ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೬ ಶ್ರೀಮದ್ಭಾಗವತವು [ಅಧ್ಯಾ, fo.. ತಾನೊಬ್ಬನೇ ಪ್ರಿಯನಾಗಿ, ಅಷ್ಟೇ ಆಕೃತಿಗಳನ್ನು ಧರಿಸಿ, ಸಕಲಸಂಪ ತಮ್ಮಗಳಾದ ಅವರ ಮನೆಗಳಲ್ಲಿ ರಮಿಸುತಿದ್ದನು. ತಾವರೆ, ನೈದಿಲೆ ಮೊದಲಾದ ಪುಷ್ಪಗಳ ಪರಾಗದಿಂದ ಸುವಾಸಿತವಾಗಿಯೂ, ಹಂಸಕಾ ರಂಡವಾದಿಪಕ್ಷಿಗಳ ಧ್ವನಿಯಿಂದ ಮನೋಹರವಾಗಿಯೂ ಇರುವ ನಡಿಗ ಳಲ್ಲಿ, ಆಗಾಗ ಆ ಸ್ತ್ರೀಯರೊಡನೆ ಜಲಕ್ರೀಡೆಯನ್ನಾಡುತ್ತ, ಆ ಸ್ತ್ರೀಯರ ಸ್ವನಕುಂಕುಮದಿಂದ ಲೇಪಿತಗಾತ್ರನಾಗಿ, ನಗುವವರನ್ನು ನೋಡಿ ನಗು ವುದು, ನೀರೆರಚಿದವರಮೇಲೆ ನೀರೆರಚುವುದು, ಈ ವಿಧವಾದ ವಿನೋದಗ ಳಿಂದ, ಯಕ್ಷಸಿಯರೊಡನೆ ಯಕ್ಷರಾಜನಾದ ಕುಬೇರನಂತೆ, ಅವರೊಡನೆ ವಿಹರಿಸುತ್ತಿದ್ದನು. ಶ್ರೀ ಕೃಷ್ಣನ ಜಲಕ್ರೀಡಾವಿನೋದದಲ್ಲಿ ಆಕಾಶ ದಲ್ಲಿ ಗಂಧರೂ,!ಭೂಮಿಯಲ್ಲಿ, ಸೂತ ಮಾಗಧ ವಂಹಿಗಳೂ, ಮೃದಂಗ, ಪಣವ, ಆನಕ, ವೀಣೆ,ಮೊದಲಾದ ವಾದ್ಯಗಳೊಡನೆ ಆತನ ಗುಣಕೀರ್ತನೆ ಗಳನ್ನು ಮಾಡುತ್ತಿದ್ದರು. ಈ ಜಲಕ್ರೀಡೆಯಲ್ಲಿ, ಆ ಸ್ತ್ರೀಯರ ದುಕೂಲಗ ಬೆಲ್ಲವೂ ನೆನೆದು, ಅವರ ಸ್ವನಜಫನಾದಿಗಳು ವ್ಯಕ್ತವಾಗುತ್ತಿರುವುವು. ಅವರು ಎತ್ತಿ ಕಟ್ಟಿದ ತುರುಬಿನಿಂದ ಹೂಗಳು ಉಏರುತ್ತಿರುವುವು, ಈ ವೇಷದಿಂದ ಕೃಷ್ಣನಿಗೆ ತಮ್ಮಲ್ಲಿ ಮತ್ತಷ್ಟು ಮೋಹವನ್ನು ಹೆಚ್ಚಿಸುವಂತೆ, ಅವನಮೇಲೆ ನೀರನ್ನು ಚೆಲ್ಲಿ, ತಿರುಗಿ ಅವನು ತಮ್ಮ ಮೇಲೆ ಪ್ರತಿಯಾಗಿ ನೀರೆರೆಚುವುದಕ್ಕೆ ಅವಕಾಶವಿಲ್ಲದಂತೆ ಥಟ್ಟನೆ ಮುಂದೆ ಹೋಗಿ, “ವನನ್ನು ದೃಢವಾಗಿ ಆಲಿಂಗಿಸಿಕೊಳ್ಳುವರು. ಆ ಕೃಷ್ಣನ ದೇಹಾಲಿಂಗನದಿಂದುಂ ಟಾದ ಸಂತೋಷದಿಂದ ಮೈ ಮರೆತು ನಗುಮುಖದೊಡನೆ ನಿಲ್ಲುವರು. ಹಾಗೆಯೇ ಕೃಷ್ಣನೂಕೂಡ, 'ಆ ಸ್ತ್ರೀಯರ ಸ್ವನಕುಂಕುಮದಿಂದ ಲೇಪಿತ ಗಾತ್ರನಾಗಿ, ಆ ವಿನೋದಸಂಭ್ರಮದಲ್ಲಿ, ಕದಲಿದ ಮುಂಗುರುಳುಗಳೊ ಡನೆ, ಆಗಾಗ ಆವರಮೇಲೆ ನೀರೆರೆಚುತ್ಯ,ಅವರು ತನ್ನ ಮೇಲೆ ಚೆಲ್ಲಿದ ನೀರಿಗೆ ಸಂತೋಷದಿಂದ ಮೈಯೊಡ್ಡುತ್ತ, ಹೆಣ್ಣಾನೆಗಳೊಡನೆ ಆಡುವ ಮದಗಜ ದಂತೆ ಕಾಣುತ್ತಿದ್ದನು, ಹೀಗೆ ಜಲಕ್ರೀಡೆಯೆಲ್ಲವೂ ಮುಗಿದಮೇಲೆ ನಟರು, ನರ್ತಕರು, ಮೊದಲಾಗಿ ಗೀತವಾದ್ಯಗಳಿಂದ ಉಪಜೀವಿಸತಕ್ಕವರೆಲ್ಲರಿಗೂ, ಕೃಷ್ಣನೂ, ಆ ಕೃಷ್ಣನ ಪತ್ನಿ ಯರೂ ನಾನಾವಿಧಗಳಾದ ವಸ್ತ್ರಾಲಂಕಾ