ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ, ೮೭೦j ದಶಮಸ್ಕಂಧವು. ೨೩೬೩ ಳೆಲ್ಲರೂ ಕೇಳುತ್ತಿರುವಹಾಗೆಯೇ ಹಿಂದೆ ಜನಲೋಕನಿವಾಸಿಗಳಾದ ಸನಂ ದನಾಗಿಬ್ರಾಹ್ಮಣರಲ್ಲಿ ನಡೆದ ಒಂದಾನೊಂದು ಸಂವಾದವನ್ನು ತಿಳಿಸುತ್ತ « ಓ ನಾರದಾ ! ಪೂತ್ವದಲ್ಲಿ ಬ್ರಹ್ಮನಿಗೆ ಮಾನಸಪುತ್ರರಾಗಿಯೂ, ಹುಟ್ಟಿದಂದಿನಿಂದಲೇ ಜಿತೇಂದ್ರಿಯರಾಗಿಯೂ ಇದ್ದ ಸನಕಾದಿಗಳು, ಜನಲೋಕದಲ್ಲಿ, ಪರಬ್ರಹ್ಮನ ಗುಣಾನುಭವರೂಪವಾದ ಬ್ರಹ್ಮ ಸತ್ರವೆಂಬ ಯಾಗವನ್ನು ನಡೆಸಿದರು. ಆಗ ನೀನು ಸರೈಶ್ವರನ ದರ್ಶನಾರ್ಥವಾಗಿ ಶ್ವೇತದ್ವೀಪಕ್ಕೆ ಹೋಗಿದ್ದೆ, ಆಗ ಆ ಬ್ರಾಹ್ಮಣರಲ್ಲಿ ಕೆಲವು ವಾದಗಳು ನಡೆ ದುವು. ಆ ವಾದಗಳಲ್ಲಿ ಶ್ರುತಿಗಳೆಲ್ಲಕ್ಕೂ ಐಕಕಂಠ್ಯವು ಸಮರ್ಥಿಸಲ್ಪಟ್ಟು, ಅವುಗಳ ಏಕಲ್ಪಾರ್ಥಸಂದೇಹಗಳೆಲ್ಲವೂ ನಿವೃತ್ತವಾದುವು. ಓ : ನಾರದಾ! ಈಗ ನೀನು ನನ್ನಲ್ಲಿ ಯಾವ ಪ್ರಶ್ನೆ ಯನ್ನು ಕೇಳುತ್ತಿರುವೆಯೋ, ಆ ಪ್ರಶ್ನೆ ವೇ ಅಲ್ಲಿಯೂ ವಿಚಾರಕ್ಕೆ ಬಂದು, ಅದಕ್ಕೆ ತಕ್ಕ ಸಮಾಧಾನಗಳೂ ಹೇಳಲ್ಪಟ್ಟಿರು ವುವು, ಅಲ್ಲಿ ನಡೆದ ಅಕ್ಷೇಪಪರಿಹಾರಾದಿಗಳನ್ನೆ ಈಗ ನಾನು ನಿನಗೆ ತಿಳಿ ಸುವೆನು ಕೇಳು, ಆ ಬ್ರಹ್ಮ ಸತ್ರಯಾಗಕ್ಕಾಗಿ ಸೇರಿದ್ದವರೆಲ್ಲರೂ, ಗುಣ ದಲ್ಲಿಯೂ ,ಶಾಸ್ತ್ರಜ್ಞಾನದಲ್ಲಿಯೂ, ತಪಸ್ಸಿನಲ್ಲಿಯೂ ಸಮಾನರು, ಮತ್ತು ಅವರು, ತನ್ನ ವರೆಂದೂ, ಅನ್ಯರೆಂದೂ, ಉದಾಸೀನರೆಂದೂ ಭೇದಬುದ್ದಿ ಯಿಲ್ಲದೆ ಸಮಸ್ತಭೂತಗಳನ್ನೂ ಸಮಬುದ್ಧಿಯಿಂದ ಭಾವಿಸತಕ್ಕವರು ಹೀಗೆ ಅಲ್ಲಿ ಸೇರಿದ್ದವರೆಲ್ಲರೂ ಮಹಾಜ್ಞಾನಿಗಳಾಗಿದ್ದರೂ, ತಮ್ಮಲ್ಲಿ ಒಬ್ಬ ನನ್ನು ಪ್ರವಚನಕ್ಕಾಗಿ ಏರ್ಪಡಿಸಿ, ಉಳಿದವರೆಲ್ಲರೂ ಶ್ರಾವಕರಾಗಿ ಕುಳಿತರು. ಇಂತಹ ಸತ್ರಯಾಗದಲ್ಲಿ ಎಲ್ಲರೂ ಜ್ಞಾನಿಗಳೇ ಸೇರಿದ್ದರೂ,ಒಬ್ಬನು ಉಪ ನ್ಯಾಸಕನಾಗಿಯೂ,ಇತರರು ಕೇಳತಕ್ಕವರಾಗಿಯೂ ಇರಬೇಕಾದುದೇ ಪ 'ತಿ!ಅದರಂತೆ ಅಲ್ಲಿ ಪ್ರವಚನಕ್ಕಾಗಿ ಆಗ್ರಾಸನದಲ್ಲಿ ಕುಳಿತಿದ್ದ ಸನಂದನನು ಹೀಗೆಂದು ಹೇಳುವನು ” ಓ ಮಹಾತ್ಮರೆ ! ಕೇಳಿರಿ ! ಪರಮಪುರುಷನು ತನ್ನಿಂದ ಸೃಷ್ಟಿಸಲ್ಪಟ್ಟ ಚಿದಚಿದಾತ್ಮಕವಾದ ಸಮಸ್ತ ಜಗತ್ತನ್ನ ಅಯಹೊಂದಿಸಿ, ತನ್ನಲ್ಲಿಯೇ ಅಡಗಿಸಿಕೊಂಡು, ನಾಮರೂಪವಿಭಾಗವಿಲ್ಲ ದಂತೆ ಮಾಡಿ, ಪ್ರಕೃತಿ ಪುರುಷ ಕಾಲವೆಂಬ ಮೂರುಶಕ್ತಿಗಳೊಡನೆ ಆತ್ಮಾ ನಂದಾನುಭವರೂಪವಾದ ನಿದ್ರೆಯಲ್ಲಿರುವನು. ಪ್ರಳಯಾಂತದಲ್ಲಿ ಸೃಷ್ಟಿ