ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೩ ಶ್ರೀಮದ್ಭಾಗವತವು [ಅಧ್ಯಾ, ೮೭. ಜಾತಿಗಳ ವಿಕಲ್ಪ ರೂಪಗಳಾದ ಫುಟಕುಂಟಲಾದಿಗಳಿಗೆ ಸಮಾನವಾಗಿ ನಿರೂಪಿಸಲ್ಪಟ್ಟಿರುವುದು ಎಂದರೆ, ಕಾಠ್ಯಗಳೆಲ್ಲವೂ ಕೇವಲನಾಮಧೇಯ ಮಾತ್ರಗಳೇ! ಕಾರಣವೆನಿಸಿದ ಮಣ್ಣು, ಬಂಗಾರ ಮೊದಲಾದುವುಗಳೇ ಸತ್ಯವು, ಇದರಂತೆಯೇ ಆಕಾಶಾದಿಗಳೆಲ್ಲವೂ ನಾಮಮಾತ್ರಗಳು! ಕಾರಣ ವಾದ ಬ್ರಹ್ಮವೊಂದೇ ಸತ್ಯವು. ” ಎಂದು ಕೆಲವರು ಹೇಳುವರು. ಆದರೆ ಇದು ಕುತಬುದ್ಧಿಯುಳ್ಳವರ ಮನೋವಿಕಲ್ಪದಿಂದ ತೋರುವ ಅರ್ಥವೇ ಹೊರತು ಬೇರೆಯಲ್ಲ. ಶ್ರುತ್ಯವನ್ನು ತಿಳಿಯಲಾರದವರೇ ಈ ಅರ್ಥ ವನ್ನು ನಿಜವೆಂದು ನಂಬುವರು, ಆ ಶ್ರುತಿಯು ಕಾರಣಮಾತ್ರವೇ ಸತ್ಯ ವೆಂದೂ, ಕಾಠ್ಯವು ಸುಳ್ಳೆಂದೂ ಹೇಳತಕ್ಕುದಲ್ಲ, ಕಾರಣಕಾಕ್ಯಗಳು ಒಂದ ಕೊಂದಕ್ಕೆ ಭಿನ್ನ ವಲ್ಲವೆಂಬುದೇ ಅದರ ಅಭಿಪ್ರಾಯವು. ಆದುದರಿಂದ ಈ ಪ್ರಪಂಚವೆಲ್ಲವೂ ನಿನಗಿಂತ ಬೇರೆಯಾದುದಲ್ಲವೆಂದು ಸ್ಪಷ್ಟವು.ಆದರೆ ನಿನ್ನಂ ತೆ ಸಮಸ್ತ ಜೀವರಾಶಿಗಳಿಗೂ, ನಿತ್ಯತ್ನ, ಪ್ರಕೃತಿಗತತ್ವ ಮುಂತಾದುವುಗಳು ಸಮಾನವಾಗಿದ್ದರೂ, ಆ ಜೀವಗಳು ಪ್ರಕೃತಿವಶಗಳಾಗುವುವು: ನೀನು ಅದಕ್ಕೆ ವಶ್ಯನಲ್ಲ! ಇದೇ ಜೀವನಿಗಿಂತಲೂ ನಿನ್ನಲ್ಲಿರುವ ವಿಶೇಷವು, ಓ ದೇವಾ ! ಆ ಜೀವಾತ್ಮನು ನಿನ್ನ ಮಾಯೆಯಿಂದ ಮೋಹಿತನಾಗುವುದರಿಂದ, ಪ್ರಕೃತಿಪರಿಣಾಮಗಳೆನಿಸಿಕೊಂಡ ದೇವಮನುಷ್ಯಾದಿಶರೀರಗಳನ್ನು ಹೊಂ ಹಿ, ಅದರಿಂದ ಶಬ್ಬಾದಿವಿಷಯಗಳನ್ನು ಸೇವಿಸುತ್ತ, ಸಣ್ಣದು, ದೊಡ್ಡ ದೆಂಬ ಆಕೃತಿಭೇದಗಳಿಂದಲೂ ವ್ಯವಹರಿಸಲ್ಪಡುವನು. ಆ ಶರೀರದಲ್ಲಿ ಅವ ನಿಗೆ ದೇಹಾತ್ಮಾಭಿಮಾನವೂ ಹುಟ್ಟುವುದು.ಕೊನೆಗೆ ಮರಣವನ್ನೂ ಹೊಂ ದವನು. ಹೀಗೆ ಜನನಮರಣಾದಿರೂಪವಾದ ಸಂಸಾರದಲ್ಲಿ ತೊಳಲುವುದ ರಿಂದ, ತನಗೆ ಸಹಜವಾದ ಜ್ಞಾನೈಶ್ವಯ್ಯಾದಿಗಳನ್ನು ಕಳೆದುಕೊಳ್ಳುವನು. ನೀನಾದರೋ, ಹಾವು ತನ್ನ ಪರೆಯನ್ನು ನೀಗುವಂತೆ, ಆ ಪ್ರಕೃತಿಯನ್ನು ತ್ಯಜಿಸಬಲ್ಲವನು. ಅದು ನಿನ್ನನ್ನು ಕಟ್ಟಿಡಲಾರದು, ಅದರಿಂದಲೇ ನಿನ್ನ ಜ್ಞಾನೈಶ್ವಯ್ಯಾದಿಗಳಿಗೆ ಎಂದಿಗೂ ಕೊರತೆಯಿಲ್ಲ. ಜೀವನಿಗೆ ಹೇಗೋಹಾಗೆ ನಿನ್ನ ಐಶ್ವಯ್ಯಾದಿಗಳಿಗೆ ಪರಿಮಿತಿಯಿಲ್ಲ! ಹೀಗೆ ಅಪರಿಚ್ಛಿನ್ನ ವಾದ ಐಶ್ವಯ್ಯಾಡಿಗ ಳನ್ನು ಹೊಂದಿ,ಪಾಪರಾಹಿತ್ಯ ಮೊದಲಾದ ಅಷ್ಟಗುಣಗಳಿಂದ ಕೂಡಿ,ಯಾ