ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮೬ ಆಧ್ಯಾ, ೮೩.] ದಶಮಸ್ಕಂಧವು. ಮನೆಗೆ ಅತಿಥಿಗಳಾಗಿ ಬಂದುದನ್ನು ನೋಡಿ, ಸಂತೋಷದಿಂದ ಮೈಮರೆತು, ತಾನು ಹೊದೆದಿದ್ಧ ಉತ್ತರೀಯವನ್ನು ಹಾರಿಸಿ ಕುಣಿದಾಡುತ್ತ ಬಂದು, ಅವರ ಪಾದಗಳನ್ನು ಹಿಡಿದು ನಮಸ್ಕರಿಸಿದನು. ತನ್ನ ಶಕ್ತಿಗೆ ತಕ್ಕಂತೆ ಅವರೆಲ್ಲರಿಗೂ ನೊದೆಹುಲ್ಲಿನ ಆಸನಗಳನ್ನೂ, ಬ್ರುಸಿಯೆಂಬ ಋಷ್ಯಾಸನಗ ಳನ್ನೂ, ಕೃಷ್ಣಾಜಿನಗಳನ್ನೂ ತಂದುಕೊಟ್ಟು ಕುಳ್ಳಿರಿಸಿದನು. ಅವರ ಸುಖಾಗಮನವನ್ನು ಕೇಳಿ, ಭಾಗ್ಯಾಸಮೇತನಾಗಿ ಅವರೆಲ್ಲರ ಪಾದಗಳನ್ನೂ ತೊಳೆದು, ಅದೇ ತನಗೆ ಸಾಭೀಷ್ಟ್ರಪ್ರದವೆಂದು ತಿಳಿದು, ಆ ತೀರವನ್ನು ತನ್ನ ತಲೆಗೆ ಪ್ರೋಕ್ಷಿಸಿಕೊಂಡನು. ತನ್ನ ಪತ್ನಿಗೂ, ಗೃಹಕ್ಕೂ ಅದನ್ನು ಪ್ರೋಕ್ಷಿಸಿದನು. ಗಂಧ ಪುಷ್ಟ ಧೂಪದೀಪಾದಿಗಳನ್ನೂ, ಫಲದ ಕಾಣಿಕೆ ಗಳನ್ನೂ , ಲಾಮಂಚದಿಂದ ಸುವಾಸಿತವಾದ ಪಾನಜಲವನ್ನೂ ತಂದೊಪ್ಪಿ ಸಿದನು. ಸುಗಂಧವುಳ್ಳ ಕಸ್ತೂರಿ, ತುಲಸಿ, ಸತ್ವಗುಣವರ್ಧಕವಾದ ಶುದ್ಧಾನ, ಮೊದಲಾಗಿ, ತನಗೆ ಅನಾಯಾಸಲಭ್ಯವಾದ ವಸ್ತುಗಳಿಂದಲೇ ಅವರಿಗೆ ಸಮಸ್ಯಸತ್ಕಾರಗಳನ್ನೂ ನಡೆಸಿದನು. ಹೀಗೆ ಅವರೆಲ್ಲರಿಗೂ ಪೂಜೆ ಯನ್ನು ಮಾಡುವಾಗ, ಅಬ್ರಾಹ್ಮಣನು ತನ್ನಲ್ಲಿ ತಾನು ಸಂತೋಷದಿಂದ ಹೀ ಗೆಂದು ಯೋಚಿಸುವನು. ಆಹಾ ! ಏನಿದು ನನ್ನ ಭಾಗ್ಯವು ! ನಾನೋ ಸಂ ಸಾರವೆಂಬ ಮಹಾನರಕದಲ್ಲಿ ಕಣ್ಣು ಕಾಣದೆ ತೊಳಲುತ್ತಿರುವೆನು. ಇಂತಹ ಸ್ಥಿತಿಯಲ್ಲಿ ನನಗೆ, ಪರಮಪುರುಷನಾದ ಶ್ರೀ ಕೃಷ್ಣನೊಡನೆಯೂ, ಆ ಪರ ಮಾತ್ಮನಿಗೆ ನಿತ್ಯನಿವಾಸಭೂತರಾದ ಈ ಮಹರ್ಷಿಗಳೊಡನೆಯೂ ಸಮಾ ಗಮವುಂಟಾಯಿತಲ್ಲವೆ ? ಇವರ ಪಾದರಜಸ್ಸೇ ಸಮಸ್ತಪ್ರಣ್ಯತೀರ್ಥಗಳಿಗೆ ಸಮಾನವೆನಿಸುವುದು, ಇಂತವರು ನನ್ನ ಮನೆಗೆ ಬಂದುದು ನನ್ನ ಪರಮ ಭಾಗ್ಯವಲ್ಲವೆ ?” ಎಂದು ಆನಂದಿಸುತ್ತಿದ್ದನು. ಹೀಗೆ ಅಲ್ಲಿ ಬಂದವರೆಲ್ಲರೂ ಆತಿಥ್ಯವನ್ನು ಕೈಕೊಂಡು ಸುಖಾಸೀನರಾಗಿದ್ದಾಗ, ಶ್ರುತದೇವನು ತನ್ನ ಪತ್ನಿ ಸಮೇತನಾಗಿ ಬಂದು, ಕೃಷ್ಣನ ಪಾದಗಳನ್ನೂ ತುತ್ತ ದೇವಾ ! ನೀನು ಪ್ರಕೃತಿಪುರುಷರಿಗಿಂತಲೂ ವಿಲಕ್ಷಣನಾಗಿ, ಅವೆರಡಕ್ಕಿಂತಲೂ ಉತ್ಮಷ್ಯನೆನಿಸಿರುವೆ. ನೀನು ನಿನ್ನ ಸಂಕಲ್ಪ ಮಾತ್ರದಿಂದಲೇ ಈ ಜಗತ್ತ ನ್ನು ಸೃಷ್ಟಿಸಿ, ಎಂದಿಗೂ ವಿಕಾರವಿಲ್ಲದ ನಿನ್ನ ಆತ್ಮಸ್ವರೂಪದೊಡನೆ ಆದ