ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ, ೮೯•j ದಶಮಸ್ಕಂಧವು,

&#೧

ಬಂದು, ಅರ್ಜುನನ ವೀರವನ್ನು ನೋಡಬೇಕೆಂದು ನಿರೀಕ್ಷಿಸುತ್ತಿದ್ದನು. ಆ ಬ್ರಾಹ್ಮಣನ ಪತ್ನಿ ಯು, ಮತ್ತೊಮ್ಮೆ (ಹತ್ತನೆಯ ಸಾರಿ) ಗರ್ಭಿಣಿಯಾ ದಳು. ಪ್ರಸವಕಾಲವೂ ಸಮೀಪಿಸಿತು. ಆಗ ಬ್ರಾಹ್ಮಣನು ಅರ್ಜುನನ ಬಳಿಗೆ ಓಡಿಬಂದು ಅರ್ಜುನಾ : ನನ್ನ ಪತ್ನಿಗೆ ಪ್ರಸವ ಕಾಲವಾಗಿರುವುದು. ನನ್ನ ಶಿಶುವನ್ನು ಮೃತ್ಯುವಿನಿಂದ ರಕ್ಷಿಸಬೇಕು” ಎಂದು ಪ್ರಾರ್ಥಿಸಿದನು. ಒಡನೆಯೇ ಅರ್ಜುನನು ಶುದ್ಧಾಚಮನವನ್ನು ಮಾಡಿ, ಮಹೇಶ್ವರನಿಗೆ ನಮಸ್ಕ ರಿಸಿ, ದಿವ್ಯಾಸಗಳನ್ನು ಸಂಗ್ರಹಿಸಿಟ್ಟುಕೊಂಡು, ತನ್ನ ಗಾಂಡೀವಧನು ಸ್ಸಿಗೆ ನಾಣೇರಿಸಿದನು, ಅಲ್ಲಿದ್ದ ಹಾಗೆಯೇ ನಾನಾಬಗೆಯ ಅಸ್ತ್ರಗಳನ್ನು ಪ್ರಯೋಗಿಸಿ, ಆ ಬ್ರಾಹ್ಮಣಪತಿ ಯ ಪ್ರಸವಗೃಹದ ಸುತ್ತಲೂ ಬಾಣಗ ಳಿಂದಲೇ ಕೋಟಿಯನ್ನು ಕಟ್ಟಿದನು. ಆ ಮನೆಯ ಕೆಳಗೂ, ಮೇಲೆಯೂ, ಆಡ್ಡಲಾಗಿಯೂ ಶರಪಂಜರವನ್ನು ಬಿಗಿದನು, ಆಮೇಲೆ ಸ್ವಲ್ಪ ಹೊತ್ತಿ ನೊಳಗಾಗಿಯೇ ಆ ಬ್ರಾಹ್ಮಣಪತ್ನಿ ಯು, ಒಂದು ಗಂಡುಮಗುವನ್ನು ಪ್ರಸ ವಿಸಿದಳು. ಅದು ಹುಟ್ಟಿದೊಡನೆ ಒಂದಾವರ್ತಿ ಗಟ್ಟಿಯಾಗಿ ಅತ್ಯು, ಹಾಗೆಯೇ ಪ್ರಾಣವನ್ನು ಬಿಟ್ಟಿತು. ಪ್ರಾಣವನ್ನು ಬಿಟ್ಟು ದುಮಾತ್ರವೇ ಅಲ್ಲ ! ಸ್ವಲ್ಪಹೊತ್ತಿನೊಳಗಾಗಿ ಆ ಮೃತಶರೀರವೂ ಆಕಾಶಮಾರ್ಗ ವಾಗಿ ಎಲ್ಲಿಯೋ ಅದೃಶ್ಯವಾಗಿ ಹೋಯಿತು. ಒಡನೆಯೇ ಆ ಬ್ರಾಹ್ಮಣನು, ಅರ್ಜುನನು ಕೃಷ್ಣನೊಡನೆ ನಿಂತಿದ್ದ ಸ್ಥಳಕ್ಕೆ ಬಂದು ಅಯ್ಯೋ ! ಷಂಡ ನಾದ ಈ ಅರ್ಜುನನ ಬಾಯಿಯಜಂಭಕ್ಕೆ ಮರುಳಾಗಿ,ನಾನು ಮೋಸಹೋ. ದೆನಲ್ಲಾ!ನನ್ನ ಬುದ್ಧಿಯನ್ನು ಸುಡಬೇಕಲ್ಲವೆ?ಮಹಾವೀರನೆನಿಸಿಕೊಂಡ ಬಲ ರಾಮ, ಕೃಷ್ಣನೂ, ಪ್ರದ್ಯುಮ್ನ ನೂ,ಅನಿರುದ್ಧನೂ, ನನ್ನ ಶಿಶುವನ್ನು ರಕ್ಷಿಸಲಾರದೆ ಹೋಗಿರುವಾಗ, ಮತ್ತೊಬ್ಬರಿಂದ ಸಾಧ್ಯವೆ ? ನಾನು ಇವನ ಮಾತನ್ನು ನಂಬಬಹುದೆ ! ಆತ್ಮಸ್ತುತಿಯಿಂದ ನನ್ನನ್ನು ವಂಚಿಸಿದ ಆ ಅರ್ಜುನನೂ, ಅವನ ಧನುಸೂ ಹಾಳಾಗಲಿ ! ದೈವವು ಕಿತ್ತುಕೊಂಡು ಹೋದುದನ್ನು ತಾನು ತರಿಸಿಕೊಡುವುದಾಗಿ ಹೇಳಿದ ಆ ಅರ್ಜುನನ ದುರ್ಬುದ್ಧಿಯನ್ನು ಸುಡಬೇಕಲ್ಲವೆ ?” ಎಂದು ಆ ಬ್ರಾಹ್ಮಣನು ನಿಂದಿಸುತ್ತಿ ರಲು, ಅರ್ಜುನನು ಮನಸ್ಸಿನಲ್ಲಿ ಬಹಳವಾಗಿ ಸಂಕಟಪಟ್ಟು, ಹೇಗಾದರೂ 151 B