ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ ೫೩.] ದಶಮಸ್ಕಂಧವು. ೨೧೨೧ ತೂಗಾಡುತ್ತಿರುವ ಕುಂಡಲಗಳು ! ನಿತಂಬದಮೇಲೆ ಫುಲಫಲನೆ ಧ್ವನಿ ಮಾಡುತ್ತಿರುವ ಒಡ್ಯಾಣದ ಗೆಜ್ಜೆಗಳು! ಯೌವನಾತಿಶಯವನ್ನು ಸೂಚಿ ಸುವಂತೆ ಉಬ್ಬಿದ ಸ್ತನಗಳು, ಭಗವನ್ನಾಯೆಯೋ ಎಂಬಂತೆ ಲೋಕಮೋ ಹನವಾದ ಸುಂದರಾಕೃತಿ! ಶ್ಯಾಮಲವರ್ಣವಾದ ಮೈ'ಮುಂಗುರುಳಿನ ಕಾಂ ತಿಯನ್ನು ಹೋಲುತ್ತಿರುವ ನೇತ್ರಕಾಂತಿ! ಮುಖದಲ್ಲಿ ಮುಗಳ್ಳಗೆತೊಂಡೆಹ ಣ್ಣಿನಂತಿರುವ ತುಟಿಯ ಕಾಂತಿಯಿಂದ ಕೆಂಪಗೆ ತೋರುತ್ತಿರುವ ಹಲ್ಲುಗಳು. ಕಲಹಂಸದಂತೆ ಮೃದುವಾದ ನಡೆ! ಫುಲ್ಪಲನೆ ಶಬ್ಬಿಸುತ್ತಿರುವ ಕಾಲಂದು ಗೆಗಳು, ಇಂತಹ ದಿವ್ಯಸೌಂದರದಿಂದ ಬರುತ್ತಿರುವ ಆ ರುಕ್ಷ್ಮಿಣಿಯನ್ನು ನೋಡಿದೊಡನೆ, ಅಲ್ಲಿ ಬಂದಿದ್ದ ವೀರಕ್ಷತ್ರಿಯರ ಹೃದಯವೆಲ್ಲವೂ ಕದಲು ವಂತಾಯಿತು. ಎಲ್ಲರೂ ಆಕೆಯ ಸೌಂದಯ್ಯಕ್ಕೆ ಮೋಹಿತರಾಗಿದ್ದರು, ಆಕೆ ಯ ಮಂದಹಾಸದ ಸೊಗಸನ್ನೂ , ಲಜ್ಞಾವಿಶಿಷ್ಟವಾದ ನೋಟವನ್ನೂ ನೋಡಿದೊಡನೆ, ಅಲ್ಲಿದ್ದ ರಾಜರೆಲ್ಲರೂ ಮೈ ಮರೆತು, ತಮ್ಮ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳು ಜಾರಿಬಿದ್ದುದನ್ನೂ ತಿಳಿಯದೆ, ತಾವು ಏುದ್ದ ಆನೆಕುದುರೆ ಮೊದಲಾದ ವಾಹನಗಳಿಂದ ಕೆಳಕ್ಕೆ ಬಿಳುತಿದ್ದರು. ಹೀಗೆ ರುಶ್ಮಿಣಿದೇವಿ ಯು, ಕುಲದೇವಯಾತ್ರೆಯೆಂಬ ನೆಪದಿಂದ ಶ್ರೀಕೃಷ್ಣನಿಗೆ ತನ್ನ ಲಾವಣ್ಯ ನನ್ನ ರ್ಪಿಸುತ್ತ, ಕೃಷ್ಣನು ಯಾವಾಗ ಬರುವನೋ, ಎಂದು ಮನಸ್ಸಿನಲ್ಲಿ ಹಂಬಲಿಸುತ್ತ, ಮೆಲ್ಲಮೆಲ್ಲಗೆ ಹೆಜ್ಜೆಯನ್ನಿಟ್ಟುಕೊಂಡು ಬರುತಿದ್ದಳು, ಆಗಾ ಗ ತನ್ನ ಎಡಗೈಯ ಉಗುರುಗಳಿಂದ ಮುಂಗುರುಳನ್ನು ತಿದ್ದಿಕೊಳ್ಳುವಳು. ಆಗಾಗ ತನ್ನ ಕಡೆಕಣ್ಣಿನಿಂದ ಮುಂದಿದ್ದ ರಾಜಮಂಡಲಿಯನ್ನು ನೋಡಿ, ಲಜ್ಜೆಯಿಂದ ಥಟ್ಟನೆ ತಲೆಯನ್ನು ತಗ್ಗಿಸುವಳು. ಹೀಗೆ ರುಕ್ಕಿಣಿಯು ಆ ದೇ ವಾಲಯದ್ವಾರದಿಂದ ಹೊರಗೆ ಬಂದು, ರಥವನ್ನೇರುವುದಕ್ಕೆ ಸಿದ್ಧವಾಗು ವಷ್ಟರಲ್ಲಿ, ಅಕಸ್ಮಾತ್ತಾಗಿ ಶ್ರೀಕೃಷ್ಣನು ಅವಳ ಸಮೀಪಕ್ಕೆ ಬಂದು, ಅಲ್ಲಿ ತನ್ನ ಶತ್ರರಾಜರೆಲ್ಲರೂ ನೋಡುತ್ತಿರುವಹಾಗೆಯೇ, ರುಕ್ಷ್ಮಿಣಿಯನ್ನು ಕೈ ಹಿಡಿದು, ಗರುಡಧ್ವಜದಿಂದ ಅಲಂಕೃತವಾದ ತನ್ನ ರಥದಮೇಲೆ ಏರಿಸಿಕೊಂ ಡನು. ಹೀಗೆ ಕೃಷ್ಣನು, ಅಲ್ಲಿದ್ದ ವೀರಕ್ಷತ್ರಿಯರೆಲ್ಲರೂ ನೋಡುತ್ತಿರುವಾ ಗಲೇ, ಯಾರನ್ನೂ ಲಕ್ಷ್ಯಮಾಡದೆ, ನರಿಗಳ ಗುಂಪಿನಲ್ಲಿರುವ ಆಹಾರವನ್ನು ಆ ೨