ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೩ ಅಧ್ಯಾ, ೫೪.] ದಶಮಸ್ಕಂಧವು. ಡುವೆ.” ಎಂದು ಧೈಲ್ಯವನ್ನು ಹೇಳಿದನು. ಇಷ್ಟರಲ್ಲಿ ಇತ್ತಲಾಗಿ, ಬಲ ರಾಮ, ಗದ, ಮುಂತಾದ ಯಾದವವೀರರೆಲ್ಲರೂ, ಶತ್ರುಗಳು ತಮ್ಮ ಮೇಲೆ ಬಿದ್ದು ಬರುತ್ತಿರುವುದನ್ನು ನೋಡಿ ಸಹಿಸಲಾರದೆ, ಬಾಣಗಳನ್ನು ಪ್ರಯೋಗಿ ಸುತ್ತ, ಅವರ ಆನೆಗಳನ್ನೂ, ಕುದುರೆಗಳನ್ನೂ ,ರಥಗಳನ್ನೂ ಭೇದಿಸುತ್ತಬಂ ದರು. ಕ್ರಮಕ್ರಮವಾಗಿ ಶತ್ರು ಪಕ್ಷದಲ್ಲಿದ್ದ ಅನೇಕರಥಿಕರೂ, ಅಶ್ವಸೈನಿ ಕರೂ, ಆನೆಯಮೇಲೆ ಕುಳಿತು ಯುದ್ಧಮಾಡುತಿದ್ದವರೂ, ಯಾದವ ವೀರರ ಬಾಣಗಳಿಂದ ಭೇದಿಸಲ್ಪಟ್ಟು ಕೆಳಗೆ ಬಿದ್ದರು. ಕಿರೀಟಕುಂಡಲಗಳಿಂ ದಲೂ, ತಲೆಪಾಗುಗಳಿಂದಲೂ ಕೂಡಿದ ಅನೇಕವೀರರ ಶಿರಸ್ಸುಗಳೂ ಅಲ್ಲಲ್ಲಿ ಕತ್ತಿ, ಗದೆ, ಬಿಲ್ಲು, ಮೊದಲಾದ ಆಯುಧಗಳೊಡನೆ ತೋಳು ಗಳೂ ಕತ್ತರಿಸಿ ಬಿದ್ದಿದ್ದುವು, ತೊಡೆ, ಕೈ, ಕಾಲು, ಮುಂತಾದ ಅವ ಯವಗಳೆಲ್ಲವೂ ಬೇರೆಬೇರೆಯಾಗಿ ಬಿದ್ದುವು, ಅಲ್ಲಲ್ಲಿ ಕುದುರೆಗಳು, ಹೇ ಸರಕತ್ತೆಗಳು, ಆನೆಗಳು, ಒಂಟೆಗಳು, ಕತೆಗಳು, ಕಾಲಾಳುಗಳು, ಮುಂ ತಾದ ಸೈನ್ಯಗಳ ಶಿರಸ್ಸುಗಳೆಲ್ಲವೂ ಕತ್ತರಿಸಿಬಿದ್ದುವು. ಹೀಗೆ ಸತ್ವತೋ ಮುಖವಾಗಿ ತಮ್ಮ ಸೈನ್ಯವು ಯಾದವರಿಂದ ಹತವಾಗುತ್ತಿರುವುದನ್ನು ನೋಡಿ, ಜರಾಸಂಧನೇ ಮೊದಲಾದ ರಾಜರೆಲ್ಲರೂ ಮುಂದೆ ಯುದ್ಧ ಮಾಡಲಾರದೆ, ಹಿಂತಿರುಗಿ ಪಲಾಯನಮಾಡಿದರು. ಇವರೆಲ್ಲರೂ ಗುಂ ಪಾಗಿ ಕಲೆತು, ಅತ್ತಲಾಗಿ ಆಶಾಭಂಗದಿಂದ ಮನಸ್ಸಿನಲ್ಲಿ ಉತ್ಸಾಹವಿಲ್ಲದೆ ಬಾಡಿದ ಮುಖದಿಂದಿದ್ದ ಶಿಶುಪಾಲನಬಳಿಗೆ ಬಂದು ಓ ಪುರುಷಶಾ ರ್ದೂಲಾ ! ಮನಸ್ಸಿನ ವಿಷಾದವನ್ನು ಬಿಟ್ಟುಬಿಡು ! ಈಗ ನಾವೆಲ್ಲರೂ ಪರಾಜಿತರಾಗಿದ್ದರೂ, ಈ ಜಯಪರಾಜಯಗಳು ಯಾರಿಗೂ ಸ್ಥಿರವಲ್ಲ. ಲೋಕದಲ್ಲಿ ಪ್ರಾಣಿಗಳಿಗೆ ಪ್ರಿಯವಾಗಲಿ, ಅಪ್ರಿಯವಾಗಲಿ ಶಾಶ್ವತವಲ್ಲ. ಸುಖದುಃಖಗಳು ಚಕ್ರದಂತೆ ತಿರುಗಿತಿರುಗಿ ಬರುತ್ತಿರುವುವು. ಆದುದರಿಂದ ಈಗ ನಮಗುಂಟಾದ ಅಪಜಯಕ್ಕಾಗಿ ದುಃಖಿಸಬಾರದು, ಬೊಂಬೆಯಾ ಟಿದವರು, ಮರದ ಬೊಂಬೆಯನ್ನು ತಮ್ಮ ಇಷ್ಟಾನುಸಾರವಾಗಿ ಆಡಿಸು ವಂತೆ, ಈ ಜಗತ್ತೆಲ್ಲವೂ ಆ ಪರಮೇಶ್ವರನಿಗೆ ಅಧೀನವಾಗಿ, ಸುಖದುಃಖಗಳ ನ್ನು ಅನುಭವಿಸುತ್ತಿರುವುದು, ಅದಕ್ಕೆ ತಕ್ಕ ಹಾಗೆಯೇ ಕರ್ಮಗಳಲ್ಲಿ ತೊಳ