ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೩ ಅಧ್ಯಾ, ೫೨.] ದಶಮಸ್ಕಂಧವು. ದು, ಓ ಪುರುಷೋತ್ತಮಾ ! ಲೋಕಾತಿಶಯವಾದ ನಿನ್ನ ಮಹಿಮೆಯೆಲ್ಲಿ? ಯಾವ ವಿಷಯದಲ್ಲಿಯೂ ನಿನಗೆ ಆನುರೂಪಳಲ್ಲದ ನಾನಿಲ್ಲಿ ! ಹಾಗಿದ್ದರೂ ನಿನ್ನ ಗುಣಶ್ರವಣವು ನನ್ನ ಮನಸ್ಸನ್ನು ಆಕರ್ಷಿಸಿಬಿಟ್ಟಿರುವುದು. «ಕುಲಕಯರಿಗೆ ಇಷ್ಟು ಧೈಯ್ಯವೆ” ಎಂದು ನೀನು ಆಕ್ಷೇಪಿಸಬಾ ರದು, ಓ! ಮುಕುಂದಾ!ಕುಲ, ರೂಪ, ತೀಲ, ವಿದ್ಯೆ, ವಯಸ್ಸು, ಸಂಪತ್ತು, ಮುಂತಾದ ಸಮಸ್ತವಿಷಯಗಳಲ್ಲಿಯೂ ನಿನಗೆ ನೀನೇ ಸಾಟಿಯೇಹೊರತು. ಮತ್ತೊಬ್ಬರು ನಿನಗೆ ಸಮಾನರಲ್ಲ! ಓ ಪುರುಷಸಿಂಹಾ! ಸಯ್ಯಲೋಕಮನೋ -ಹರನಾದ ಆಸಿನ್ನ ವಿಷಯವನ್ನು ಕೇಳಿದಮೇಲೆ, ಎಷ್ಮೆ ಗುಣವತಿಯಾಗಿ ದ್ದರೂ, ಎಷ್ಟೇ ದೊಡ್ಡ ಕುಲದಲ್ಲಿ ಹುಟ್ಟಿದವಳಾಗಿದ್ದರೂ, ನಿನ್ನನ್ನು ಬಯಸದೆ ಬಿಡಲಾರಳು, ಹೀಗಿರುವಾಗ ನಾನು ಎಷ್ಟು ಮಾತ್ರದವಳು?” ಇದು ನನ್ನ ತಪ್ಪಲ್ಲ! - ಓ ವಿಭೂ ! ನಾನು ನಿನ್ನನ್ನೇ ಪತಿಯನ್ನಾಗಿ ವರಿಸಿರುವೆನು, ನನ್ನ ಆ ತ್ಮ-ನ್ನೇ ನಿನಗೆ ಅರ್ಪಿಸಿರುವೆನು, ಕೃಷ್ಣಾ! ಈಗ ನೀನಾಗಿಯೇ ಬಂದು ನನ್ನನ್ನು ಕೈಹಿಡಿಯಬೇಕು, ಹಾಗಿಲ್ಲದೆ ನೀನು ವಿಳಂಬಮಾಡಿದಪಕ್ಷದಲ್ಲಿ, ಸಿಂಹಕ್ಕೆ ಸೇರಬೇಕಾದ ಭಾಗವನ್ನು ನರಿಯು ಅಪಹರಿಸಿಕೊಂಡುಹೋಗು ವಂತೆ, ನಿನ್ನ ಕೈಗೆ ಸೇರಬೇಕಾದ ನನ್ನನ್ನು ನೀಚನಾದ ಶಿಶುಪಾಲನು ಬಂದು ಮುಟ್ಟಿಬಿಡುವನು. ಪೂರದಲ್ಲಿ ನಾನು ವಾಪೀ, ಕೋಪ, ತಟಾಕ್ ಸತಾದಿಧರ್ಮಕಾರಗಳನ್ನು ಮಾಡಿದವಳಾಗಿದ್ದರೆ, ಏನಾದರೂ ಯಾಗಾ ದಿಕರ್ಮಗಳನ್ನು ನಡೆಸಿದ್ದರೆ, ಸತ್ಪಾತ್ರಗಳಲ್ಲಿ ದಾನವನ್ನು ಮಾಡಿದ್ದರೆ, ತೀರ್ಥಸ್ನಾ ನಾದಿನಿಯಮಗಳನ್ನು ನಡೆಸಿದ್ದರೆ, ಕೃಚ್ಛಾವ್ರತಗಳನ್ನು ಅನುತ್ತಿಸಿದ್ದರೆ, ದೇವಬ್ರಾಹ್ಮಣರನ್ನೂ, ಗುರುಗಳನ್ನೂ ಪೂಜಿಸಿದರೆ, ಇತರಭೂತಗಳಿಗೆ ಹಿತವನ್ನುಂಟುಮಾಡಿದ್ದರೆ, ಇವುಗಳಿಂದ ಭಗವಂತನು ಸಂತುಷ್ಟನಾಗಿ, ನೀನೇ ಬಂದು ನನ್ನ ಕೈಯನ್ನು ಹಿಡಿಯುವಂತೆ ಅನುಗ್ರಹಿ ಸಲಿ ! ಶಿಶುಪಾಲನಾಗಲಿ, ಬೇರೊಬ್ಬರಾಗಲಿ, ನನ್ನನ್ನು ಬಂದು ಮುಟ್ಟ, ದಂತೆ ಆ ಪುಣ್ಯವು ನನ್ನನ್ನು ಕಾಪಾಡಲಿ.