ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೫೩ ಶ್ರೀಮದ್ಭಾಗವತವು [ಅಧ್ಯಾ, ೮೩. ತಿದ್ದ ನನಗೆ ಈಗ ದರ್ಶನವನ್ನು ಕೊಟ್ಟಿರುವೆ ? ಇದಲ್ಲದೆ ನೀನು ಆಗಾಗ, “ನನಗೆ ನಿತ್ಯಸಖನಾದ ಆದಿಶೇಷನಾಗಲಿ, ಪತ್ನಿ ಯಾದ ಲಕ್ಷ್ಮಿ ಡೇವಿಯಾಗಲಿ, ಮಗನಾದ ಬ್ರಹ್ಮನಾಗಲಿ, ಭಕ್ತರಿಗಿಂತಲೂ ಹೆಚ್ಚು ಪ್ರೀತಿಪಾತ್ರರಲ್ಲ” ವೆಂದು ನಿನ್ನ ಬಾಯಿಂದಲೇ ಹೇಳಿರುವೆ. ಆ ಮಾತನ್ನು ಸ್ಥಿರಪಡಿಸುವುದಕ್ಕಾಗಿಯೇ ಈಗ ನೀನು, ನನ್ನ ಕಣ್ಣುಗಳಿಗೆ ಗೋಚರಿಸಿದೆ ! ಹೀಗೆ ನಿನ್ನಲ್ಲಿರುವ ಎಣೆಯಿಲ್ಲದ ಭಕ್ತವಾತ್ಸಲ್ಯವನ್ನು ತಿಳಿದವನು ಯಾವನು ತಾನೇ ನಿನ್ನ ಪಾದಾಶ್ರಯದಲ್ಲಿ ವಿಮುಖನಾಗುವನು ? ನಿವೇಕಿಯಾದವನು ಎಂದಿಗೂ ಅದನ್ನು ಬಿಡಲಾರನು. ಸಮಸ್ಯವಿಷಯಗಳಲ್ಲಿಯೂ ಆಸೆಯನ್ನು ತೊರೆದು, ಅಕಿಂಚನರಾಗಿಯೂ, ನಿನ್ನನ್ನೇ ನಿರತಿಶಯಪುರುಷಾರವೆಂದು ನಂಬಿದವರಾಗಿಯೂ ಇರುವ ಮುನಿಗಳಿಗೆ ನೀನು ನಿನ್ನನ್ನೇ ಒಪ್ಪಿಸಿಬಿಡತಕ್ಕ ವನು, ಈ ಪ್ರಕೃತಿಮಂಡಲದಲ್ಲಿ ಸಾಂಸಾರಿಕತಾಪತ್ರಯಗಳಿಂದ ಬಳ ಇುತ್ತಿರುವ ಜೀವರಿಗೆ, ಆ ತಾಪಶಮನಾರನಾಗಿಯೇ ಈಗ ನೀನು ಯದು ವಂಶದಲ್ಲಿ ಈ ಮನುಷ್ಯರೂಪದಿಂದ ಅವತರಿಸಿ, ಲೋಕಪಾವನವಾದ ನಿನ್ನ ಕೀರ್ತಿಯನ್ನು ಹರಡಿರುವೆ. ಓ ಭಗವಂತಾ ! ಕೃಷ್ಣಾ ! ನಿನಗೆ ನಮಸ್ಕಾ ರವು, ಆಶ್ರಿತರ ಸೇವೆಯನ್ನು ಎಂದೆಂದಿಗೂ ಮರೆಯದೆ ಸ್ಮರಿಸತಕ್ಕವನಾ ಗಿಯೂ, ಲೋಕಕ್ಷೇಮಕ್ಕಾಗಿಯೆ. ನಾರಾ ಯಣಋಷಿರೂಪದಿಂದ ತಪೋ ನಿಷ್ಠನಾಗಿಯೂ ಇರವ ನಿನಗೆ ನಮಸ್ಕಾರವು, ಸಲ್ವೆಶ್ವರಪಪೂರ್ಣ ನಾದ ಓ ಕೃಷ್ಣಾ! ನೀನು ಇನ್ನೂ ಕೆಲವು ದಿನಗಳವರೆಗೆ ಈ ಮಹರ್ಷಿಗ ಳೊಡನೆ ಇಲ್ಲಿಯೇ ವಾಸಮಾಡುತ್ತಿದ್ದು, ನಿನ್ನ ಪಾದಧೂಳೀಸಂಬಂಧ ದಿಂದ ಈ ನಮ್ಮ ನಿವಿಂಕುಲವನ್ನು ಪಾವನಮಾಡಬೇಕು.” ಎಂದನು. ಹೀಗೆ ವಿನಯದಿಂದ ಪ್ರಾರ್ಥಿಸುತ್ತಿರುವ ಆ ಬಹುಳಾಶ್ವನ ಮಾತನು ಮೀರಲಾರದೆ, ಕೃಷ್ಣನು ಕೆಲವು ದಿನಗಳವರೆಗೆ ಅವನ ಮನೆಯಲ್ಲಿಯೇ ಇದ್ದು, ಆ ಪುರವಾಸಿಗಳಿಗೂ ಅನೇಕವಿಧದಲ್ಲಿ ಕ್ಷೇಮವನ್ನುಂಟುಮಾಡು ತಿದ್ದನು. - ಓ ಪರೀಕ್ಷಿದ್ರಾಜಾ ! ಹೀಗೆಯೇ ಆತ್ತಲಾಗಿ ಶ್ರುತದೇವವೆಂಬ ಬ್ರಾಹ್ಮಣನೂಕೂಡ, ಶ್ರೀಕೃಷ್ಣನೂ, ಅನೇಕಮಹರ್ಷಿಗಳೂ ತನ್ನ