ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ AM ಶ್ರೀಮದ್ಭಾಗವತವು (ಅಧ್ಯಾ, ೮೬, ವೊಂದೇ ಆಕಾರವಾಗಿ ಉಳ್ಳ ಜೀವಗಳಲ್ಲಿ, ದೇವಮನುಷ್ಯಾದಿಭೇದಕಲ್ಪ ನೆಯು ತಪ್ಪುವುದಕ್ಕಾಗಿಯೂ, ಆ ಜೀವಗಳಿಗೆ ಬುದ್ದೀಂದ್ರಿಯಾ ದಿಗಳನ್ನೂ ಕೊಟ್ಟು ಜಗತೃಷ್ಟಿಯನ್ನು ಮಾಡಿರುವನು. ಶ್ರುತ್ಯುಕ್ತಗೆ ಳಾದ ಸಮಸ್ತಶಬ್ದಗಳೂ, ಮುಖ್ಯವೃತ್ತಿಯಿಂದ ಬ್ರಹ್ಮನಲ್ಲಿಯೇ ಸೇರುವು ವೆಂದು ಹೇಳುವ ಆ ಬ್ರಹ್ಮ ವಿಚಾರವಾದ ವ್ಯುತ್ಪತ್ತಿಯು ಬಹಳ ರಹಸ್ಯ ವಾದುದು, ಅದು ಉಪನಿಷದರ್ಥ ವಿಚಾರದಿಂದಲೇ ತಿಳಿಯತಕ್ಕುದಾಗಿರು ವುದು. ಹೀಗೆಂದು ನಮ್ಮ ಹಿರಿಯರಿಗಿಂತಲೂ ಹಿರಿಯರಾದ ವಾಮದೇವಾಲ ಗಳಿಂದ ನಿಶ್ಚಯಿಸಲ್ಪಟ್ಟಿರುವುದು ಬ್ರಹ್ಮ ವಿಚಾರವಾದ ಈ ವ್ಯತ್ಪತ್ತಿ ಯನ್ನು , ಯಾವಪರುಷನು ಶ್ರದ್ಧೆಯಿಂದ ಹೃದಯದಲ್ಲಿ ಧಾರಣೆಮಾಡು ವನೋ, ಅವನು, ಇತರಾಪೇಕ್ಷೆಯಿಲ್ಲದೆ ಮುಕ್ತಿಯನ್ನು ಹೊಂದುವನು. ನೀನು ಕೇಳಿದ ಇದೇ ಪ್ರಶ್ನೆ ಯವಿಚಾರವಾಗಿ, ಸಾಕ್ಷಾನಕ್ಕೆ ರಾರ್ಯನಿಂದ ನಿರೂಪಿತಗಳಾದ ಕೆಲವು ವಾಕ್ಯಗಳನ್ನು ತಿಳಿಸುವೆನು ಕೇಳು. ಹಿಂದೆ ಈ ವಿಚಾರವಾಗಿ ನಾರದನಿಗೂ, ನಾರಾಯಣಮಹರ್ಷಿಗೂ, ನಡೆದ ಒಂ ಬಾನೊಂದು ಸಂವಾದವುಂಟು. ಹಿಂದೊಮ್ಮೆ ಭಗವಂತನಿಗೆ ಪರಮಪ್ರಿಯ ನಾದ ನಾರದನು, ಲೋಕಸಂಚಾರವನ್ನು ಮಾಡುತ್ತ, ಪುರಾತನ ಋಷಿ ಯಾದ 'ರಾಯಣನನ್ನು ದರ್ಶನಮಾಡುವುಗಿ ಬದಶ್ರನಕ್ಕೆ ಹೋದನು. ಓ ಪಕ್ಷಿಬಾ ? : ನಾಗ್ ಗುಣಮಪಿ ಯ ಯಾ ರೆಂದು ಬಲ್ಲೆಯಾ ? ಈ ಭಾರತವರ್ಷದಲ್ಲಿರುವ ಮುಷ್ಕರ ಕ್ಷೇಮಾಗಿ ಸಾಕ್ಷಾನ್ಯ ಹಾವಿಷ್ಣುವೇ ಋಷಿಪವನ್ನು ತಳಿ, ವರ್ಣಶ್ರನ ಧರ್ಮ ಗಳನ್ನೂ , ಆತ್ಮಜ್ಞಾನವನ್ನೂ, ರಾಗದ್ವೇಷಟಗಳಿಲ್ಲದ ಶಾಂತಸ್ವಭಾವ ವನ್ನೂ ತನ್ನಲ್ಲಿ ತೋರಿಸುತ್ಯ, ಕಲ್ಪಾವಧಿಯಾಗಿ ತಪೋಸಿಷ್ಠೆಯಲ್ಲಿ ಕುಳಿ ತಿರುವನು. ಅವನ ತಪಸ್ಸೆಂಬುದು ತನ್ನ ಉಪಾಸನರೂಪವಾದುದೇ ಹೊ ರತು ಬೇರೆ ಯಲ್ಲ! ಹೀಗೆ ಬದರಿಕಾಶ್ರಮದಲ್ಲಿ ಆತ್ಮಧ್ಯಾನನಿಷ್ಠರಾದ ಆನೇಕ ಮಹರ್ಷಿಗಳಿಂದ ಪರಿವೃತನಾಗಿ ತಪೋನಿಷ್ಟೆಯಲ್ಲಿದ್ದ ನಾರಾಯಣನ ನ್ನು , ನಾರದನು ವಿನಯದಿಂದ ನಮಸ್ಕರಿಸಿ, ಈಗ ನೀನು ನನ್ನಲ್ಲಿ ಕೇಳಿದ ಪ್ರಶ್ನೆಯನ್ನೇ ಕೇಳಿದನು. ಆಗ ನಾರಾಯಣನು, ಅಲ್ಲಿದ್ದ ಋಷಿಗ