ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩fo ಶ್ರೀಮದ್ಭಾಗವತವು (ಅಧ್ಯಾ, ಆಳಿ, ಗಲಿ ! ಕ್ಷತ್ರಿಯನಾಗಿ ಹುಟ್ಟಿ, ಧನುಸ್ಸನ್ನು ಹಿಡಿಯಬಲ್ಲವನಾದರೂ ಒಬ್ಬ ನೂ ಇಲ್ಲವೆ ? ಇಲ್ಲಿನ ಕ್ಷತ್ರಿಯರೆಲ್ಲರೂ ಸತ್ರಯಾಗದಲ್ಲಿ ಸೇರಿದ ಬ್ರಾಹ್ಮಣ ರಂತೆ ನಿಶ್ಚಿಂತರಾಗಿ ತಿಂದು ಮಲಗುವಂತಿದೆ. ಯಾವ ದೇಶದಲ್ಲಿ ಬ್ರಾಹ್ಮ ಇರು, ಹೆಂಡಿರುಮಕ್ಕಳನ್ನೂ , ಹಣಕಾಸುಗಳನ್ನೂ ಕಳೆದುಕೊಂಡು ದುಃ. ಖಕ್ಕೀಡಾಗುವರೋ,ಅಲ್ಲಿನ ರಾಜರು, ಹೊಟ್ಟೆ ಹೊರೆಯುವುದಕ್ಕಾಗಿ ಕ್ಷತ್ರಿಯ ವೇಷವನ್ನು ಧರಿಸಿದ ನಟರೇ ಹೊರತು ಬೇರೆಯಲ್ಲ ! ಬ್ರಾಹ್ಮಣಾ ! ನೀನು ಚಿಂತಿಸಬೇಡ ! ನಿಮ್ಮ ಭಾಗಕ್ಕೆ ನಾಸಿರುವೆನು. ನಿನಗೆ ಇನ್ನು ಮೇಲೆ ಹುಟ್ಟ ತಕ್ಕ ಪುತ್ರನನ್ನು ಇಲ್ಲಿದ್ದ ಹಾಗೆಯೇ ನಾನು ರಕ್ಷಿಸಿ, ತಾಯಿತಂದೆಗಳಾದ ನಿಮ್ಮ ದುಃಖವನ್ನು ನೀಗಿಸುವೆನು. ಈ ಪ್ರತಿಜ್ಞೆಯನ್ನು ನಾನು ನಡೆಸಲಾ ರದೆ ಹೋದ ಪಕ್ಷದಲ್ಲಿ, ನನ್ನ ದೇಹವನ್ನು ಅಗ್ನಿ ಜ್ವಾಲೆಗೆ ಆಹುತಿಮಾಡಿ ಅ ದೋಷಪರಿಹಾರವನ್ನು ಮಾಡಿಕೊಳ್ಳುವೆನು” ಎಂದನು, ಅದಕ್ಕಾ ಬ್ರಾಹ್ಮಣ ನು ಆಯ್ಯಾ ! ಬಹಳ ಚೆನ್ನಾ ಯಿತು! ಬಲರಾಮನಾಗಲಿ ಕೃಷ್ಣನಾಗಲಿ, ಮಹಾಧನುರ್ಧಾರಿಯಾದ ಪ್ರದ್ಯುಮ್ನ ನಾಗಲಿ, ರಥಿಕರಲ್ಲಿ ಅಸಮಾನನೆನಿಸಿ ಕೊಂಡ ಅನಿರುದ್ಧನಾಗಲಿ, ನನ್ನ ಪುತ್ರನನ್ನು ರಕ್ಷಿಸಲಾರದೆಹೋದರು. ಜಗ ದೀಶ್ವರರೆನಿಸಿಕೊಂಡ ಅಂತವರಿಗೇ ದುಸ್ಸಾಧ್ಯವಾದ ಕಾವ್ಯವು ನಿನ್ನಿಂದ ಸಾಧ್ಯವೆ? ವಿವೇಕವಿಲ್ಲದ ನೀನು ಹೀಗೆ ಪ್ರತಿಜ್ಞೆಯನ್ನು ಮಾಡಬೇಡ! ನನಗೇ ನೋ ಆ ಕಾಠ್ಯವು ನಿನ್ನಿಂದಾಗುವುದೆಂಬ ನಂಬಿಕೆಯಿಲ್ಲ” ಎಂದನು. ಅದಕ್ಕಾ ಅರ್ಜುನನು, ಆ ಬ್ರಾಹ್ಮಣನನ್ನು ನೋಡಿ ನಗುತ್ತ, ಓ ಬ್ರಾಹ್ಮಣಾ ! ನನ್ನ ನ್ನು ಆ ಬಲರಾಮನೆಂದೂ, ಕೃಷ್ಣನೆಂದೂ, ಪ್ರದ್ಯುಮ್ಯಾ ನಿರುದ್ದರೆಂದೂ ತಿಳಿಯಬೇಡ ! ನಾನು ಯಾರೆಂದು ಬಲ್ಲೆ! ನಾನು ಅರ್ಜುನನು! ನನ್ನ ಧನು ಸ್ಸು ಗಾಂಡೀವವು. ಓ ವೈದಿಕ ಬ್ರಾಹ್ಮಣಾ ! ನನ್ನ ವೀರವು ಮುಕ್ಕಣ್ಣ ನನ್ನೂ ಮೆಚ್ಚಿಸಿರುವುದು, ನನ್ನನ್ನು ಸಾಧಾರಣನೆಂದು ತಿಳಿದು ಆಲಕ್ಷಮಾ ಡದಿರು ! ನಾನು ಮೃತ್ಯುವಿನೊಡನೆಯಾದರೂ ಹೋರಾಡಿ ನಿನ್ನ ಮುದ್ದು ಮಗುವನ್ನು ಬದುಕಿಸದೆ ಬಿಡಲಾರೆನು,” ಎಂದನು. ಅರ್ಜುನನು ಇಷ್ಟು ವಿಧ ವಾಗಿ ಭರವಸವನ್ನು ಕೊಟ್ಟ ಮೇಲೆ, ಆ ಬ್ರಾಹ್ಮಣನಿಗೆ ಅವನ ಮಾತಿನಲ್ಲಿ ನಂಬಿಕೆ ಹುಟ್ಟಿತು. ಆಗ ಆ ಬ್ರಾಹ್ಮಣನು ಧೈಯ್ಯದಿಂದ ಹಿಂತಿರುಗಿ ಮನೆಗೆ