ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯೨ ಶ್ರೀಮದ್ಭಾಗವತವು [ಅಧ್ಯಾ. ೮೯ ತಾನು ಮಾಡಿದ ಪ್ರತಿಜ್ಞೆಯನ್ನು ನಿರ್ವಹಿಸಬೇಕೆಂಬ ದೃಢಸಂಕಲ್ಪದಿಂದ, ಸಮಸ್ತಲೋಕಗಳನ್ನೂ ಸುತ್ತಿಬರತಕ್ಕ ಯೋಗವಿದ್ಯೆಯನ್ನವಲಂಬಿಸಿ, ಆ ಬ್ರಾಹ್ಮಣನ ಮಗುವನ್ನು ಕಂಡುಹಿಡಿಯಬೇಕೆಂದು ಯಮನ ರಾಜಧಾನಿ ಯಾದ ಸಂಯಮಿಸೀ ಪಟ್ಟಣಕ್ಕೆ ಹೋದನು. ಅಲ್ಲಿ ಆ ಶಿಶುವನ್ನು ಕಾಣದೆ ಇಂದ್ರನ ಪಟ್ಟಣಕ್ಕೆ ಹೋದನು.ಅಲ್ಲಿಯೂ ಆ ಶಿಶುವು ಕಾಣಿಸಲಿಲ್ಲ.ಅಲ್ಲಿಂದ ಅಗ್ನಿ, ವರುಣ, ನಿರುತಿ, ವಾಯು, ಮುಂತಾದ ದಿಕ್ಷಾಲಕರ ಪಟ್ಟಣವೆಲ್ಲ. ವನ್ನೂ ಹುಡುಕಿ, ಅಲ್ಲಿಯೂ ಆ ಶಿಶುವನ್ನು ಕಾಣದೆ, ಅಲ್ಲಿಂದ ರಸಾತಲಕ್ಕೆ ಹೋದನು. ಅಲ್ಲಿಂದ ನಾಕದೃಷ್ಟಕ್ಕೆ ಹೋದನು. ಹಾಗೆಯೇ ಆಯುಧಪಾ ಣಿಯಾಗಿ ಸಮಸ್ತಲೋಕಗಳನ್ನೂ ಸುತ್ತಿಬಂದನು. ಆ ಬ್ರಾಹ್ಮಣಶಿಶುವು ದೊರೆಯಲಿಲ್ಲ! ಅದರಮೇಲೆ ಹಿಂದೆ ಅರ್ಜುನನು ಆ ಬ್ರಾಹ್ಮಣನಮುಂದೆ ಪ್ರತಿಜ್ಞೆ ಮಾಡಿದಂತೆ ಅಗ್ನಿ ಪ್ರವೇಶಮಾಡುವುದಕ್ಕೆ ಸಿದ್ಧನಾಗಿದ್ದನು. ಇಷ್ಟರಲ್ಲಿ ಶ್ರೀಕೃಷ್ಣನು ಅರ್ಜುನನನ್ನು ತಡೆದು, ಅರ್ಜುನಾ ! ಆತುರ ಪಡಬೇಡ ! ಆ ಬ್ರಾಹ್ಮಣಶಿಶುವನ್ನು ನಾನು ತೋರಿಸಿಕೊಡುವೆನು, ನಿನ್ನನ್ನು ನೀನೇ ಅವಮಾನಪಡಿಸಿಕೊಳ್ಳಬೇಡ! ಈಗ ನೀನುಆತ್ಮಹತ್ಯೆಯನ್ನು ಮಾಡಿ ಕೊಂಡರೆ ದೊಡ್ಡ ಅಪಕೀರ್ತಿಗೆ ಗುರಿಯಾಗುವೆ ! ಈಗ ನೀನು ನಿನ್ನ ಪ್ರಯ ತ್ರವನ್ನು ನಿಲ್ಲಿಸಿದ ಪಕ್ಷದಲ್ಲಿ, ಮನುಷ್ಯರೆಲ್ಲರೂ ನಿನ್ನ ಕೀರ್ತಿಯನ್ನು ಕೊಂಡಾಡುವರು” ಎಂದು ಹೇಳಿ ಅವನನ್ನು ಸಮಾಧಾನಪಡಿಸಿ, ಲೋಕೇ। ಶ್ವರನಾದ ಆ ಭಗವಂತನು, ಅರ್ಜುನನನ್ನೂ ಏವ್ಯರಥದಮೇಲೆ ಕುಳ್ಳಿ ರಿಸಿಕೊಂಡು, ಪಶ್ಚಿಮದಿಕ್ಕಿನಕಡೆಗೆ ಹೊರಟನು. ಅದೇದಾರಿಯಲ್ಲಿ ಸಸ್ಯ ದ್ವೀಪಗಳನ್ನೂ, ಆ ದ್ವೀಪಗಳಲ್ಲಿರತಕ್ಕ ಸಪ್ತಕುಲಪತಗಳನ್ನೂ, ಸಪ್ತ ಸಮುದ್ರಗಳನ್ನೂ ದಾಟಿ, ಅದರಿಂದಾಚೆಗೆ ಚಕ್ರವಾಳಪಕ್ವತವನ್ನೂ ಅತಿ ಕ್ರಮಿಸಿ, ಅದರ ಹೊರಗಿನ ಮಹಾಂಧಕಾರವನ್ನು ಪ್ರವೇಶಿಸಿದನು. ಅಲ್ಲಿ ಶೈಶ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕಗಳೆಂಬ ಅವನ ರಥಾಶ್ಚಗಳು, ಆ ಅಂಧಕಾರದಲ್ಲಿ ಕಣ್ಣು ತಿಳಿಯದೆ ತತ್ತಳಿಸುತ್ತಿದ್ದುವು.ಹೀಗೆ ಕುದುರೆಗಳು ಕತ್ತಲೆಯಲ್ಲಿ ದಾರಿತಪ್ಪಿ ಹೋಗುತ್ತಿರುವುದನ್ನು ನೋಡಿ, ಮಹಾಯೋಗೇ ಶ್ವರನಾದ ಶ್ರೀಕೃಷ್ಣನು, ಕೋಟೆಸೂರತೇಜಸ್ಸಿನಿಂದ ಬೆಳಗುತ್ತಿರುವ