ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SATS ಶ್ರೀಮದ್ಭಾಗವತನ (ಅಞ್ಞಾ, fo. ತಿರುವೆಯಲ್ಲಾ ! ಈಗ ನಾವು ಅನುಭವಿಸುತ್ತಿರುವ ದುಸ್ಸಹವಾದ ಅವಸ್ಥೆ ಯೇ ನಿನಗೂ ಹಿಡಿಯಿತೇನು ? ಹಾಗೆಯೇ ಇರಬೇಕು ! ಆ ಕೃಷ್ಣನು ಒಂದೆ ರಡಾವರ್ತಿ ನಮ್ಮನ್ನು ಆಲಿಂಗಿಸಿಕೊಂಡ ನವರಿಂದ ನಮ್ಮ ಪ್ರನಾಗ್ರದ ಕುಂಕುಮರೇಖೆಯನ್ನು ಅಪಹರಿಸಿಕೊಂಡು ಹೋದಂತೆ, ನಿನ್ನಲ್ಲಿದ್ದ ಅಮೂ ಲ್ಯಗಳಾದ ಕೌಸ್ತುಭಮಣಿ,ಲಕ್ಷ್ಮಿ,ಮುಂತಾದಲಾಂಛನಗಳನ್ನೆಲ್ಲಾ ಕಿತ್ತು ಕೊಂಡು ಓಡಿಹೋಗಿರುವನು. ಆದುದರಿಂದ ನಮ್ಮ ಅವಸ್ಥೆಯೇ ನಿನಗೂ ಉಂಟಾಗಿರಬೇಕು. - ಬೇರೊಬ್ಬಳು «ಓ ! ಚಂದ್ರಾ! ನಿನಗೆ ಪ್ರಬಲವಾದ ಕ್ಷಯರೋ ಗವು ಹಿಡಿದು ದಿನದಿನಕ್ಕೆ ಕುಂದುತ್ತಿರುವೆ! ಹಿಂದಿನಂತೆ ಅಂಧಕಾರವನ್ನಡ ಗಿಸುವ ಶಕ್ತಿಯೂ ನಿನ್ನಲ್ಲಿ ತಗ್ಗು ಬರುತ್ತಿದೆ. ಹೀಗೆ ನೀನು ದಿನದಿನಕ್ಕೆ ಕ್ಷೀಣಿಸುವ ಕಾರಣವೇನು ? ಒಂದುವೇಳೆ ನಮ್ಮಂತೆಯೇ ನೀನೂ ಆ ಶ್ರೀ ಕೃಷ್ಣನ ಬಾಯಿಂದ ಹೊರಟ ಮುದ್ದು ಮಾತುಗಳನ್ನು ಸ್ಮರಿಸಿಕೊಂಡು ಅವನ ಚಿಂತೆಯಿಂದಲೇ ಕೊರಗುತ್ತಿರುವೆಯೇನು ? ಹಾಗೆಯೇ ಇರಬೇಕು” ಎಂದಳು. - ಮತ್ತೊಬ್ಬಳು : ಓ ! ಮಲಯಮಾರುತಾ ! ನಿನಗೆ ನಾನು ಯಾವ ಆಪ ಕಾರವನ್ನು ಮಾಡಿರುವೆನು' ಆ ಶ್ರೀ ಕೃಷ್ಣನ ಕಟಾಕ್ಷವೀಕ್ಷಣವೆಂಬ ಬಾಣದಿಂದ ಮೊದಲೇ ಭೇದಿಸಿ ಹೋಗಿರುವ ನಮ್ಮ ಹೃದಯವನ್ನು ನೀನು ಮತ್ತಷ್ಟು ನೋಯಿಸುತ್ತಿರುವೆಯಲ್ಲಾ !ನಿರಪರಾಧಿನಿಯಾದ ನನ್ನನ್ನು ಹೀಗೆ ಪೀಡಿಸಬಹುದೆ ?” ಎಂದಳು. ಕೃಷ್ಣನನ್ನು ಹುಡುಕುತ್ತ ಬಂದವಳೊಬ್ಬಳು ಹೂತೋಟದಲ್ಲಿ ಅದೇಚಿಂತೆಯಿಂದ ನಿಂತಿದ್ದ ಮತ್ತೊಬ್ಬಳನ್ನು ನೋಡಿ” “ಓ ಸಖೀ! ಏನು! ಇಲ್ಲಿ ಬಹಳಚಮತ್ಕಾರವಾದ ಶ್ಲೇಷಾರ್ಥವುಳ್ಳ ಮೂಲಶ್ಲೋಕವಿದೆ. ಮುಗ್ಧ! ಧ್ಯಾಯಸಿ ಕಿಂ? ಗೃಹಾಣ ಪರತಃ ಕುಂದಂ ವಿಕಾಸೊನ್ನು ಖಂ! ಕಿಂ ಕುಂದೇನ ಮಮಾಮುನಾ? ಸುಮನಸಃ ಕೀದೃಗ್ವಿಜ್ಞಾಖೇ ಪ್ರಿಯಾ ? ಶನ್ನಾಗಂ ಮೃಗಯೇ ಸಖಿ : ಶ್ರುತಿಶಿರೋಭೂಷಾ ವಿಶೇಷಾಯಿತಂ! ಗಾವೋSಸ್ಮಜ್ಜಿತಸೂನೆಮಾಸತ ತದಾಮೋದಪ್ರರ್ಕನ್ನು ಖಾಃ ||