ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೪ ಶ್ರೀಮದ್ಭಾಗವತವು ಅಧ್ಯಾ, ೫೧. ನು, ಹಸಿದಹಾವು ನಾಲಗೆಯನ್ನು ನೀಡುತ್ತ ಬಂದು, ಇಲಿಯನ್ನು ಹಿಡಿಯು ವಂತೆ ಮೃತ್ಯುರೂಪಿಯಾಗಿ ಧಟ್ಟನೆ ಬಂದು ಅವರನ್ನು ಹಿಡಿಯುವೆ. ಹೀಗೆ ತಾವೇ ಸ್ವತಂತ್ರರೆಂಬ ಅಭಿಮಾನದಿಂದ ನಿನ್ನನ್ನು ಲಕ್ಷ್ಮಮಾಡದಿರತಕ್ಕವ ರಿಗೆ ಇದಕ್ಕಿಂತಲೂ ಅನರವೇನಾಗಬೇಕು, ಆದರೆ « ಈ ರಾಜಶರೀರ ವನ್ನು ಹೊಂದಿದಾಗಲೂ ನಾನು ಅದನ್ನು ಹೀಗೆ ನಿಂದಿಸಬಹುದೇ” ಎಂ ದು ನೀನು ಕೇಳಬಹುದು ಓ, ದೇವಾ ! ಈ ಶರೀರವೂ, ಈ ರಾಜಭೋಗರ ಭೂ, ಎಷ್ಟು ಕಾಲದವರೆಗೆ ನಿಲ್ಲುವುವು ? ಇದುವರೆಗೆ ರಾಜಭೋಗದಲ್ಲಿದ್ದು ಸುವರ್ಣಾಲಂಕೃತವಾದ ರಥಗಳ ಮೇಲೆಯೂ, ಆನೆಗಳಮೇಲೆಯೂ ಹೆಮ್ಮೆ ಯಿಂದ ಸಂಚರಿಸುತಿದ್ದ ಈ ದೇಹವೇ, ಅಂತ್ಯಕಾಲವು ಬಂದೊದಗಿದಾಗ, ನಾಯಿನರಿಗಳಿಗೆ ಆಹಾರವಾಗಿ ಅಮೇಧ್ಯರೂಪವನ್ನೋ, ಕ್ರಿಮಿರೂಪವ ನ್ಯೂ, ಭಸ್ಮರೂಪವನ್ನೂ ಹೊಂದುವುದು, ಈಗ ರಾಜನಾಮದಿಂದ ಕರೆಯಲ್ಪಡುತ್ತಿರುವ ಈ ದೇಹವೇ ಮುಂದೆ, ಅಮೇಧ್ಯ, ಕ್ರಿಮಿ,ಭಸ್ಮಾದಿ ನಾಮಗಳಿಂದ ಕರೆಯಲ್ಪಡಬೇಕಲ್ಲವೆ? ಅಥವಾ ಆ ದೇಹಾವಸಾನಕಾಲವೂ ಹಾಗಿರಲಿ ! ರಾಜಪದವಿಯಿರುವಾಗಲಾದರೂ ಅದಕ್ಕೆ ಸ್ವಾತಂತ್ರವೆಲ್ಲಿಯ ದು? ದಿಕ್ಕುಗಳೆಲ್ಲವನ್ನೂ ಜಯಿಸಿ, ಯುದ್ಧಪ್ರಸಕ್ತಿಯೇ ಇಲ್ಲದಂತೆ ರಾಜ್ಯವ ನ್ನು ನಿಷ್ಕಂಟಕವನ್ನಾಗಿ ಮಾಡಿ, ಉತ್ತಮವಾದ ರಾಜಸಿಂಹಾಸನವನ್ನೇರಿ, ತನಗೆ ಸಮಾನಸ್ಕಂಧರಾದ ಅನೇಕರಾಜರಿಂದ ಸೇವಿಸಲ್ಪಡುತ್ತಿರುವ ದೇಹ ವೇ, ಮೈಥುನಸುಖವೊಂದೇ ಪ್ರಧಾನವಾಗಿ ಉಳ್ಳ ಗೃಹಗಳಲ್ಲಿ, ಸ್ತ್ರೀಯರಿಗೆ ವಶವಾಗಿ, ಕೈಯಾಟದ ಕೋತಿಯಂತೆ ಅವರು ಹೇಳಿದಹಾಗೆ ಆಡುತ್ತಿರಬೇ ಕಾಗುವುದು, ಮನುಷ್ಯನು ರಾಜಪದವಿಯಲ್ಲಿರುವಷ್ಟು ಕಾಲವಾದರೂ ಸುಖವನ್ನನುಭವಿಸಬಹುದಲ್ಲವೆ?” ಎಂದರೆ, ರಾಜಪದವಿಯಲ್ಲಿರುವವನಿಗೆ ಬೇ ಕಾದ ಭೋಗಗಳನ್ನನುಭವಿಸುವುದಕ್ಕೆ ತಕ್ಕ ಆನುಕೂಲ್ಯಗಳಿದ್ದರೂ, ಮೇ ಆಮೇಲೆ ಅವನ ಮನಸ್ಸಿನಲ್ಲಿ ಹುಟ್ಟತಕ್ಕ ಪೇರಾಸೆಯು, ಅವನ ಸುಖಾನು ಭವಕ್ಕೂ ಅವಕಾಶವನ್ನು ಕೊಡಲಾರದು, ಹೇಗೆಂದರೆ, ಈಗ ರಾಜಪದ ವಿಯಲ್ಲಿರತಕ್ಕವನಿಗೆ ಮುಂದಿನ ಜನ್ಮದಲ್ಲಿ ಇದಕ್ಕಿಂತಲೂ ಉತ್ತಮವಾದ ಚ ಕ್ರತಿರ್ಪವದವಿಯುನ್ನು ಹೊಂದಬೇಕೆಂಬ ಮನೋರಥವು ಹುಟ್ಟುವುದು, ಅ