ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯೪ ಶ್ರೀಮದ್ಭಾಗವತವು [ಅಧ್ಯಾ. ೮೯. ಶಕ್ತಿಗಳೂ, ಅವನನ್ನು ಸೇವಿಸುತ್ತಿರುವುವು, ಬ್ರಹ್ಮಾದಿಗಳಿಗೂ ಪ್ರಭು ವಾಗಿಯೂ, ತನಗಿಂತಲೂ ಅಭಿನ್ನ ನಾಗಿಯೂ ಇರುವ ಆ ಭಗವಂತನನ್ನು ನೋಡಿ ಕೃಷ್ಣನು ವಂದನಮಾಡಿದನು.ಅರ್ಜುನನೂ ಹಾಗೆಯೇ ಭಕ್ತಿಯಿಂ ದ ಅವನನ್ನು ನಮಸ್ಕರಿಸಿದನು.ಆದರೆ ಆ ಸ್ವರೂಪವನ್ನು ಕಂಡಾಗ ಅರ್ಜು ವನಿಗೆ ದೇಹವೆಲ್ಲವೂ ಭಯದಿಂದ ನಡುಗುತ್ತಿತ್ತು. ಆಗ ಶೇಷಶಾಯಿ ಯಾದ ಆ ಪರಮಪುರುಷನು ತನ್ನ ಮುಂದೆ ಬದ್ಧಾಂಜಲಿಗಳಾಗಿ ನಿಂತಿದ್ದ ಕೃಷ್ಣಾರ್ಜುನರಿಬ್ಬರನ್ನೂ ನೋಡಿ, ಗಂಭೀರವಾಕ್ಯದಿಂದ ಮಂದಹಾಸ ಪೂರೈಕವಾಗಿ ಹೀಗೆಂದು ಹೇಳುವರು. « ಓ ! ಕೃಷ್ಣಾರ್ಜುನರೆ ! ನಿಮ್ಮಿ ಬ್ಬರನ್ನೂ ಇಲ್ಲಿಗೆ ಕರೆತರಿಸಿ ನೋಡಬೇಕೆಂಬ ಉದ್ದೇಶದಿಂದಲೇ ನಾನು ಆ ಬ್ರಾಹ್ಮಣನ ಶಿಶುಗಳನ್ನು ಇಲ್ಲಿಗೆ ತಂದಿಟ್ಟೆನು. ನೀವಿಬ್ಬರೂ ಭೂಮಿಯಲ್ಲಿ. ಧರ್ಮರಕ್ಷಣಾರ್ಥವಾಗಿ* ನನ್ನ ಕಳೆಯಿಂದ ಅವತರಿಸಿರುವಿರಿ!ಭೂಮಿಗೆ ಭಾರ ಭೂತರಾದ ದಾನವರನ್ನು ಸಂಹರಿಸಿ, ಶೀಘ್ರದಲ್ಲಿಯೇ ನೀವು ನನ್ನ ಕಡೆಗೆ ಹಿಂತಿರುಗತಕ್ಕವರು.ನೀವೇ ಪೂತ್ವದಲ್ಲಿ ನರನಾರಾಯಣರೆಂಬ ಋಷಿಶ್ರೇಷ್ಠ ರಾಗಿದ್ದವರು. ನೀವು ಪೂರ್ಣ ಕಾಮರಾಗಿದ್ದರೂ ಜಗದ್ರಕ್ಷಣಾರ್ಥವಾಗಿ ಈ ಲೋಕಸಂಗ್ರಹವೆಂಬ ಧರ್ಮಗಳನ್ನು ನಡೆಸುತ್ತಿರುವಿರಿ” ಎಂದನು. ಕೃಷ್ಣಾರ್ಜುನರಿಬ್ಬರೂ, ಆ ಭಗವಂತನ ಆಜ್ಞೆಯನ್ನು ಅಂಗೀಕರಿಸಿ, ಆತ ನಿಗೆ ವಂದಿಸಿ, ಅವನ ಅನುಮತಿಯಿಂದ ಅಲ್ಲಿದ್ದ ಬ್ರಾಹ್ಮಣಶಿಶುಗಳೆಲ್ಲವನ್ನೂ ತಮ್ಮೊಡನೆ ಕರೆದುಕೊಂಡು, ಸಂತೋಷದಿಂದ ತಮ್ಮ ಪಟ್ಟಣಕ್ಕೆ ಹಿಂತಿ ರುಗಿದರು. ಮೊದಲು ಹುಟ್ಟಿದ ಆಕಾರದಲ್ಲಿಯೇ ಇದ್ದ ಆ ಶಿಶುಗಳೆಲ್ಲವನ್ನೂ ಆ ಬ್ರಾಹ್ಮಣನಿಗೆ ಒಪ್ಪಿಸಿದರು. ಆಗ ಅರ್ಜುನನ ಆಶ್ರವನ್ನು ಕೇಳಬೇಕೆ ? ತಾನು ವಿಷ್ಣು ಸಾನ್ನಿಧ್ಯವನ್ನು ಕಣ್ಣಾರೆ ನೋಡುವಂತಾದುದು ತನ್ನ ಪರಮಭಾಗ್ಯವೆಂದು ವಿಸ್ಮಿತನಾಗಿ, ಲೋಕದಲ್ಲಿ ಮನುಷ್ಯನಿಗೆ ಯಾವು ದಾದರೂ ಒಂದು ವಿಧವಾದ ಪುರುಷಾರ್ಥವು ಲಭಿಸುವಪಕ್ಷದಲ್ಲಿ ಅದು ಶ್ರೀಕೃಷ್ಣನ ಕೃಪೆಯಿಂದಲೇ ಲಭಿಸಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿ

  • ಇಲ್ಲಿ ಭಗವಂತನ ಕಳೆಯಿಂದವತರಿಸಿದವನು ಅರ್ಜುನನೊಬ್ಬನೇ, ಕೃಷ್ಣ ನು ಆ ಭಗವಂತನ ಪೂರ್ಣಾವತಾರವೆಂದು ಗ್ರಾಹ್ಯವು.