ ತನ ಪಾದಸೇವೆಯನ್ನು ಪಡೆಯಬೇಕೆಂದೇ ತಪಸ್ಸು ಮಾಡುತಿದ್ದೆನು. ಸರೈ ಜ್ಞನಾದ ಕೃಷ್ಣನು ಇದನ್ನು ತಿಳಿದು, ತನ್ನ ಸ್ನೇಹಿತನಾದ ಅರ್ಜುನನೊ ಡನೆ ಯಾವುದೋ ಒಂದುನೆವದಿಂದ ತಾನೇ ನಾನಿದ್ದಲ್ಲಿಗೆ ಬಂದು, ನನ್ನನ್ನು ಕೈಹಿಡಿದನು. ಅದುಮೊದಲು ನಾನು ಆತನ ಮನೆಯನ್ನು ಗುಡಿಸಿ, ಸಾರಿಸಿ. ಕೆಲಸಮಾಡುವ ದಾಸಿಯಾಗಿರುವೆನು” ಎಂದಳು. ಆಮೇಲೆ ಭದ್ರೆಯು ಅಮ್ಮ ಯಾಜ್ಞಸೇನಿ ! ಕೇಳು ! ನನ್ನ ಸ್ವಯಂವರಕಾಲದಲ್ಲಿ ಕೃಷ್ಣನು, ನನ್ನ ಮೇಲೆ ಕಣ್ಣಿಟ್ಟಿದ್ದ ಇತರ ರಾಜರನ್ನು ಜಯಿಸಿ, ನಾ ಯಿಗಳ ಗುಂಪಿನಲ್ಲಿರುವ ಆಹಾರವನ್ನು ಸಿಂಹ ವು ಹೇಗೋಹಗೆ, ಆ ರಾಜರ ಗುಂಪಿನಿಂದ ನನ್ನನ್ನು ಕರೆದುಕೊಂಡು ಹೋದನು, ನನ್ನ ಸಹೋದರರೇ ಅವನಿಗೆ ವಿರೋಧಿಗಳಾಗಿ ನಿಂತಿದ್ದರು. ಅವರನ್ನೂ ನಿಗ್ರಹಿಸಿ, ನನ್ನನ್ನು ದ್ವಾರಕೆಗೆ ಕರೆತಂದು ವಿವಾಹಮಾಡಿಕೊಂ ಡನು. ಈಗ ನಾನು ಲಕ್ಷ್ಮಿಗೆ ನಿವಾಸಭೂತವಾದ ಆ ಮಹಾತ್ಮನ ಪಾದಗ ಳನ್ನು ತೊಳೆಯುವ ಕೆಲಸದಲ್ಲಿರುವೆನು.ನನಗೆ ಮುಂದಿನ ಜನ್ಮಗಳಲ್ಲಿಯೂ ಈ ವಿಧವಾದ ಸೇವೆಯೇ ಲಭಿಸುತ್ತಿರಲೆಂದು ಪ್ರಾರ್ಥಿಸುವೆನು” ಎಂದಳು. ಆಮೇಲೆ ಸತ್ಯೆಯು (ಅಮ್ಮ ಬ್ರೌಪದಿ ! ನನ್ನ ತಂದೆಯು ನನ್ನ ಸ್ವಯಂವರದಲ್ಲಿ, ರಾಜರ ಪರಾಕ್ರಮವನ್ನು ಪರೀಕ್ಷಿಸುವುದಕ್ಕಾಗಿ ಮಹಾ ಬಲವುಳ್ಳ ಮತ್ತು ತೀಕ್ಷವಾದ ಕೊಂಬುಗಳುಳ್ಳ ಏಳು ವೃಷಭಗಳನ್ನು ಸಾಕಿದ್ದನು. ಇದನ್ನು ಕೇಳಿ ಕೃಷ್ಣನು, ಸಣ್ಣ ಮಕ್ಕಳು ಆಡಿನ ಮರಿಯನ್ನು ಹಿಡಿದು ಕಟ್ಟುವಂತೆ, ಆ ವೃಷಭಗಳನ್ನು ಲೀಲಾಮಾತ್ರದಿಂದ ಹಿಡಿದು ಬಂ ಥಿಸಿತು. ಆಗ ಅನೇಕರಾಜರು ಅಸೂಯೆಯಿಂದ ಅವನ ದಿರಿಸಿದರು. ಕೃಷ್ಣ ನು ಅವರೆಲ್ಲರನ್ನೂ ಯುದ್ಧದಲ್ಲಿ ಜಯಿಸಿ, ಎಣೆಯಿಲ್ಲದ ತನ್ನ ವೀರವನ್ನೇ ಕ ನ್ಯಾಶುಲ್ಕವನ್ನಾಗಿ ಮಾಡಿ, ಅನೇಕದಾಸಿಯರೊಡನೆಯೂ, ಚತುರಂಗಸೈನ್ಯ ದೊಡನೆಯೂ, ನನ್ನನ್ನೂ ದ್ವಾರಕೆಗೆ ಕರೆತಂದು ಮದಿವೆಯಾದನು. ಜಮ್ಮ ಜನ್ಮಾಂತರಕ್ಕೂ ನನಗೆ ಆ ಮಹಾತ್ಮನ ದಾಸ್ಯವೇ ಲಭಿಸಲೆಂದು ಕೋರು ವೆನು” ಎಂದಳು.